ಖ್ಯಾತ ನಟಿಗಾಗಿ ಪೊಲೀಸರ ಹುಡುಕಾಟ; ಬಂಧನ ಭೀತಿಯಲ್ಲಿ ಕಸ್ತೂರಿ ಶಂಕರ್

ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿಗೆ ಈಗ ಬಂಧನ ಭೀತಿ ಶುರುವಾಗಿದೆ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಕಸ್ತೂರಿ ಶಂಕರ್ ತಾವು ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿದ್ದು ಇದೀಗ ಜೈಲು ಪಾಲಾಗುವ ಭಯದಲ್ಲಿದ್ದಾರೆ. ಚೆನ್ನೈನಲ್ಲಿ ಅವರ ವಿರುದ್ಧ ದೂರು ದಾಖಲಾಗಿದ್ದು, ಸಮನ್ಸ್ ಕೊಟ್ಟಿರುವ ಪೊಲೀಸರು ಇದೀಗ ನಟಿಗಾಗಿ ಹುಡುಕಾಡುತ್ತಿದ್ದಾರೆ.

ತೆಲುಗು ಜನರ ಬಗ್ಗೆ ನೀಡಿರುವ ಹೇಳಿಕೆ ಇದೀಗ ಕಸ್ತೂರಿ ಶಂಕರ್ ಅವರಿಗೆ ಸಂಕಷ್ಟ ತಂದೊಡ್ಡಿದೆ. ತೆಲುಗು ಭಾಷಿಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇಂಡಿಯಾ ತೆಲುಗು ಅಸೋಸಿಯೇಷನ್​​ ನಟಿ ಕಸ್ತೂರಿ ವಿರುದ್ಧ ಸೆಕ್ಷನ್ 192, 196(1ಎ)3 53,353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರು ಸ್ವೀಕರಿಸುವ ಪೊಲೀಸರು ಕಸ್ತೂರಿ ಶಂಕರ್‍‌ರನ್ನು ತನಿಖೆ ಮಾಡಲು ಠಾಣೆಗೆ ಕರೆಸಲು ಮುಂದಾಗಿದ್ದಾರೆ.

Police Searching for Kasthuri Shankar for Arrest

ತಮ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಸ್ತೂರಿ ಶಂಕರ್ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದರು. ವಿವಾದ ಮತ್ತಷ್ಟು ತೀವ್ರವಾದ ಬೆನ್ನಲ್ಲೇ ಕ್ಷಮೆ ಕೂಡ ಕೇಳಿದ್ದರು. ಆದರೂ ಅವರಿಗೆ ಸಂಕಷ್ಟ ತಪ್ಪಿಲ್ಲ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಶಂಕರ್ ಹೇಳಿಗೆ ತೀವ್ರ ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+