ಬೆತ್ತಲೆ ಪ್ರಪಂಚದಲ್ಲಿ ಹುಡುಗಿಯ ಕಾಲ್ಬೆರಳ ನಡುವೆ ಸಿಗರೇಟ್ ಅಂಟಿಸಿದ ಜಮೀರ್ ಮಗ ಝೈದ್ ಖಾನ್!
ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಕನ್ನಡ ಸಿನಿಮಾ ರಂಗದಲ್ಲಿ ಭರ್ಜರಿ ಸದ್ದು ಮಾಡಿ, ಬಾಲಿವುಡ್ ತನಕ ಗಮನ ಸೆಳೆದಿದ್ದಾರೆ. ಈಗಾಗಲೇ ಸ್ಯಾಂಡಲ್‌ವುಡ್ ಸಿನಿ ಪ್ರಿಯರಿಗೆ ಇದೇ ನಟ ಭರ್ಜರಿ ಸಿನಿಮಾ ಒಂದನ್ನ ನೀಡಿದ್ದಾರೆ. ಈಗ ಝೈದ್ ಖಾನ್ ಅವರ 2ನೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿ ಭರ್ಜರಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಈ ಪೋಸ್ಟರ್‌ನಲ್ಲಿ ಏನಿದೆ?
'ಬನಾರಸ್' ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಝೈದ್ ಖಾನ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದರು. ಬನಾರಸ್ ಚಿತ್ರದಲ್ಲಿ ಝೈದ್ ಖಾನ್ ನಟನೆ ನೋಡಿದ್ದ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಿನಿಮಾ ಗಲ್ಲಾಪೆಟ್ಟಿಗೆ ಸಮೇತ ಎಲ್ಲಾ ಹಂತದಲ್ಲೂ ಸದ್ದನ್ನ ಮಾಡಿ ಗಮನ ಸೆಳೆದಿತ್ತು. ಇದೀಗ ತಮ್ಮ ಮುಂದಿನ ಸಿನಿಮಾಗೆ ಝೈದ್ ಖಾನ್ ಸಜ್ಜಾಗಿದ್ದು, ಇದೇ ಸಮಯದಲ್ಲಿ ಝೈದ್ ಅವರ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

'ಉಪಾಧ್ಯಕ್ಷ' ಡೈರೆಕ್ಟರ್ ಜೊತೆ ಸಿನಿಮಾ!
2024ರ ಮೊದಲ ಹಿಟ್ 'ಉಪಾಧ್ಯಕ್ಷ' ಚಿತ್ರದ ನಿರ್ದೇಶಕ ಅನಿಲ್ ಕುಮಾರ್ & ಝೈದ್ ಖಾನ್ ಅವರ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿ ಈ ಹಿಂದೆ ಹೊರ ಬಿದ್ದಿತ್ತು. ಇದೀಗ ಎಲ್ಲಾ ಅಂದುಕೊಂಡ ರೀತಿಯೇ ಪೋಸ್ಟರ್ ಹೊರ ಬಿದ್ದಿದೆ. ಸಿನಿಮಾಗೆ 'ಕಲ್ಟ್' ಎಂಬ ಟೈಟಲ್ ಇಟ್ಟು, ಬ್ಲಡಿ ಲವ್ ಎಂಬ ಸಬ್ ಟೈಟಲ್ ಇಡಲಾಗಿದೆ. ಹೀಗಾಗಿ ಝೈದ್ ಅವರ ಮುಂದಿನ ಸಿನಿಮಾ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಮತ್ತೊಂದು ಕಡೆ ಈ ಪೋಸ್ಟರ್‌ನಲ್ಲಿ ಬೆತ್ತಲೆ ಪ್ರಪಂಚದಲ್ಲಿ ಹುಡುಗಿಯ ಕಾಲ್ಬೆರಳ ನಡುವೆ ಸಿಗರೇಟ್ ಅಂಟಿಸಿದ ಝೈದ್ ಫೋಟೋ ಗಮನ ಸೆಳೆದಿದೆ.
ಉಪಾಧ್ಯಕ್ಷ ಬಳಿಕ ಮತ್ತೊಂದು ಹಿಟ್?
ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದರು ನಟ ಚಿಕ್ಕಣ್ಣ. ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಅನಿಲ್ ಕುಮಾರ್ ಈಗ ಝೈದ್ ಖಾನ್ ಅವರ ಜೊತೆಗೆ ಸೇರಿ ಸಿನಿಮಾ ಮಾಡುತ್ತಿರುವುದು ಭಾರಿ ಗಮನ ಸೆಳೆದಿದೆ. ಚಿಕ್ಕಣ್ಣ ಅವರ ನಟನೆಗೆ ಸಖತ್ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಹಾಗೇ 'ಉಪಾಧ್ಯಕ್ಷ' ಸಿನಿಮಾ ಸಕ್ಸಸ್ ನೋಡಿ ಪ್ರೇಕ್ಷಕರು ಜೈಕಾರ ಹಾಕಿದ್ದರು. ಭರ್ಜರಿಯಾಗಿ ಹತ್ತಾರು ಕೋಟಿ ದುಡ್ಡು ಮಾಡಿದ್ದ 'ಉಪಾಧ್ಯಕ್ಷ' ಸಿನಿಮಾ ಪರಭಾಷಿಕರಿಗೆ ಕೂಡ ಇಷ್ಟವಾಗಿತ್ತು. ಇದೀಗ 'ಉಪಾಧ್ಯಕ್ಷ' ಸಿನಿಮಾದ ನಿರ್ದೇಶಕ ಝೈದ್ ಖಾನ್‌ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.
