Trisha Krishnan: ಮದುವೆ ಮಾತ್ರವಲ್ಲ, ಹನಿಮೂನ್ ಬಗ್ಗೆಯೂ ಅಪ್‌ಡೇಟ್‌ ಕೊಟ್ಟ ನಟಿ ತ್ರಿಶಾ

ಬಹುಭಾಷಾ ನಟಿ ತ್ರಿಶಾ ಕೃಷ್ಣನ್‌ (Trisha Krishnan) ತಮ್ಮ ಮದುವೆ ವಿಚಾರದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. 42 ವಯಸ್ಸಾದರೂ ತ್ರಿಶಾ ಮದುವೆಯಾಗಲಿಲ್ಲ ಎಂದು ಅವರ ಅಭಿಮಾನಿಗಳು ಹಲವು ವರ್ಷಗಳಿಂದ ಬೇಸರ ವ್ಯಕ್ತಪಡಿಸುತ್ತಿದ್ದರು. ತ್ರಿಶಾ ಖ್ಯಾತ ನಟರೊಬ್ಬರ ಜೊತೆ ಡೇಟಿಂಗ್‌ನಲ್ಲಿದ್ದಾರೆ, ಅವರನ್ನೇ ಮದುವೆ ಆಗ್ತಾರೆ ಎಂದೆಲ್ಲ ಸುದ್ದಿ ಕೆಲ ವರ್ಷಗಳಿಂದ ಹರಿದಾಡುತ್ತಿದೆ. ಆದರೆ ಈಗ ಉದ್ಯಮಿಯೊಬ್ಬರ ಜೊತೆ ತ್ರಿಶಾ ಮದುವೆ ಫಿಕ್ಸ್‌ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನಟಿ ತ್ರಿಶಾ ಮದುವೆ ಮಾತ್ರವಲ್ಲದೆ, ತಮ್ಮ ಹನಿಮೂನ್‌ ಬಗ್ಗೆಯೂ ಶಾಕಿಂಗ್‌ ಅಪ್‌ಡೇಟ್‌ ನೀಡಿದ್ದಾರೆ.

ಚಂಡೀಗಢ ಮೂಲದ ಉದ್ಯಮಿಯೊಬ್ಬರ ಜೊತೆ ತ್ರಿಶಾ ಮದುವೆ ಫಿಕ್ಸ್‌ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಟಿ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಮದುವೆ ವಿಚಾರದ ಬಗ್ಗೆ ನಟಿ ಆಗಾಗ ಸ್ಪಷ್ಟನೆ ನೀಡುತ್ತಲೇ ಇದ್ದಾರೆ. ಆದರೂ ವದಂತಿಗಳು ನಿಲ್ಲಲಿಲ್ಲ. ದಿನಕ್ಕೊಂದು ಹೊಸ ಸುದ್ದಿ ಅವರ ಮದುವೆ ಕುರಿತಂತೆ ಚರ್ಚೆಯಾಗುತ್ತಲೇ ಇದೆ. ಆದರೆ ಈ ಬಾರಿ ತ್ರಿಶಾ ತಮ್ಮ ಹನಿಮೂನ್‌ ಬಗ್ಗೆಯೂ ಮಹತ್ವದ ವಿಚಾರ ರಿವೀಲ್‌ ಮಾಡಿದ್ದಾರೆ.

Not Just My Wedding Even My Honeymoon Is Planned Actress Trisha Krishnan Marriage Rumours

