ಸೀರೆಯಿಂದ ಶುರುವಾದ ಜಗಳ ಗಿಣಿರಾಮ ಧಾರಾವಾಹಿಯನ್ನು ಮುಗಿಸಿಬಿಡ್ತು- ನಯನಾ ನಾಗರಾಜ್

ಗಿಣಿರಾಮ ಧಾರಾವಾಹಿಯ ನಟಿ ನಯನಾ ನಾಗರಾಜ್ ಪ್ರಸ್ತುತ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಈಗ ಅವರು ನಟನಾ ವೃತ್ತಿಗೆ ಗುಡ್ ಬಾಯ್ ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಅವರು ಹಲವಾರು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೀಗ ಧಾರಾವಾಹಿಯಲ್ಲಿ ನಟಿಸುವ ನಟಿಯರಿಗೆ ಎಷ್ಟೆಲ್ಲಾ ತೊಂದರೆಗಳು ಇರುತ್ತವೆ ಅನ್ನೋದನ್ನು ನಟಿ ಸವಿಸ್ತಾರವಾಗಿ ವಿವರಿಸಿದ್ದಾರೆ. ಅಲ್ಲದೆ ತಾವು ಗಿಣಿರಾಮ ಧಾರಾವಾಹಿಯಿಂದ ದೂರ ಸರಿಯಲು ಕಾರಣ ಸೀರೆ ಎಂದು ಹೇಳಿಕೊಂಡಿದ್ದಾರೆ.

ರಾಜೇಶ್ ರಿವೀಲ್ಸ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ನಯನಾ, ಒಂದು ಧಾರಾವಾಹಿ ಮಾಡಬೇಕಾದರೆ ನಟಿಯರು ಯಾವ ರೀತಿ ಸಿದ್ಧರಾಗಿರಬೇಕು? ಯಾವ ರೀತಿಯ ನಿರೀಕ್ಷೆಗಳಿರುತ್ತವೆ ಅನ್ನೋದನ್ನು ವಿವರಿಸಿದ್ದಾರೆ. ಅಲ್ಲದೆ ತಾವು ಗಿಣಿರಾಮ ಧಾರವಾಹಿಯಿಂದ ದೂರ ಉಳಿಯಲು ಕಾರಣವನ್ನು ಹಂಚಿಕೊಂಡಿದ್ದಾರೆ.

nayana nagaraj told kannada ginirama serial ending real reason is sari

ಗಿಣಿರಾಮ ಧಾರಾವಾಹಿ ಮಾಡುವಾಗ ನಯನಾ ನಾಗರಾಜ್ ಅವರು ತಿಂಗಳಿಗೆ ಸರಿಸುಮಾರು 6 ರಿಂದ 7 ಹೊಸ ಸೀರೆ ಖರೀದಿಸಲೇಬೇಕಿತ್ತಂತೆ. ಅಲ್ಲದೆ ಪ್ರತಿ ಭಾರಿ ಶೂಟಿಂಗ್ ವೇಳೆ ಹೊಸ ಸೀರೆಯನ್ನೇ ಹಾಕಬೇಕಿತ್ತು. ಒಂದು ದಿನ ಹಾಕಿದ ಸೀರೆ ಮತ್ತೊಂದು ದಿನ ಹಾಕುವಂತಿರಲಿಲ್ಲ. ಬರೀ ಸೀರೆ ಮಾತ್ರವಲ್ಲದೆ ಅದಕ್ಕೆ ಬ್ಲೌಸ್ ಕೂಡ ಹೊಸದಾಗಿರಬೇಕಿತ್ತು. ಜೊತೆಗೆ ಕಿವಿ ಓಲೆ, ಸೆಕ್ಲೆಸ್ ಕೂಡ ಹೊಸದಾಗಿರಬೇಕಿತ್ತು.

