Mrunal Thakur: ಸಾಕು ದಯವಿಟ್ಟು ನಿಲ್ಲಿಸಿ ಎಂದ ಮೃಣಾಲ್ ಠಾಕೂರ್
ಬಾಲಿವುಡ್, ಟಾಲಿವುಡ್‌ನಲ್ಲಿ ಸಖತ್ ಹೆಸರು ಮಾಡುತ್ತಿರುವ ನಟಿ ಮೃಣಾಲ್ ಠಾಕೂರ್ ಅವರಿಗೆ ಅಭಿಮಾನಿಗಳು ವಿರಾಟ್ ಕೊಹ್ಲಿ ವಿಚಾರದಲ್ಲಿ ಪದೇ ಪದೇ ತೊಂದರೆ ಕೊಡುತ್ತಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ಮೃಣಾಲ್ ಠಾಕೂರ್ ಮಾಡಿದ್ದ ಕಾಮೆಂಟ್ ಒಂದು ಆಕೆಯನ್ನು ಪದೇ ಪದೇ ಕಾಡುತ್ತಿದ್ದು, ಇದರಿಂದ ಬೇಸತ್ತಿರುವ ಅವರು ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಕ್ರಿಕೆಟಿಗನ ಜೀವನಾಧಾರಿತ ಕಥೆಯನ್ನು ಒಳಗೊಂಡಿದ್ದ ಜೆರ್ಸಿ ಸಿನಿಮಾ ಪ್ರಚಾರದ ಸಮಯದಲ್ಲಿ ಮೃಣಾಲ್ ಠಾಕೂರ್, ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದು ಆಗಾಗ್ಗೆ ವೈರಲ್ ಆಗುತ್ತಿರುತ್ತಿದೆ. ಆಕೆಯ ಹೇಳಿಕೆಯನ್ನು ಇನ್‌ಸ್ಟಂಟ್ ಬಾಲಿವುಡ್ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹೈಲೈಟ್ ಮಾಡಲಾಗಿದೆ. ಪೋಸ್ಟ್‌ನಲ್ಲಿ ಕೊಹ್ಲಿಯ ಕಟೌಟ್ ಜೊತೆಗೆ ಮೃಣಾಲ್ ಠಾಕೂರ್ ಅವರ ಹಳೆಯ ಫೋಟೊವನ್ನು ಒಳಗೊಂಡಿತ್ತು. ರೆಡ್ಡಿಟ್‌ನಲ್ಲಿ ಕೂಡ ಇದನ್ನು ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿತ್ತು.

ತಮ್ಮ ಹಳೆಯ ಹೇಳಿಕೆ ಪದೇ ಪದೇ ವೈರಲ್ ಆಗುತ್ತಿರುವುದನ್ನು ನೋಡಿದ ಮೃಣಾಲ್ ಠಾಕೂರ್ "ಇದನ್ನು ಇಲ್ಲಿಗೆ ನಿಲ್ಲಿಸಿ" (ಸ್ಟಾಪ್ ಇಟ್ ಒಕೆ) ಎಂದು ಅಸಮಾಧಾನದಿಂದ ಪೋಸ್ಟ್ ಹಾಕಿದ್ದಾರೆ. ಅವರ ಪ್ರತಿಕ್ರಿಯೆ ಕೂಡ ವೈರಲ್ ಆಗಿದ್ದು ಅಭಿಮಾನಿಗಳು ಅವರ ಪ್ರತಿಕ್ರಿಯೆಯನ್ನು ತಮಾಷೆ ಎಂದು ಕರೆದಿದ್ದಾರೆ.
"ಅವರ ಕಾಮೆಂಟ್ ಅವರು ಹಿಂದೆ ಆಡಿದ ಮಾತನ್ನು ಒಪ್ಪಿಕೊಂಡಂತೆ ಮತ್ತು ಮುಜುಗರ ಅನುಭವಿಸುತ್ತಿರುವಂತೆ ಅನಿಸುತ್ತಿದೆ" ಎಂದು ಹೇಳಿದ್ದಾರೆ. ಇನ್ನೊಬ್ಬರು ಹಿಂದಿನ ರಿಲೇಷನ್‌ಶಿಪ್, ಕ್ರಷ್‌ಗಳ ಬಗ್ಗೆ ಸ್ನೇಹಿತರು ಹೇಗೆ ಕೀಟಲೆ ಮಾಡುತ್ತಾರೆ ಎನ್ನುವುದನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.
ಮೃಣಾಲ್ ಠಾಕೂರ್ ಹೇಳಿದ್ದೇನು?
ಶಾಹಿದ್ ಕಪೂರ್ ಜೊತೆಗೆ ನಟಿಸಿದ್ದ ಜೆರ್ಸಿ ಸಿನಿಮಾ ಪ್ರಚಾರ ಮಾಡುವ ಸಂದರ್ಭದಲ್ಲಿ ಮೃಣಾಲ್ ಠಾಕೂರ್ ವಿರಾಟ್ ಕೊಹ್ಲಿಯನ್ನು ಪ್ರೀತಿಸುತ್ತಿರುವ ಮಾಹಿತಿ ಹಂಚಿಕೊಂಡಿದ್ದಾರೆ. "ನಾನು ವಿರಾಟ್ ಕೊಹ್ಲಿಯನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದೆ. ನನ್ನ ಸಹೋದರನಿಂದ ನಾನು ಕ್ರಿಕೆಟ್ ಇಷ್ಟಪಡಲು ಆರಂಭಿಸಿದೆ. ಸ್ಟೇಡಿಯಂನಲ್ಲಿ ಹಲವು ಪಂದ್ಯಗಳನ್ನು ನೋಡಿದ್ದೇನೆ. ನಾನು ನೀಲಿ ಜರ್ಸಿ ಧರಿಸಿ ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿದ್ದದ್ದು ನನಗೆ ನೆನಪಿದೆ. ಜರ್ಸಿಯಂತಹ ಸಿನಿಮಾದ ಭಾಗವಾಗಿರುವುದು ನನಗೆ ಸಂತೋಷವಾಗುತ್ತಿದೆ" ಎಂದು ಹೇಳಿದ್ದರು.
ಮೃಣಾಲ್ ಠಾಕೂರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸನ್ ಆಫ್ ಸರ್ದಾರ್ 2 ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸ್ಕಾಟ್ಲೆಂಡ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ತೆಲುಗಿನ ಸೀತಾ ರಾಮನ್, ಹಾಯ್ ನಾನ್ನ ಸಿನಿಮಾಗಳು ಮೃಣಾಲ್ ಠಾಕೂರ್ ಗೆ ಸಾಕಷ್ಟು ಹೆಸರು ತಂದುಕೊಟ್ಟವು, ಗ್ಲಾಮರ್ ನಿಂದ ಮಾತ್ರವಲ್ಲದೆ ಆಕೆಯ ಅಭಿನಯ ಸಿನಿಪ್ರಿಯರ ಮನಗೆದ್ದಿದೆ.












Click it and Unblock the Notifications