Pavitra Lokesh Property: ನಟ ನರೇಶ್ ವಿವಾಹವಾದ ಪವಿತ್ರಾ ಲೋಕೇಶ್ ಒಟ್ಟು ಆಸ್ತಿ ಎಷ್ಟು ಗೊತ್ತಾ?
Pavitra Lokesh Property: ಸಿನಿಮಾ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿರುವ ನಟಿಯರಲ್ಲಿ ಪವಿತ್ರಾ ಲೋಕೇಶ್ ಕೂಡ ಒಬ್ಬರು. ಕನ್ನಡ ಚಿತ್ರರಂಗದ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು, ನಂತರ ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಹಲವು ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿದರು. ವಿಶೇಷವಾಗಿ ತಾಯಿ ಮತ್ತು ಕೌಟುಂಬಿಕ ಹಿನ್ನೆಲೆಯ ಪಾತ್ರಗಳಲ್ಲಿನ ಅವರ ನಟನೆಗೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಅವರ ವೈಯಕ್ತಿಕ ಜೀವನ, ಅದರಲ್ಲೂ ವಿಶೇಷವಾಗಿ ಹಿರಿಯ ನಟ ನರೇಶ್ ಅವರೊಂದಿಗಿನ ಸಂಬಂಧದ ವಿಚಾರಲ್ಲಿದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ.
ಕನ್ನಡದ ಹಿರಿಯ ನಟ ಮೈಸೂರು ಲೋಕೇಶ್ ಅವರ ಪುತ್ರಿಯಾಗಿರುವ ಪವಿತ್ರಾ, ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅವರು ಅತ್ಯಂತ ಬೇಡಿಕೆಯ ಪೋಷಕ ನಟಿಯಾಗಿ ಹೊರಹೊಮ್ಮಿದ್ದಾರೆ. ನಟ ನರೇಶ್ ಅವರೊಂದಿಗಿನ ಅವರ ಸ್ನೇಹ ಮತ್ತು ಸಂಬಂಧವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇತ್ತೀಚೆಗೆ ಈ ಜೋಡಿ 'ಮಳ್ಳಿ ಪೆಳ್ಳಿ' ಎಂಬ ಸಿನಿಮಾದಲ್ಲಿಯೂ ಒಟ್ಟಾಗಿ ನಟಿಸಿ ಸುದ್ದಿಯಾಗಿದ್ದರು.

ಪವಿತ್ರಾ ಲೋಕೇಶ್ ವಿರುದ್ಧ ಎದುರಾದ ಆರೋಪಗಳು
ಪವಿತ್ರಾ ಮತ್ತು ನರೇಶ್ ಅವರ ಸಂಬಂಧವು ಆರಂಭದ ದಿನಗಳಲ್ಲೇ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಈಗಾಗಲೇ ಮೂರು ಮದುವೆ ಆಗಿದ್ದ ನರೇಶ್ ಅವರು, ನಂತರ ಪವಿತ್ರಾ ಅವರ ಜೊತೆ ಜೀವನ ಹಂಚಿಕೊಂಡಿದ್ದು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಸಂಬಂಧದ ಕುರಿತು ಆ ಸಮಯದಲ್ಲಿ ಅನೇಕ ವದಂತಿಗಳು ಹಬ್ಬಿದ್ದವು. ಮುಖ್ಯವಾಗಿ "ಪವಿತ್ರಾ ಲೋಕೇಶ್ ಅವರು ಕೇವಲ ಆಸ್ತಿಗಾಗಿಯೇ ನರೇಶ್ ಅವರನ್ನು ವಿವಾಹವಾಗಿದ್ದಾರೆ" ಎಂಬ ಆರೋಪಗಳು ಮತ್ತು ಪ್ರಚಾರಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪವಿತ್ರಾ ಲೋಕೇಶ್ ಅವರ ವೈಯಕ್ತಿಕ ಆಸ್ತಿಪಾಸ್ತಿಗಳ ಬಗ್ಗೆಯೂ ಜನರಲ್ಲಿ ಕುತೂಹಲ ಹೆಚ್ಚಾಯಿತು.
ಪವಿತ್ರಾ ಲೋಕೇಶ್ ಒಟ್ಟು ಆಸ್ತಿ ವಿವರ
ವರದಿಗಳ ಪ್ರಕಾರ, ಪವಿತ್ರಾ ಲೋಕೇಶ್ ಅವರು ತಮ್ಮ ದೀರ್ಘಕಾಲದ ಸಿನಿಮಾ ವೃತ್ತಿಜೀವನದ ಮೂಲಕ ಗಣನೀಯ ಪ್ರಮಾಣದ ಆಸ್ತಿ ಮಾಡಿದ್ದಾರೆ. ಪವಿತ್ರಾ ಲೋಕೇಶ್ ಅವರ ಒಟ್ಟು ಆಸ್ತಿ ಸುಮಾರು 70 ಕೋಟಿ ರೂಪಾಯಿಗಳವರೆಗೂ ಇದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳು, ಹಲವು ಭಾಗಗಳಲ್ಲಿ ಜಮೀನು ಹಾಗೂ ಹೈದರಾಬಾದ್‌ನಲ್ಲಿ ಸ್ವಂತ ಮನೆಯನ್ನು ಅವರು ಹೊಂದಿದ್ದಾರೆ ಎಂಬ ಮಾಹಿತಿಯಿದೆ.