ಈ ಹಿಂದೆ ಮದುವೆಯ ಬಗ್ಗೆ ಮಾತನಾಡಿದ್ದ ಅವರು ಸರಿಯಾದ ವ್ಯಕ್ತಿಯನ್ನು ಭೇಟಿಯಾದರೆ ಮಾತ್ರ, ಮದುವೆಯನ್ನು ಪರಿಗಣಿಸುತ್ತೇನೆ. ಆದರೆ ಆ ಸಮಯ ಇನ್ನೂ ಬಂದಿಲ್ಲ ಎಂದಿದ್ದರು. ಮದುವೆ ಕುರಿತು ಅವರ ಪ್ರಾಮಾಣಿಕ ಅಭಿಪ್ರಾಯ ಹಾಗೂ ಸ್ಪಷ್ಟತೆಯನ್ನು ಫ್ಯಾನ್ಸ್‌ ಕೂಡ ಮೆಚ್ಚಿದರು. ಆದರೆ ಈಗ ಉದ್ಯಮಿಯೊಬ್ಬರ ಜೊತೆ ಮದುವೆಯಾಗಲು ತ್ರಿಶಾ ಒಪ್ಪಿಕೊಂಡಿದ್ದಾರೆ ಎಂದು ಭಾರೀ ಚರ್ಚೆ ನಡೆಯುತ್ತಿರುವ ಹಿನ್ನೆಲೆ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಅಸಲಿ ವಿಚಾರ ತಿಳಿಸಿದ್ದಾರೆ.

ಜನ ಪ್ಲ್ಯಾನ್‌ ಮಾಡುವುದು ಇಷ್ಟ

"ಜನರು ನನ್ನ ಜೀವನವನ್ನು ನನಗಾಗಿ ಪ್ಲ್ಯಾನ್‌ ಮಾಡುವುದನ್ನು ನಾನು ಇಷ್ಟಪಡುತ್ತೇನೆ. ಅವರು ನನ್ನ ಹನಿಮೂನ್ ಅನ್ನು ಸಹ ನಿಗದಿಪಡಿಸುವವರೆಗೆ ಕಾಯುತ್ತಿದ್ದೇನೆ" ಎಂದು ತ್ರಿಶಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮದುವೆ ವದಂತಿಗಳಿಗೆ ಬುದ್ಧಿವಂತಿಕೆಯಿಂದ ತಿರುಗೇಟು ನೀಡಿದ್ದಾರೆ.

ತ್ರಿಶಾ 2015ರಲ್ಲೇ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ಒಮ್ಮೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಶೀಘ್ರದಲ್ಲೇ ನಿಶ್ಚಿತಾರ್ಥ ಕೊನೆಗೊಂಡಿತು. ಮದುವೆಯ ನಂತರವೂ ನಟನೆಯನ್ನು ಮುಂದುವರಿಸುವ ಅವರ ಬಯಕೆಯ ಬಗ್ಗೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡ ಕಾರಣಕ್ಕೆ ಈ ಮದುವೆ ಮುಂದುವರಿಯಲಿಲ್ಲ ಎಂದು ವರದಿಯಾಗಿತ್ತು. ಈಗ ಮತ್ತೆ ಉದ್ಯಮಿ ಜೊತೆಗೆ ಮದುವೆ ವದಂತಿ ಬೆನ್ನಲ್ಲೇ ನಟಿ ಕ್ಲಾರಿಟಿ ಕೊಟ್ಟಿದ್ದಾರೆ.

ಪೊನ್ನಿಯಿನ್ ಸೆಲ್ವನ್ ಮೂಲಕ ಮತ್ತೆ ಟ್ರೆಂಡಿಂಗ್‌ನಲ್ಲಿರುವ ತ್ರಿಶಾ ಅವರ ಪೋಷಕರು ಮದುವೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಉದ್ಯಮಿಯೊಂದಿಗೆ ಮದುವೆ ಫಿಕ್ಸ್‌ ಮಾಡಿದ್ದಾರೆ. ಅವರ ಕುಟುಂಬಕ್ಕೆ ಹಲವು ವರ್ಷಗಳಿಂದ ಪರಿಚಿತವಾದ ಸಂಬಂಧ ಎಂದೆಲ್ಲ ಹೇಳಲಾಗಿತ್ತು. ಆದರೆ ಅಧಿಕೃತವಾಗಿ ತ್ರಿಶಾ ಅಥವಾ ಅವರ ಕುಟುಂಬವು ಈ ಹೇಳಿಕೆಗಳನ್ನು ದೃಢಪಡಿಸಿರಲಿಲ್ಲ. ಈಗ ಒಂದೇ ಪೋಸ್ಟ್‌ ಮೂಲಕ ಎಲ್ಲ ಗೊಂದಲಗಳಿಗೂ ನಟಿ ತೆರೆ ಎಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+