ಹಾಕಿದ್ದೇ ಸೀರೆ ಹಾಕಿದರೆ ಅಥವಾ ಹಾಕಿದ್ದೇ ಆಭರಣ ತೊಟ್ಟರೆ ಚಾನೆಲ್ ಕಡೆಯಿಂದ ಕರೆ ಮಾಡಿ ಮುಂದೆ ಇದು ಪುನರಾವರ್ತಿಸದಂತೆ ಎಚ್ಚರಿಕೆ ಕೊಡುತ್ತಿದ್ದರು. ಇಷ್ಟೆಲ್ಲಾ ಖರೀದ ಮಾಡಲು ನಯನಾ ಅವರಿಗೆ ಇದ್ದ ಸಂಬಳ ಕೂಡ ತೀರಾ ಕಡಿಮೆ. ತಿಂಗಳಿಗೆ 11 ರಿಂದ 13 ಬಾರಿ ಶೂಟಿಂಗ್ ಕರೆದು ದಿನಕ್ಕೆ 4000 ಸಂಬಳ ಕೊಡುತ್ತಿದ್ದರು. ಈ ಸಂಬಳದಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಸೀರೆ, ಬ್ಲೌಸ್ ಸ್ಟಿಚ್ಚಿಂಗ್ ಖರ್ಚು ಆಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಒಂದು ದಿನ ಪ್ರೋಮೋ ಶೂಟಿಂಗ್ ಮಾಡಲು ರಾತ್ರಿ ಹೊತ್ತು ಕರೆ ಮಾಡಿ ಬೆಳಿಗ್ಗೆ ಬರಲು ಹೇಳಿದ್ದರಂತೆ. ಆದರೆ ರಾತ್ರಿ ಹೊತ್ತು ಹೇಳಿದ್ದರಿಂದ ನಯನಾ ಹೊಸ ಸೀರೆ ಖರೀದಿ ಮಾಡಲು ಆಗಿರಲಿಲ್ಲ. ಹೀಗಾಗಿ ಅವರು ಮುಂಚಿತವಾಗಿ ಮಾಹಿತಿ ನೀಡಿ ಈ ಹಿಂದೆ ಉಟ್ಟ ಸೀರೆಯನ್ನೇ ತೊಟ್ಟು ಶೂಟಿಂಗ್ ಸ್ಪಾಟ್‌ಗೆ ಹೋಗಿದ್ದರಂತೆ. ಆಗ ಗಿಣಿರಾಮ ಧಾರಾವಾಹಿಯ ಕ್ಯಾಮರಾ ಮ್ಯಾನ್ ಹಾಗೂ ನಯನಾ ನಾಗರಾಜ್ ಅವರಿಗೆ ಜಗಳ ಶುರುವಾಯ್ತು.

ಈ ಜಗಳದ ನಂತರ ನಯನಾ ಅವರನ್ನು ಶೂಟಿಂಗ್ ಸ್ಪಾಟ್‌ನಲ್ಲಿ ಕೀಳಾಗಿ ಕಾಣಲು ಶುರು ಮಾಡಿದ್ದರಂತೆ. ಹಲವಾರು ಬಾರಿ ಈ ವಿಚಾರ ನಿರ್ಮಾಪಕರಿಗೆ ಹಾಗೂ ಚಾನೆಲ್ ವರಗೆ ತಂದರೂ ಕೂಡ ಪ್ರಯೋಜನವಾಗಲಿಲ್ಲ. ಹೀಗಾಗಿ ತಾವೇ ವೈಯಕ್ತಿಕ ಕಾರಣ ನೀಡಿ ಧಾರಾವಾಹಿ ಶೂಟಿಂಗ್‌ಗೆ ಹೋಗುವುದನ್ನು ನಿಲ್ಲಿಸಿದ್ದಾರಂತೆ.

ಆದರೆ ನಯನಾ ಅವರಿಂದಲೇ ಧಾರಾವಾಹಿ ನಿಂತೋಯ್ತು. ಅರ್ಧದಲ್ಲಿ ನಯನಾ ಧಾರಾವಾಹಿ ಬಿಟ್ಟುಬಿಟ್ಟರು ಎಂದು ಅವರನ್ನು ಮುಂದೆ ಯಾವುದೇ ಪ್ರಾಜಕ್ಟ್ ನಿಂದ ಬ್ಯಾನ್ ಮಾಡಿದ್ದಾರೆ ಎಂದು ನಯನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಶೂಟಿಂಗ್ ಸ್ಪಾಟ್‌ನಲ್ಲಿ ಶುರುವಾದ ಸೀರೆ ಜಗಳ ನಯನಾ ಅವರು ಗಿಣಿರಾಮ ಧಾರಾವಾಹಿಯಿಂದ ಹೊರ ಬರುವವರೆಗೂ ತಂದು ನಿಲ್ಲಿಸಿದೆ ಎಂದು ನಯಾನಾ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+