ಪವಿತ್ರಾ ಲೋಕೇಶ್ ಆದಾಯದ ಮೂಲಗಳು
ಸಿನಿಮಾ ರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವುದು, ಜನಪ್ರಿಯ ಧಾರಾವಾಹಿಗಳು ಮತ್ತು ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಅವರು ಈ ಮಟ್ಟದ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ಮಾಹಿತಿಯಿದೆ. ಕೇವಲ ನಟನೆಯಿಂದ ಮಾತ್ರವಲ್ಲದೆ, ಸರಿಯಾದ ಹೂಡಿಕೆಗಳ ಮೂಲಕವೂ ಅವರು ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಂಡಿದ್ದಾರೆ ಎಂದು ತಿಳಿದುಬದಿದೆ.
ಇನ್ನು ನಟ ನರೇಶ್ ಅವರ ವಿಷಯಕ್ಕೆ ಬರುವುದಾದರೆ, ಅವರು ದಿವಂಗತ ಹಿರಿಯ ನಟಿ ವಿಜಯ ನಿರ್ಮಲಾ ಅವರ ಉತ್ತರಾಧಿಕಾರಿಯಾಗಿ ಭಾರಿ ಆಸ್ತಿಯ ಒಡೆಯರಾಗಿದ್ದಾರೆ. ನರೇಶ್ ಹೆಸರಿನಲ್ಲಿ ಸುಮಾರು 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಪವಿತ್ರಾ ಅವರೊಂದಿಗಿನ ಇವರ ವಿವಾಹವು ಆರ್ಥಿಕವಾಗಿಯೂ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಈ ಜೋಡಿಗೆ ಸಂಬಂಧಿಸಿದ ವಿವಾದಗಳಲ್ಲಿ ಅತ್ಯಂತ ಸಂಚಲನ ಮೂಡಿಸಿದ್ದು ಮೈಸೂರಿನ ಘಟನೆ. ನರೇಶ್ ಮತ್ತು ಪವಿತ್ರಾ ಮೈಸೂರಿನ ಹೋಟೆಲ್‌ವೊಂದ ಕೊಠಡಿಯಲ್ಲಿದ್ದ ಸಮಯದಲ್ಲಿ, ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಅಲ್ಲಿಗೆ ಬಂದು ಅವರನ್ನು ನೇರವಾಗಿ ಭೇಟಿಯಾದ ಘಟನೆ ಭಾರಿ ವೈರಲ್ ಆಗಿತ್ತು. ಆ ಸಮಯದಲ್ಲಿ ಹೊರಬಂದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಈ ಘಟನೆಯ ನಂತರ ಮಾಧ್ಯಮಗಳು ಮತ್ತು ಸಾರ್ವಜನಿಕರ ದೃಷ್ಟಿ ಈ ಜೋಡಿಯ ಮೇಲೆ ಮತ್ತಷ್ಟು ತೀವ್ರವಾಗಿತ್ತು.
ಪವಿತ್ರಾ ಲೋಕೇಶ್, ನರೇಶ್ ಸಂಬಂಧ ಕುರಿತು ವಿವರ
ಮತ್ತೊಂದು ವಿಶೇಷವೆಂದರೆ, ಪವಿತ್ರಾ ಮತ್ತು ನರೇಶ್ ಅವರ ಪರಿಚಯ 'ಸಮ್ಮೋಹನಂ' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಆರಂಭವಾಯಿತು ಎಂದು ಹೇಳಲಾಗುತ್ತದೆ. ಆ ಪರಿಚಯವು ಕ್ರಮೇಣ ಸ್ನೇಹವಾಗಿ ಬೆಳೆದು, ನಂತರ ಪ್ರೇಮಕ್ಕೆ ತಿರುಗಿತು. ಕೆಲವು ವರ್ಷಗಳ ಕಾಲ ತಮ್ಮ ಸಂಬಂಧವನ್ನು ಗುಪ್ತವಾಗಿಟ್ಟಿದ್ದ ಈ ಜೋಡಿ, ಅಂತಿಮವಾಗಿ ವಿವಾಹವಾದರು. ಅವರ ಈ ವಿವಾದಾತ್ಮಕ ಪ್ರೇಮಕಥೆಯನ್ನು ಆಧರಿಸಿಯೇ 'ಮಳ್ಳಿ ಪೆಳ್ಳಿ' ಎಂಬ ಸಿನಿಮಾ ಕೂಡ ಸಿದ್ಧವಾಯಿತು. ಸದ್ಯ ಪವಿತ್ರಾ ಲೋಕೇಶ್ ಅವರ ಆಸ್ತಿ, ವ್ಯವಹಾರವು ಟಾಲಿವುಡ್‌ನಲ್ಲಿ ಮತ್ತೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.












Click it and Unblock the Notifications