ಹಾಲಿವುಡ್ ಸ್ವರ್ಗಕ್ಕೆ ಸ್ವಾಗತ: ಆಸ್ಕರ್ ವಿಜೇತರ ಪಟ್ಟಿ ನೋಡಬನ್ನಿ!
96ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದು ಮುಕ್ತಾಯ ಕೂಡ ಆಗಿದೆ. ಜಾಗತಿಕ ಮಟ್ಟದಲ್ಲಿ ಅದರಲ್ಲೂ ಸಿನಿಮಾ ವಲಯದ ಅತ್ಯುನ್ನತ ಪ್ರಶಸ್ತಿ, ಎಂದೇ 'ಆಸ್ಕರ್ ಅವಾರ್ಡ್' ಚಿರಪರಿಚಿತ. ಪ್ರತಿಯೊಬ್ಬ ಸಿನಿಮಾ ನಟ & ನಟಿ ಸೇರಿದಂತೆ ನಿರ್ದೇಶಕರ ಪಾಲಿಗೆ ಕನಸಿನ ಕೂಸು 'ಆಸ್ಕರ್ ಪ್ರಶಸ್ತಿ' ಎನ್ನಬಹುದು. ಹೀಗಿದ್ದಾಗ ಇಂದು ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಾರು ಯಾರಿಗೆ ಅವಾರ್ಡ್ ಸಿಕ್ಕಿದೆ? ಈ ಬಾರಿ ಪ್ರಶಸ್ತಿ ಗೆದ್ದ ಸಿನಿಮಾ ಯಾವುದು? ಹೀರೋ ಯಾರು? ಮಾಹಿತಿಗೆ ಮುಂದೆ ಓದಿ.
ಹಾಲಿವುಡ್ ಸಿನಿಮಾ ರಂಗ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ಅಮೆರಿಕ ಮೂಲದ ಸಿನಿಮಾ ರಂಗ ಎಂಬ ಹೆಸರು ಇದ್ದರೂ ಹಾಲಿವುಡ್ ಈಗ ಜಗತ್ತಿನಾದ್ಯಂತ ಭಾರಿ ದೊಡ್ಡ ಸಂಚಲನ ಸೃಷ್ಟಿಸಿದೆ. ಒಂದೊಂದು ಸಿನಿಮಾಗೆ ಸಾವಿರ ಸಾವಿರ ಕೋಟಿ ಬಂಡವಾಳ, ಹೂಡಿಕೆ ಮಾಡುವ ಹಾಲಿವುಡ್ ಸಿನಿಮಾ ಮಂದಿ ಸದಾ ಹೈ ಲೆವೆಲ್‌ನಲ್ಲಿ ಇರುತ್ತಾರೆ. ಈ ಸಿನಿಮಾ ರಂಗದಲ್ಲಿ ಬರುವ ಚಿತ್ರಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ 'ಆಸ್ಕರ್ ಪ್ರಶಸ್ತಿ' ಎನ್ನಬಹುದು. ಹಾಗಾದರೆ 2024 ರ ಆಸ್ಕರ್ ಅಖಾಡದಲ್ಲಿ ಯಾವೆಲ್ಲಾ ಸಿನಿಮಾಗೆ ಅವಾರ್ಡ್ ಬಂದಿದೆ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಪ್ರಮುಖ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ
* ಅತ್ಯುತ್ತಮ ಸಿನಿಮಾ- ಓಪನ್ ಹೈಮರ್
* ಅತ್ಯುತ್ತಮ ನಟ- ಕಿಲಿಯನ್ ಮರ್ಫಿ (ಓಪನ್ ಹೈಮರ್)
* ಅತ್ಯುತ್ತಮ ನಟಿ- ಎಮ್ಮಾ ಸ್ಟೋನ್ (ಫೋರ್ ಥಿಂಗ್ಸ್)
* ಅತ್ಯುತ್ತಮ ಡೈರೆಕ್ಟರ್- ಕ್ರಿಸ್ಟೋಫರ್ ನೋಲನ್ (ಓಪನ್ ಹೈಮರ್)
* ಅತ್ಯುತ್ತಮ ಸಂಕಲನ- ಓಪನ್ ಹೈಮರ್
* ಅತ್ಯುತ್ತಮ ಸೌಂಡ್- ದಿ ಜೋನ್ ಆಫ್ ಇಂಟ್ರೆಸ್ಟ್
* ಅತ್ಯುತ್ತಮ ಛಾಯಾಗ್ರಹಣ- ಹೊಯ್ಟೆ ವ್ಯಾನ್ ಹೊಯ್ಟೆಮಾ (ಓಪನ್ ಹೈಮರ್)
* ಒರಿಜಿನಲ್ ಸಾಂಗ್- ವಾಟ್ ವಾಸ್ ಐ ಮೇಡ್ ಫಾರ್ (ಬಾರ್ಬಿ)
ಇವಿಷ್ಟೂ ಪ್ರಮುಖ ಪ್ರಶಸ್ತಿಗಳಾಗಿದ್ದು, ಇದರ ಜೊತೆಗೆ ಇನ್ನೂ ಹಲವು ವಿಭಾಗದಲ್ಲಿ ಕೂಡ ಅವಾರ್ಡ್ ಕೊಡಲಾಗಿದೆ. ಅದರಲ್ಲೂ ಇಡೀ ಜಗತ್ತೇ ಕೊಂಡಾಡಿರುವ 'ಓಪನ್ ಹೈಮರ್' ಸಿನಿಮಾ ಬರೋಬ್ಬರಿ 7 ಪ್ರಶಸ್ತಿಗಳನ್ನು ಗೆದ್ದು ಬೀಗಿದೆ. ಹೀಗಾಗಿ ಪ್ರೇಕ್ಷಕರ ಜೊತೆಗೆ ಈಗ, ಆಸ್ಕರ್ ಅವಾರ್ಡ್ ಆಯ್ಕೆಗಾರರು ಕೂಡ ಓಪನ್ ಹೈಮರ್ ಸಿನಿಮಾಗೆ ಜೈ ಅಂತಿದ್ದಾರೆ.
