Taapsee Pannu: ನರೇಂದ್ರ ಮೋದಿ ಇಷ್ಟದ ರಾಜಕಾರಣಿ; ಯಾಕೆಂದರೆ ಈ ದೇಶದಲ್ಲಿ ನಾನು ಇನ್ನೂ ಇರಬೇಕು: ನಟಿ ತಾಪ್ಸಿ ಪನ್ನು

Taapsee Pannu: ನಟಿ ತಾಪ್ಸಿ ಪನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿ ಇದ್ದಾರೆ. ದಕ್ಷಿಣ ಭಾರತದ ವಿವಿಧ ಭಾಷೆಯ ಸಿನಿಮಾಗಳು ಹಾಗೂ ಬಾಲಿವುಡ್‌ನಲ್ಲೂ ಮಿಂಚಿರುವ ನಟಿ ತಾಪ್ಸಿ ಪನ್ನು ಅವರು ರಾಜಕೀಯ ವಿಚಾರವಾಗಿ ನೀಡುವ ಕೆಲವೊಂದು ಹೇಳಿಕೆಗಳು ಭಿನ್ನಾಭಿಪ್ರಾಯಗಳನ್ನು ಸೃಷ್ಟಿ ಮಾಡಿರುವುದು ಇದೆ. ಅಲ್ಲದೇ ಈ ಹಿಂದೆ ಅವರು ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. ಆದರೆ ಇದೀಗ ನನಗೆ ಮೋದಿ ಎಂದರೆ ಇಷ್ಟ ಆದರೆ... ಎಂದು ಮಾರ್ಮಿಕವಾಗಿ ಅವರು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಈ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಐಕ್ಯೂಲೆವೆಲ್ ಹೆಚ್ಚಿಗೆ ಇರಬೇಕು ಎನ್ನುವ ಟ್ರೋಲ್ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ - ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಬಗ್ಗೆ ನಟಿ ತಾಪ್ಸಿ ಪನ್ನು ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ನಟಿ ತಾಪ್ಸಿ ಪನ್ನು ಅವರು ತಮ್ಮ ನೇರ ನಡೆ - ನುಡಿಯಿಂದ ಈ ಹಿಂದೆ ಟ್ರೋಲ್‌ಗಳಿಗೆ ಗುರಿಯಾಗಿದ್ದು ಇದೆ. ಆದರೆ ಇದೀಗ ಅವರು ಸಂದರ್ಶನವೊಂದರಲ್ಲಿ ಜಾಣ್ಮೆಯಿಂದ ಉತ್ತರಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ, ಪಾಪರಾಜಿಗಳೊಂದಿಗೆ ಜಗಳ, ರಾಜಕೀಯ ಹೇಳಿಕೆಗಳು ಮತ್ತು ಕಂಗನಾ ರಣಾವತ್ ಜೊತೆಗಿನ ವಾಕ್ಸಮರ ಸೇರಿದಂತೆ ಹಲವು ಕಾರಣಕ್ಕೆ ಈ ಹಿಂದೆ ನಟಿ ತಾಪ್ಸಿ ಪನ್ನು ಸುದ್ದಿಯಲ್ಲಿದ್ದರು. ಇತ್ತೀಚಿನ ನಟಿ ತಾಪ್ಸಿ ಪನ್ನು ಅವರು ಧರಿಸಿದ್ದ ಉಡುಪಿನಿಂದಾಗಿ (ದೇವಿ ಲಕ್ಷ್ಮಿಯ ಚಿತ್ರವಿರುವ ಲಾಕೆಟ್) ಕಾನೂನು ಕ್ರಮವನ್ನೂ ಎದುರಿಸಬೇಕಾಗಿತ್ತು. ಆದರೆ ಅವರು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಕೊಟ್ಟಿರುವ ಉತ್ತರ ಗಮನ ಸೆಳೆದಿದೆ.

Taapsee Pannu

ಇತ್ತೀಚಿಗೆ Tv9 ಸಂದರ್ಶನದಲ್ಲಿ ನಟಿ ತಾಪ್ಸಿ ಪನ್ನು ಅವರು ಆಯಂಕರ್ ಪ್ರಶ್ನೆಗೆ ಉತ್ತರಿಸಿರುವ ವಿಧಾನ ಹಾಗೂ ಅದಾದ ಮೇಲೆ ಕೊಟ್ಟಿರುವ ಹೇಳಿಕೆ ವೈರಲ್ ಆಗುತ್ತಿದೆ. ಮೊದಲಿಗೆ ಈ ಮಹಿಳಾ ರಾಜಕಾರಣಿಗಳಲ್ಲಿ ನಿಮಗೆ ಇಷ್ಟವಾದ ರಾಜಕಾರಣಿ ಯಾರು ಎಂದು ಮಮತಾ ಬ್ಯಾನರ್ಜಿ, ಸ್ಮೃತಿ ಇರಾನಿ, ಮಾಯಾವತಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಫೋಟೋ ತೋರಿಸಿ, ಆಯ್ಕೆ ನೀಡಲಾಗಿದೆ. ಇದರಲ್ಲಿ ನಟಿ ತಾಪ್ಸಿ ಪನ್ನು ಅವರು, ತುಂಬಾ ಯೋಚನೆ ಮಾಡಿದ್ದಾರೆ. ಇಷ್ಟೊಂದು ಯಾಕೆ ಯೋಚನೆ ಮಾಡುತ್ತಿದ್ದೀರಿ, ನಾನು ನೀವು ಇಷ್ಟು ಯೋಚನೆ ಮಾಡುವುದನ್ನು ನೋಡಿಲ್ಲ ಎಂದು ಆಂಕರ್ ಹೇಳಿದ್ದಾರೆ. ಮುಂದುವರಿದು ಈ ಇಬ್ಬರು ರಾಜಕಾರಣಿಗಳಲ್ಲಿ ನಿಮಗೆ ಯಾರು ಇಷ್ಟ ಎಂದು ಪ್ರಧಾನಿ ನರೇಂದ್ರ್ ಮೋದಿ ಹಾಗೂ ರಾಹುಲ್ ಗಾಂಧಿ ಅವರ ಫೋಟೋ ಆಯ್ಕೆಯನ್ನು ಕೊಡಲಾಗಿದೆ.

ವೈರಲ್ ವಿಡಿಯೋದಲ್ಲಿ ನಟಿ ತಾಪ್ಸಿ ಪನ್ನು ಹೇಳಿದ್ದೇನು

ಇನ್ನು ನಟಿ ತಾಪ್ಸಿ ಪನ್ನು ಅವರು ಕೈ ಮುಗಿದು ಮೋದಿ ಫೋಟೋವನ್ನು ಆಯ್ಕೆ ಮಾಡಿದ್ದಾರೆ. "ಕೈಮುಗಿಯುತ್ತಲ್ಲೇ ನನಗೆ ಇನ್ನೂ ಈ ದೇಶದಲ್ಲಿ ಜೀವಿಸಬೇಕಿದೆ" ಎಂದು ಹೇಳಿದ್ದಾರೆ. ಇದೀಗ ತಾಪ್ಸಿ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+