Pavithra against Darshan: ಕೋತಿ ತಿಂದು ಮೇಕೆ ಮೂತಿಗೆ ಒರೆಸಿ ಹೋಯ್ತು- ದರ್ಶನ್ ವಿರುದ್ಧ ಪವಿತ್ರಾ ಹೇಳಿಕೆ?
ಬೆಂಗಳೂರು ಜೂನ್ 30: ಕೋತಿ ತಿಂದು ಮೇಕೆ ಮೂತಿಗೆ ಒರೆಸಿ ಹೋಯ್ತು ಅನ್ನೋ ಗಾದೆ ಮಾತಿಗೆ ಪವಿತ್ರಾ ಗೌಡ ಅವರ ಹೇಳಿಕೆ ಸರಿಹೊಂದುತ್ತದೆ. ನಟಿ ಪವಿತ್ರಾ ಗೌಡ ಪೊಲೀಸ್ ವಿಚಾರಣೆ ವೇಳೆ ದರ್ಶನ್ ವಿರುದ್ಧವೇ ಹೇಳಿಕೆ ನೀಡಿದ್ದಾರೆ ಎನ್ನುವ ಮಾಹಿತಿ ಸದ್ಯ ಲಭ್ಯವಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಜೈಲುವಾಸ ಅನುಭವಿಸುತ್ತಿದ್ದರೂ ಇವರ ದಿಮಾಕು ಇನ್ನೂ ಕಡಿಮೆಯಾದಂತೆ ಕಾಣಿಸುತ್ತಿಲ್ಲ. ಯಾಕೆಂದರೆ ಪವಿತ್ರಾ ಗೌಡ ಅವರಿಂದಾಗಿ ನಟ ದರ್ಶನ್ ತೂಗುದೀಪ್ ಸದ್ಯ ಜೈಲುವಾಸ ಅನುಭವಿಸುತ್ತಿದ್ದಾರೆ.

ಆದರೆ ಪವಿತ್ರಾ ಗೌಡ ಅದನ್ನ ಮರೆತು ದರ್ಶನ್ ವಿರುದ್ಧವೇ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಶೆಡ್ಡಿನಲ್ಲಿ ನಾನು ಚಪ್ಪಲಿಯಿಂದ ಒಂದು ಏಟು ರೇಣುಕಾಸ್ವಾಮಿಗೆ ಹೊಡೆದೆ ಅಷ್ಟೇ, ಬಳಿಕ ದರ್ಶನ್ ಅವರೇ ರೇಣುಕಾಸ್ವಾಮಿ ಅವರಿಗೆ ಮನಬಂದಂತೆ ಥಳಿಸಿದ್ದಾರೆ. ನಾನು ಶೆಡ್ಡಿಗೆ ತೆರಳುವ ಮುನ್ನವೇ ದರ್ಶನ್ ಸ್ಥಳದಲ್ಲಿ ಇದ್ದರು ಎಂದು ಪವಿತ್ರಾ ಗೌಡ ಪೊಲೀಸ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.
ಈ ಹೇಳಿಕೆಯನ್ನು ಒಂದು ಪಕ್ಷ ದರ್ಶನ್ ಕೇಳಿದ್ದರೆ ಮಾತು ಬೇರೆನೇ ಆಗುತ್ತಿತ್ತೇನೋ. ಯಾಕೆಂದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅವರದ್ದು ಸಿಂಹ ಪಾಲಿದೆ. ದರ್ಶನ್ ಅವರಿಗೆ ಟ್ರಿಗರ್ ಮಾಡಿದ್ದು ಇದೇ ಪವಿತ್ರಾ ಗೌಡ. ಪವಿತ್ರಾ ಗೌಡ ಈ ವಿಚಾರ ಹೇಳದೇ ಇದ್ದಲ್ಲಿ ಈ ಘಟನೆ ನಡೆಯುತ್ತಲೇ ಇರಲಿಲ್ಲ. ರೇಣುಕಾಸ್ವಾಮಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೆ ಸಾಕಿತ್ತು. ಆದರೆ ಪವಿತ್ರಾ ಹೀಗೆ ಮಾಡಲಿಲ್ಲ.
ದರ್ಶನ್ ಜೈಲುವಾಸ ಅನುಭವಿಸುವ ಸ್ಥಿತಿ ಬಂದೊದಗಿರುವುದು ಪವಿತ್ರಾ ಗೌಡ ಅವರಿಂದಲೇ. ಅವರು ಸವಾಲು ಹಾಕಿದ್ದಕ್ಕೆ ದರ್ಶನ್ ತಾಳ್ಮೆ ಕಳೆದುಕೊಂಡು ರೇಣುಕಾಸ್ವಾಮಿ ಮೇಲೆ ಕೈ ಮಾಡಿದ್ದು. ಆದರೆ ಇದ್ಯಾವುದನ್ನು ಲೆಕ್ಕಿಸದೇ ಪವಿತ್ರಾ ಗೌಡ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದಾರೆ.

