Pavithra Gowda: ಜ್ಯೋತಿ ರೈ ರೀತಿ ಪವಿತ್ರಾ ಗೌಡ ಯೋಚನೆ ಮಾಡಿದ್ದರೆ ದರ್ಶನ್‌ಗೆ ಈ ಗತಿ ಬರುತ್ತಿರಲಿಲ್ಲ!
ಪವಿತ್ರಾ ಗೌಡ, ನಟ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾ ಗೌಡರಿಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದೇ ಈ ದುರ್ಘಟನೆಗೆ ಕಾರಣ. ದರ್ಶನ್ ಮತ್ತು ಗ್ಯಾಂಗ್ ಕೋಪದಲ್ಲಿ ಏನೋ ಮಾಡಲು ಹೋಗಿ ಇದೀಗ ಕೊಲೆ ಆರೋಪಿಗಳಾಗಿ ಜೈಲು ಸೇರಿದ್ದಾರೆ. ಸದ್ಯ ದರ್ಶನ್ ಮತ್ತು ತಂಡ ಜೈಲಿನಿಂದ ಯಾವಾಗ ಹೊರಬರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ.
ಇದೆಲ್ಲಾ ಹಳೆ ಕಥೆಯಾದರೂ ಈಗ ಜ್ಯೋತಿ ರೈ ಕಾರಣದಿಂದ ಈ ಪ್ರಕರಣದ ಮತ್ತೆ ಮತ್ತೆ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡ ಏನಾದರೂ ನಟಿ ಜ್ಯೋತಿ ರೈ ಅವರಂತೆ ಯೋಚನೆ ಮಾಡಿದ್ದರೆ ಇಂದು ಅವರಿಗೆ, ದರ್ಶನ್‌ಗೆ ಮತ್ತು ಜೈಲಿನಲ್ಲಿರುವ ಕೊಲೆ ಆರೋಪಿಗಳಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಜ್ಯೋತಿ ರೈ ಮಾಡಿದ್ದಾದರೂ ಏನು?
ಕರಾವಳಿ ಮೂಲಕ ನಟಿ ಜ್ಯೋತಿ ರೈ ಬೋಲ್ಡ್ ಫೊಟೋಗಳನ್ನು ಹಂಚಿಕೊಳ್ಳುವ ಮೂಲಕ ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಾರೆ. ಸದ್ಯ ತಮಿಳು ಸಿನಿಮಾರಂಗದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಜ್ಯೋತಿ ರೈಗೆ ಕೂಡ ಅಶ್ಲೀಲವಾಗಿ ಸಂದೇಶ ಕಳಿಸುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ತೀರಾ ಕೆಟ್ಟದಾಗಿ ಕಾಮೆಂಟ್ ಮಾಡುವುದಲ್ಲದೆ, ಸಂದೇಶ ಕೂಡ ಕಳಿಸಿ ಮಾನಸಿಕ ಹಿಂಸೆ ಕೊಡುತ್ತಾರೆ. ಇದರಿಂದ ಬೇಸತ್ತ ನಡಿ ಜ್ಯೋತಿ ರೈ ಸುಮಾರು 1 ಸಾವಿರ ಅಕೌಂಟ್‌ಗಳನ್ನು ಬ್ಲಾಕ್ ಮಾಡಿದ್ದಾರೆ.
ಬ್ಲಾಕ್ ಆಯ್ಕೆಯನ್ನು ನಾನು ಸರಿಯಾಗಿ ಬಳಸಿಕೊಂಡಿದ್ದೇನೆ. ಕೆಟ್ಟದಾಗಿ ಮೆಸೇಜ್ ಮಾಡುವ 1 ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡಿದ್ದೇನೆ. ಅಂತಹ ಜನಗಳ ಜೊತೆ ಚರ್ಚೆ ಮಾಡೋದು ಇಷ್ಟವಿಲ್ಲ. ಮಾನಸಿಕ ನೆಮ್ಮದಿಯನ್ನು ಕೆಡಿಸಿಕೊಳ್ಳದಿರಲು ಇಂತ ಟೂಲ್‌ಗಳನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ.
ಪವಿತ್ರಾ ಗೌಡ ಹೀಗೆ ಮಾಡಿದ್ದರೆ
ಪವಿತ್ರಾ ಗೌಡ ಹೀಗೆ ಯೋಚನೆ ಮಾಡಿದ್ದರೆ, ಇಂದು ದರ್ಶನ್ ಹೊರಗಡೆ ಇರುತ್ತಿದ್ದರು. ಅವರ ಡೆವಿಲ್ ಸಿನಿಮಾ ಶೂಟಿಂಗ್ ಕೂಡ ಬಹುತೇಕ ಮುಗಿದಿರುತ್ತಿತ್ತು. ಆದರೆ ಈಗ ಯಾವುದನ್ನೂ ಹಿಂದಕ್ಕೆ ಹೋಗಿ ಬದಲಾಯಿಸಲು ಆಗಲ್ಲ. ರೇಣುಕಾಸ್ವಾಮಿ ಮಾಡಿದ್ದು ಅಕ್ಷಮ್ಯ, ಆದರೆ ದರ್ಶನ್‌ಗೆ ಇರುವ ಜನ ಬೆಂಬಲ, ರಾಜಕೀಯ ಬಲ ನೋಡಿದಾಗ ಒಂದು ಫೋನ್ ಕರೆ ಈ ಸಮಸ್ಯೆಗೆ ಪರಿಹಾರ ಕೊಡುತ್ತಿತ್ತು, ಆದರೆ ಕೋಪದಲ್ಲಿ ಮಾಡಿದ ಒಂದು ಕೆಲಸ ಈಗ ದರ್ಶನ್‌ರನ್ನು ಜೈಲು ಮಾಡಿದೆ. ಅವರ ಅಭಿಮಾನಿಗಳು ಈಗ ಬೇಗ ಜಾಮೀನು ಸಿಗಲಿ ಎಂದು ಸಿಕ್ಕ ಸಿಕ್ಕ ದೇವರಿಗೆ ಪೂಜೆ ಮಾಡುತ್ತಿದ್ದಾರೆ.












Click it and Unblock the Notifications