#JohnCena presented the #Oscar for Best Costume Design NAKED 😂🥵 https://t.co/r7WoNDVle4 (🎥: ABC) pic.twitter.com/BO4coRLTFA
— TMZ (@TMZ) March 11, 2024
ಬೆತ್ತಲಾಗಿ ಬಂದ ಜಾನ್ ಸೀನಾ!
ವೃತ್ತಿಪರ ಕುಸ್ತಿಪಟು ಎನಿಸಿಕೊಂಡಿರುವ, ಜಾನ್ ಸೀನಾ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? WWE ಸೂಪರ್ ಸ್ಟಾರ್ ಜಾನ್ ಸೀನಾ ಜಗತ್ತಿನ ವಿವಿಧ ದೇಶಗಳಲ್ಲಿ ಚಿರಪರಿಚಿತ. ಅದರಲ್ಲೂ, ಜಾನ್ ಸೀನಾ ಅವರಿಗೆ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಇಂತಿಪ್ಪ ಜಾನ್ ಸೀನಾ, ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಆದರೆ ಈ ಬಾರಿ ಬಟ್ಟೆಯನ್ನೆಲ್ಲಾ ಬಿಚ್ಚಾಕಿ ದಿಢೀರ್ ಜಗತ್ತಿನ ಆಸ್ಕರ್ ಸಮಾರಂಭಕ್ಕೆ ಎಂಟ್ರಿ ಹಾಕಿದ್ದಾರೆ. ಈ ಫೋಟೋ & ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಜಾನ್ ಸೀನಾ ಬೆತ್ತಲಾದ ವಿಡಿಯೋ ದೊಡ್ಡ ಕಿಚ್ಚು ಹಚ್ಚಿದೆ. ವಿಡಿಯೋ ನೋಡಲು ಇದೀಗ ಮುಂದೆ ಓದಿ.
ಜಾನ್ ಸೀನಾಗೆ ದೊಡ್ಡ ಹೆಸರು!
ಮೊದಲೇ ಹೇಳಿದಂತೆ ಕೋಟಿ ಕೋಟಿ ಅಭಿಮಾನಿಗಳ ಹೊಂದಿರುವ ಈ ಜಾನ್ ಸೀನಾ, ಕೋಟಿ ಕೋಟಿ ಆಸ್ತಿಯನ್ನೂ ಮಾಡಿದ್ದಾರೆ. ಅದರಲ್ಲೂ WWE ಅಖಾಡದಲ್ಲಿ ಜಾನ್ ಸೀನಾ ಹವಾ ಬಲು ಜೋರಾಗಿದೆ. ಹೀಗಾಗಿ ಜಾನ್ ಸೀನಾ ಅಮೆರಿಕ ಮಾತ್ರವಲ್ಲದೆ ಜಗತ್ತಿನ ಮೂಲೆ ಮೂಲೆಯಲ್ಲೂ ಹೆಸರು ಮಾಡಿದ್ದಾರೆ. ಹೀಗಿದ್ದರೂ ಇಂತಹ ನಟ ಕಂ ವೃತ್ತಿಪರ ಕುಸ್ತಿಪಟು ಬೆತ್ತಲೆಯಾಗಿ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಬಂದಿದ್ದು ಭಾರಿ ಚರ್ಚೆಗೆ ಈಗ ವೇದಿಕೆ ಒದಗಿಸಿದೆ. ಹಾಗೇ ಇನ್ನೊಂದು ಕಡೆ ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ಹಲವು ವೈಶಿಷ್ಟ್ಯತೆಗಳು ಗಮನ ಸೆಳೆದವು.












Click it and Unblock the Notifications