Nayanthara: ಡಿವೋರ್ಸ್‌ ವದಂತಿ ನಡುವೆ ನಯನತಾರಾಗೆ ಬಿಗ್‌ ಶಾಕ್‌, ₹5 ಕೋಟಿ ಪರಿಹಾರ ಕೇಳಿ ನೋಟಿಸ್‌

ದಕ್ಷಿಣ ಸಿನಿಮಾರಂಗದ ಖ್ಯಾತ ನಟಿ ನಯನತಾರಾ ಹಾಗೂ ವಿಘ್ನೇಶ್‌ ಶಿವನ್‌ ದಂಪತಿ ಡಿವೋರ್ಸ್‌ ಪಡೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಈ ಬಗ್ಗೆ ನಯನತಾರಾ ಅವರು ಯಾವುದೇ ಅಧಿಕೃತ ಹೇಳಿಕೆ ಅಥವಾ ಸ್ಪಷ್ಟನೆ ನೀಡಿರಲಿಲ್ಲ. ಆದರೆ ನಯನತಾರಾ ಹಾಗೂ ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಡಿವೋರ್ಸ್‌ ವದಂತಿ ಸುಳ್ಳು ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ನಯನತಾರಾ ಅವರ ಸಿನಿಮಾ ನಿರ್ಮಾಪಕರು ಬರೋಬ್ಬರಿ ₹5 ಕೋಟಿ ಪರಿಹಾರ ನೀಡುವಂತೆ ಲೀಗಲ್‌ ನೋಟಿಸ್‌ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನಯನತಾರಾ ನಟನೆಯ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿ 'Nayanthara: Beyond The Fairytale' ಮತ್ತೆ ವಿವಾದದಲ್ಲಿ ಸಿಲುಕಿದೆ. 2005ರಲ್ಲಿ ತೆರೆಕಂಡಿದ್ದ ಸೂಪರ್‌ಹಿಟ್ ತಮಿಳು ಚಿತ್ರ "ಚಂದ್ರಮುಖಿ"ಯ ಹಕ್ಕುದಾರರಾದ ಎಪಿ ಇಂಟರ್‌ನ್ಯಾಷನಲ್‌ ಕಂಪನಿಯವರು ಈ ಡಾಕ್ಯುಮೆಂಟರಿಯಲ್ಲಿ ತಮ್ಮ ಸಿನಿಮಾದ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಿದ್ದಾರೆ ಎಂದು ಆರೋಪಿಸಿ ಅದರ ನಿರ್ಮಾಪಕರಿಗೆ ಹಾಗೂ ನೆಟ್‌ಫ್ಲಿಕ್ಸ್‌ಗೆ ₹5 ಕೋಟಿ ಪರಿಹಾರ ನೀಡುವಂತೆ ಲೀಗಲ್ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ.

Nayanthara Documentary Faces 5 Crore Legal Notice Amid Divorce Rumors What Is Real Issue

ಎಪಿ ಇಂಟರ್‌ನ್ಯಾಷನಲ್‌ ಕಂಪನಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಡಾಕ್ಯುಮೆಂಟರಿ ನಿರ್ಮಾಪಕರಾದ ಟಾರ್ಕ್‌ ಸ್ಟುಡಿಯೋ ಹಾಗೂ ನೆಟ್‌ಫ್ಲಿಕ್ಸ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅವರ ಪ್ರಕಾರ, ಸಾಕ್ಷ್ಯಚಿತ್ರ ನಿರ್ಮಾಪಕರು ಯೂಟ್ಯೂಬ್‌ನಿಂದ ಚಂದ್ರಮುಖಿ ಸಿನಿಮಾದ ದೃಶ್ಯಗಳನ್ನು ಪಡೆದು ಯಾವುದೇ ಪೂರ್ವಾನುಮತಿ ಅಥವಾ ಪರವಾನಗಿ ಇಲ್ಲದೆ ಬಳಸಿದ್ದಾರೆ. ಈ ಬಗ್ಗೆ ಈಗಾಗಲೇ ನಿರ್ಮಾಪಕರಿಗೆ ನೋಟಿಸ್ ನೀಡಿದ್ದು, ₹5 ಕೋಟಿ ಹಾನಿ ಪರಿಹಾರಕ್ಕೂ ಬೇಡಿಕೆ ಇಟ್ಟಿದ್ದಾರೆ.

ಜೊತೆಗೆ, ಡಾಕ್ಯುಮೆಂಟರಿಯಿಂದ ಚಂದ್ರಮುಖಿ ದೃಶ್ಯಗಳನ್ನು ತೆಗೆದು ಹಾಕುವಂತೆ ಮತ್ತು ಡಾಕ್ಯುಮೆಂಟರಿಯಿಂದ ಆದ ಆದಾಯವನ್ನು ಬಹಿರಂಗಪಡಿಸುವಂತೆ ಕೂಡ ಕೋರಿ ಅರ್ಜಿ ಸಲ್ಲಿಸಲಾಗಿದೆ. ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಸೆಂತಿಲ್‌ ಕುಮಾರ್ ರಾಮಮೂರ್ತಿ ಅವರು, ನಿರ್ಮಾಪಕರಿಗೆ ಮತ್ತು ನೆಟ್‌ಫ್ಲಿಕ್ಸ್‌ಗೆ ಎರಡು ವಾರಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಈ ಹಿಂದೆ ನಟ ಧನುಷ್‌ ಅವರ "ನಾನುಂ ರೌಡಿ ಧಾನ್" ಸಿನಿಮಾದ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಿದ ಕಾರಣಕ್ಕೂ ₹10 ಕೋಟಿ ಮೊತ್ತದ ದಾವೆ ಸಲ್ಲಿಸಲಾಗಿತ್ತು. ನಯನತಾರಾ ಅವರ ಮೇಲೆ ಇರುವ ಕಾನೂನು ಪ್ರಕರಣಗಳು ಮತ್ತು ವಿವಾದಗಳು ಅವರ ಮುಂದಿನ ಚಿತ್ರರಂಗದ ಅವಕಾಶಗಳಿಗೆ ತಾತ್ಕಾಲಿಕವಾಗಿ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣದ ನ್ಯಾಯಾಲಯದ ತೀರ್ಪು ಮತ್ತು ಅವರ ತಂಡದ ಸ್ಪಷ್ಟನೆಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+