ಪವಿತ್ರಾ ಗೌಡ ಅವರಿಗಾಗಿ ದಾಸ ತಮ್ಮ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ತಮ್ಮ ಸಂಸಾರದಲ್ಲಿ ಪವಿತ್ರಾ ಗೌಡ ಪ್ರವೇಶ ಮಾಡಿದರೂ ಮೌನವಾಗಿದ್ದ ದರ್ಶನ್ ಪವಿತ್ರಾ ಗೌಡ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದರು. ಪತ್ನಿಗಿಂತಲ್ಲೂ ಹೆಚ್ಚಿನ ಸೌಕರ್ಯಗಳನ್ನು ನೀಡಿ ರಾಣಿಯಂತೆ ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತೆ.
ಇಷ್ಟಲ್ಲದೇ ಪವಿತ್ರಾ ತನ್ನ ಹಾಗೂ ದರ್ಶನ್ ನಡುವಿನ ಸಂಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದರು. ಈ ವಿಚಾರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ನಡುವೆಯೂ ಗಲಾಟೆ ನಡೆದಿತ್ತು. ಇದೆಲ್ಲದರ ನಡುವೆ ದರ್ಶನ್ ಪವಿತ್ರಾ ಗೌಡ ಅವರ ಬಗ್ಗೆ ಒಂದು ಮಾತು ಕೂಡ ಕೆಟ್ಟದಾಗಿ ಆಡಿರಲಿಲ್ಲ.
ಇದನ್ನೇ ಪವಿತ್ರಾ ದುರುಪಯೋಗ ಪಡಿಸಿಕೊಂಡಿದ್ದಾರೆ. ತಮಗೆ ರೇಣುಕಾಸ್ವಾಮಿ ಕೆಟ್ಟದಾಗಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದ್ ಎನ್ನುವ ಕಾರಣಕ್ಕೆ ದರ್ಶನ್ ಅವರನ್ನು ಮುಂದೆ ಬಿಟ್ಟು ಕೊಲೆ ಮಾಡಿಸಿದ್ದಾರೆ. ಆದರೆ ಈ ಘಟನೆ ಇಲ್ಲಿವರೆಗೂ ಬರುತ್ತೆ ಅಂತ ಸ್ವತ: ದರ್ಶನ್ ಕೂಡ ಊಹಿಸಿರಲಿಲ್ಲ. ಆದರೂ ಪವಿತ್ರಾ ಗೌಡ ಅವರಿಗಾಗಿ ದರ್ಶನ್ ತಮ್ಮ ಹೆಸರು, ಗೌರವವನ್ನು ಹಾಳು ಮಾಡಿಕೊಂಡಿರುವುದ ಸುಳ್ಳಲ್ಲ. ಆದರೆ ಪವಿತ್ರಾ ಗೌಡ ದರ್ಶನ್ ವಿರುದ್ಧವೇ ಹೇಳಿಕೆ ನೀಡಿದ್ದಾರೆನ್ನುವ ಸುದ್ದಿ ಅಭಿಮಾನಿಗಳಿಗೆ ಕೋಪ ತರಿಸಿದೆ.
ದರ್ಶನ್ ಬಗ್ಗೆ ಸುಮಲತಾ ಪ್ರತಿಕ್ರಿಯೆ
ಸ್ಯಾಂಡಲ್‌ವುಡ್ ನಟ ದರ್ಶನ್ ಬಗ್ಗೆ ಸುಮಲತಾ ಅವರು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲವೂ ಸರಿ ಹೋಗುವ ಮೊದಲು ಬಹಳಷ್ಟು ತಪ್ಪಾಗುತ್ತೆ ನಂಬಿಕೆ ಇಟ್ಟುಕೊಳ್ಳಿ ಎಂದು ಸುಮಲತಾ ಇನ್ಸ್ಟಾಗ್ರಾಂ ಪೋಸ್ಟ್ ಮಾಡಿದ್ದಾರೆ. ಕೃಷ್ಣನ ನುಡಿ ಬರೆದು ಪೋಸ್ಟ್ ಮಾಡಿ ಡಿಪ್ಲೊಮೇಟಿಕ್ ನಟಿ ಸಂದೇಶ ನೀಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಲು ನಿಯಮದ ಪ್ರಕಾರ ಮೂರು ಜನರಿಗೆ ಅವಕಾಶ ಇರುತ್ತದೆ. ಕಳೆದ ದಿನ ವಿಜಯಲಕ್ಷ್ಮಿ, ಪುತ್ರ ಮನೀಶ್, ಮೀನಾ ತೂಗುದೀಪ್, ಸಹೋದರ ದಿನಕರ್ ಭೇಟಿ ನೀಡಿ ಧೈರ್ಯ ಹೇಳಿ ಬಂದಿದ್ದಾರೆ. ಆದರೆ ಸುಮಲತಾ ಮಾತ್ರ ಭೇಟಿ ನೀಡಿಲ್ಲ. ಬದಲಿಗೆ ಇನ್ಸ್ಟಾಗ್ರಾಮ್‌ನಲ್ಲಿ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications