Payal Rajput: ಕಾಂತಾರ ಸಿನಿಮಾದಲ್ಲಿ ಅವಕಾಶ ಕೊಡಿ: ರಿಷಬ್‌ ಶೆಟ್ಟಿಗೆ ತೆಲುಗು ನಟಿ ಮನವಿ

ಕಾಂತಾರ : ಅಧ್ಯಾಯ 1 ಸದ್ಯ ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಒಂದು. ಚಿತ್ರದ ಫಸ್ಟ್ ಲುಕ್ ನೋಡಿ ಕನ್ನಡ ಮಾತ್ರವಲ್ಲ ಭಾರತದ ಇತರೆ ಚಿತ್ರರಂಗಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂತಾರ: ದಿ ಲೆಜೆಂಡ್ ಸಿನಿಮಾ ಭಾರಿ ಯಶಸ್ಸಿನ ನಂತರ ರಿಷಭ್ ಶೆಟ್ಟಿ ಅದರ ಪ್ರೀಕ್ವೆಲ್ ಮೂಲಕ ಮತ್ತೆ ತೆರೆ ಮೇಲೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಚಿತ್ರದ ಮುಹೂರ್ತ ಮುಕ್ತಾಯವಾಗಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈಗ ತೆಲುಗಿನಲ್ಲಿ ಹಲವು ಚಿತ್ರಗಳನ್ನು ಮಾಡಿ ಹೆಸರು ಮಾಡಿರುವ ನಟಿಯೊಬ್ಬರು ಕಾಂತಾರ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ. ಮಾತ್ರವಲ್ಲದೆ ಈ ಬಗ್ಗೆ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್‌ಗೆ ಮನವಿ ಕೂಡ ಮಾಡಿಕೊಂಡಿದ್ದಾರೆ.

 Payal Rajput Requests Audition Opportunity from Rishab Shetty for Kantara: Chapter 1

ಕಾಂತಾರ ಚಿತ್ರಕ್ಕಾಗಿ ಆಡಿಷನ್

ಚಿತ್ರದ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ ಲಿಂಕ್ ಅನ್ನು ಹಂಚಿಕೊಂಡಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವುದಾಗಿ ಹೇಳಿದೆ. 30 ರಿಂದ 60 ವರ್ಷ ವಯಸ್ಸಿನ ಪುರುಷ ಮತ್ತು 18 ರಿಂದ 60 ರ ನಡುವಿನ ವಯಸ್ಸಿನ ಮಹಿಳೆಯರಿಗೆ ಆಡಿಷನ್ ಕರೆಯಲಾಗಿದೆ. ಅದಕ್ಕಾಗಿ ಲಿಂಕ್ ಕೂಡ ನೀಡಲಾಗಿದ್ದು, ನೋಂದಣಿ ಮಾಡಿಕೊಳ್ಳುವಂತೆ ಕೇಳಿದೆ. ಡಿಸೆಂಬರ್ 14ರವರೆಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗಿದೆ. ರೀಲ್ಸ್ ಮತ್ತು ಇತರ ವಿಡಿಯೋಗಳನ್ನು ಪರಿಗಣಿಸುವುದಿಲ್ಲ ಎಂದು ಚಿತ್ರ ತಂಡ ಹೇಳಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಪಾಯಲ್ ರಜಪೂತ್, "ನಾನು ಈ ಅತ್ಯುತ್ತಮ ಚಿತ್ರದ ಭಾಗವಾಗಲು ಆಸಕ್ತಿ ಹೊಂದಿದ್ದೇನೆ. ದಯವಿಟ್ಟು ನನ್ನನ್ನು ಆಡಿಷನ್‌ಗಾಗಿ ಪರಿಗಣಿಸಿ." ಎಂದು ಮನವಿ ಮಾಡಿದ್ದಾರೆ.

"ಕಾಂತಾರ ಅಧ್ಯಾಯ 1 ಗಾಗಿ ಆಡಿಷನ್‌ಗಳು ನಡೆಯುತ್ತಿವೆ ಎಂದು ನಾನು ತಿಳಿದುಕೊಂಡಿದ್ದೇನೆ. ಈ ಗೌರವಾನ್ವಿತ ಸಿನಿಮಾದ ಭಾಗವಾಗಲು ನಾನು ಉತ್ಸುಕಳಾಗಿದ್ದೇನೆ. ನನ್ನ ಇತ್ತೀಚಿನ ಚಿತ್ರ, ಮಗಳವಾರಂ, ನನ್ನ ಅಭಿನಯಕ್ಕಾಗಿ ಗಮನಾರ್ಹ ಪ್ರಶಂಸೆಯನ್ನು ಗಳಿಸಿದೆ. ನೀವು ಚಲನಚಿತ್ರವನ್ನು ವೀಕ್ಷಿಸಲು ಸ್ವಲ್ಪ ಸಮಯವನ್ನು ಮೀಸಲಿಟ್ಟರೆ ನಾನು ಪ್ರಶಂಸಿಸುತ್ತೇನೆ. ಈ ಯೋಜನೆಗಾಗಿ ಆಡಿಷನ್ ಪ್ರಕ್ರಿಯೆಯ ಕುರಿತು ದಯವಿಟ್ಟು ಸಲಹೆ ನೀಡಿ." ಎಂದು ಟ್ವೀಟ್ ಮಾಡಿದ್ದಾರೆ.

ತೆಲುಗಿನಲ್ಲಿ ಜನಪ್ರಿಯ ನಟಿ

ಆರ್ ಎಕ್ಸ್ 100 ಎನ್ನುವ ಸಿನಿಮಾದಲ್ಲಿ ತಮ್ಮ ಬೋಲ್ಡ್ ಅಭಿನಯದಿಂದ ಪಾಯಲ್ ರಜಪೂತ್ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಮುಂಬೈ ಮೂಲದವರಾದರೂ ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಿರುವ ಪಾಯಲ್ ರಜಪೂತ್, ಇತ್ತೀಚೆಗೆ ಬಿಡುಗಡೆಯಾದ ಮಂಗಳವಾರಂ ಸಿನಿಮಾದಲ್ಲಿ ಅಭಿನಯಕ್ಕಾಗಿ ಅಭಿಮಾನಿಗಳಿಂದ ಪ್ರಶಂಸಿಸಲ್ಪಟ್ಟಿದ್ದಾರೆ.

ಇನ್ನು ಪಾಯಲ್ ರಜಪೂತ್ ಅವರ ಮನವಿಯನ್ನು ರಿಷಬ್ ಶೆಟ್ಟಿ ಸ್ವೀಕರಿಸ್ತಾರ, ಅವರಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಸಿಗುತ್ತಾ ಎನ್ನುವುದನ್ನು ನೋಡಬೇಕಿದೆ. ಕಾಂತಾರ: ಅಧ್ಯಾಯ 1 ಸಿನಿಮಾ 2024ರ ಕೊನೆಯಲ್ಲಿ ಅಥವಾ 2025ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+