ಭರ್ಜರಿ ಹವಾ ಎಬ್ಬಿಸಿದ್ದ ಚಿಕ್ಕಣ್ಣ
ಗಣರಾಜ್ಯೋತ್ಸವ ರಜೆ ಮಧ್ಯೆ ಸಂಭ್ರಮದ ಬಿಡುಗಡೆ ಪಡೆದಿದ್ದ ಉಪಾಧ್ಯಕ್ಷ ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಈ ಸಿನಿಮಾ ರಿಲೀಸ್ ಆದ ನಂತರ ಸಾಲು, ಸಾಲು ರಜೆ ಬಂದವು. ಹೀಗಾಗಿ ಉಪಾಧ್ಯಕ್ಷ ಸಿನಿಮಾ ಮೊದಲ ದಿನ ಕೋಟಿಗೂ ಹೆಚ್ಚು ಗಳಿಸಿತ್ತಂತೆ, 2ನೇ ದಿನವು ಕೂಡ ಭರ್ಜರಿ ಕಲೆಕ್ಷನ್ ಮಾಡಿ ವೀಕೆಂಡ್ ಧಮಾಖ ಮುಂದುವರಿಸಿತ್ತು. ಆ ನಂತರ ಕೂಡ ಸಿನಿಮಾ ಫ್ಯಾನ್ಸ್ ಚಿಕ್ಕಣ್ಣನ ನಟನೆ & ಅನಿಲ್ ಕುಮಾರ್ ಅವರ ಡೈರೆಕ್ಷನ್‌ಗೆ ಫಿದಾ ಆಗಿದ್ದರು. ಇದೇ ಕಾರಣ 2024ರ ವರ್ಷದಲ್ಲಿ ಕನ್ನಡದ ಮೊದಲ ಹಿಟ್ ಸಿನಿಮಾ ಎಂಬ ಖ್ಯಾತಿ ಗಳಿಸಿತ್ತು ಕನ್ನಡಿಗರ 'ಉಪಾಧ್ಯಕ್ಷ'. ಇದೀಗ ಮತ್ತೊಂದು ಸಾಹಕ್ಕೆ ನಿರ್ದೇಶಕ ಅನಿಲ್‌ಕುಮಾರ್ ಕೈಹಾಕಿದ್ದಾರೆ.
ರಾಜಕಾರಣಿ ಮಗನಾದರೂ ಸಿನಿಮಾ ಇಷ್ಟ
ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ರಾಜಕಾರಣಿ ಮಗನಾಗಿದ್ದರೂ ಸಿನಿಮಾ ರಂಗವೇ ಇಷ್ಟ ಎಂದು ಬಂದಿದ್ದಾರೆ. ಅಲ್ಲದೆ ನೋಡೋದಕ್ಕೂ ಸ್ಮಾರ್ಟ್ ಆಗಿರುವ ಝೈದ್ ಖಾನ್ ಈಗಾಗಲೇ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಮೊದಲ ಸಿನಿಮಾದಲ್ಲೇ ಕಮಾಲ್ ಮಾಡಿರುವ ಝೈದ್ ಖಾನ್, ಈಗ ಜಸ್ಟ್ ಒಂದೇ ಒಂದು ಪೋಸ್ಟರ್ ಮೂಲಕ ತಮ್ಮ 2ನೇ ಸಿನಿಮಾ ಬಗ್ಗೆ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ತಮ್ಮ ಮನೆಯಲ್ಲಿ ಪ್ರತಿಷ್ಠಿತ ರಾಜಕೀಯ ವ್ಯಕ್ತಿಗಳೇ ಇದ್ದರೂ, ಝೈದ್ ಖಾನ್ ಮಾತ್ರ ಸಿನಿಮಾ ರಂಗದಲ್ಲಿ ಕಲಾವಿದನಾಗಿ ಬೆಳೆಯುವ ಗುರಿ ಹೊಂದಿರುವುದು ವಿಶೇಷ. ಹೊಸ ಸಿನಿಮಾದ ಪೋಸ್ಟರ್ ಮೂಲಕ ಮತ್ತಷ್ಟು ಗಮನ ಸೆಳೆಯುತ್ತಿದ್ದಾರೆ ಝೈದ್ ಖಾನ್.












Click it and Unblock the Notifications