Niveditha Gowda: ನಿವೇದಿತಾ ಬಿಟ್ಟ ಉದ್ದ ಉಗುರಿನಿಂದಲೇ ಆಟ- ಯಾರ ಬಾಯಿಗೆ ಜಾಮೂನು? ಯಾರಿಗೆ ಮೆಣಸಿನಕಾಯಿ?
ಬಿಗ್‌ಬಾಸ್ ಮುಗಿದ ಬಳಿಕ ಶುರುವಾದ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಭಾರೀ ಸದ್ದು ಮಾಡುತ್ತಿದೆ. ಈ ಶೋ ಶನಿವಾರ ಹಾಗೂ ಭಾನುವಾರ ಸಂಜೆ ಪ್ರಸಾರವಾಗಲಿದ್ದು ಬಾಯ್ಸ್ ಹಾಗೂ ಗರ್ಲ್ಸ್ ನಡುವೆ ಪೈಪೋಟಿ ಜೋರಾಗಿತ್ತದೆ. ಯಾರು ಮೇಲು ಎನ್ನುವ ಆಟದಲ್ಲಿ ಸಕ್ಕತ್ ಕಾಮಿಡಿ ಕೂಡ ಇರುತ್ತದೆ. ಇದೀಗ ಕಾರ್ಯಕ್ರಮದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಪ್ರೋಮೋದಲ್ಲಿ ನಿವೇದಿತಾ ಕೈಯಲ್ಲಿ ಬಿಟ್ಟ ಉದ್ದ ಉಗುರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಉಗುರಿನಿಂದಲೇ ಆಟವನ್ನು ಆಡಿಸಲಾಗಿದೆ.
ಹೌದು... ಕಳೆದ ದಿನ ಹಂಚಿಕೊಳ್ಳಲಾದ ವೀಡಿಯೋ ಕ್ಲಿಪ್‌ನಲ್ಲಿ ನಿವೇದಿತಾ ತಮ್ಮ ಕೈಗಳಲ್ಲಿ ಬಿಟ್ಟ ಎರಡು ಇಂಚಿನ ಉದ್ದದ ಉಗುರಿನಿಂದಲೇ ಆಟ ಆಡಿಸಿದ್ದು ಕಂಡು ಬಂದಿದೆ. ತಂಡದ ಪುರುಷ ಹಾಗೂ ಮಹಿಳೆಯರು ಪರಸ್ಪರ ಉಗುರಿನಿಂದಲೇ ಆಹಾರ ತಿನ್ನಿಸಿದ್ದಾರೆ. ಜಾಮೂನು ಹಾಗೂ ಮೆಣಸಿನ ಪುಡಿಯನ್ನು ತಿನ್ನಿಸುವುದು ವಿಡಿಯೋ ಕ್ಲಿಪ್‌ನಲ್ಲಿ ಕಂಡು ಬಂದಿದೆ.

ನಿವೇದಿತಾ ಗೌಡ ಬಿಟ್ಟ ಎರಡಿಂಚಿನ ಉಗುರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಮಾಡಲಾಗಿದೆ. ಅದೇ ಉಗುರನ್ನು ಜಾಮೂನಿಗೆ ಚುಚ್ಚಿ ಅದನ್ನು ನಿವೇದಿತಾ ಬಾಯಿಗೆ ಇಡಲಾಗಿದೆ. ಅಷ್ಟೇ ಅಲ್ಲ ಶುಭಾ ಪೂಂಜಾ ಬಾಯಿಗೂ ಕೂಡ ಅದೇ ಉಗುರಿನಿಂದ ಮೆಣಸಿನಕಾಯಿಯನ್ನು ತಿನ್ನಿಸಲಾಗಿದೆ. ಜೊತೆಗೆ ನಿವೇದಿತಾ ತಮ್ಮ ಉಗುರಿನಿಂದ ಪುರುಷರಿಗೆ ಬಾಳೆ ಹಣ್ಣನ್ನು ತಿನ್ನಿಸಿದ್ದಾರೆ. ಇದು ನಿಜಕ್ಕೂ ಮೈ ಝಂ ಎನಿಸುವ ಆಟ. ಆದರೆ ಈ ಆಟವನ್ನು ನೋಡುಗರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದಲ್ಲಿ ಎರಡು ತಂಡಗಳು ಇದ್ದು ಒಂದು ತಂಡದಲ್ಲಿ ಪುರುಷರು ಹಾಗೂ ಇನ್ನೊಂದು ತಂಡದಲ್ಲಿ ಮಹಿಳೆಯರು ಇದ್ದಾರೆ. ಇವರಿಬ್ಬರ ನಡುವೆ ಆಟಗಳು ಏರ್ಪಟ್ಟು ನಾನಾ? ನೀನಾ? ಎನ್ನುವ ಪೈಪೋಟಿ ಇರುತ್ತದೆ. ಆಟಗಳನ್ನು ಚಾಲೆಂಜ್ ಆಗಿ ತೆಗೆದುಕೊಂಡು ಗೆಲ್ಲಬೇಕು. ಇದು ಆಟದಲ್ಲಿ ಗೆಲುವು ಮಾತ್ರವಲ್ಲ ಮಹಿಳೆ ಅಥವಾ ಪುರುಷರ ವಿರುದ್ಧದ ಸೋಲು ಗೆಲುವು ಕೂಡ ಆಗಿರುತ್ತದೆ. ಪುರುಷರ ತಂಡದಲ್ಲಿ ವಿನಯ್ ಗೌಡ ನಾಯಕರಾಗಿದ್ದರೆ, ಶುಭಾ ಪೂಂಜಾ ಗರ್ಲ್ಸ್ ಟೀಮ್‌ಗೆ ನಾಯಕಿ ಆಗಿದ್ದಾರೆ.

ಇನ್ನೂ ಬಿಗ್‌ಬಾಸ್‌ನ ಕೆಲ ಸ್ಪರ್ಧಿಗಳಾದ ರಜತ್, ಹನುಮಂತ ಲಮಾಣಿ, ಧನರಾಜ್ ಆಚಾರ್, ಐಶ್ವರ್ಯಾ ಶಿಂಧೋಗಿ, ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ ಸೇರಿದಂತೆ ವಿವಿಧ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಕಲಾವಿದರು ಕೂಡ ಇದರಲ್ಲಿ ಇದ್ದಾರೆ. ಕಾಮಿಡಿ ಶೋನ ಕೆಲ ಹಾಸ್ಯ ಕಲಾವಿದರು ಕೂಡ ಈ ಶೋನಲ್ಲಿ ಇದ್ದರಿಂದ ಈ ಶೋ ಭಾರೀ ಸುದ್ದಿ ಮಾಡುತ್ತಿದೆ.
ಒಟ್ಟಿನಲ್ಲಿ ನಿವೇದಿತಾ ಬಿಟ್ಟ ಉಗುರು ಇಂದಿನ ಶೋನ ಹೈಲೆಟ್ ಆಗಿದ್ದು ಯಾರು ಯಾರಿಗೆ ಜಾಮೀನು, ರಸುಗುಲ್ಲಾ, ಮೆಣಸಿನಕಾಯಿ, ಬಾಳೆಹಣ್ಣು ತಿನ್ನಿಸುತ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಇದರಿಂದಾಗಿ ಇಂದಿನ ಸಂಚಿಕೆ ವೀಕ್ಷಕರಿಗೆ ಬಾರೀ ಕುತೂಹಲವನ್ನುಂಟು ಮಾಡಿದೆ.












Click it and Unblock the Notifications