ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಮೊದಲು ‘ಹನುಮಾನ್’ ಸಂಭ್ರಮ!
ಟಾಲಿವುಡ್ ಸಿನಿಮಾ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಸೂಪರ್ ಹೀರೋ ಕಾನ್ಸೆಪ್ಟ್ ಹೊಂದಿದ ಹನುಮಾನ್ ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು. ತೇಜ ಸಜ್ಜಾ, ವರಲಕ್ಷ್ಮೀ ಶರತ್ ಕುಮಾರ್, ಕನ್ನಡದವರೆ ಆದ ಅಮೃತಾ ಐಯ್ಯರ್, ದೀಪಕ್ ಶೆಟ್ಟಿ ನಟಿಸಿದ ಸಿನಿಮಾ ದೊಡ್ಡ ಸಕ್ಸಸ್ ಗಳಿಸಿದೆ. ಹೀಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಮೊದಲು 'ಹನುಮಾನ್' ಸಂಭ್ರಮ ಥಿಯೇಟರ್‌ಗಳಲ್ಲಿ ಶುರುವಾಗಿದೆ.
ಈಗಾಗಲೇ ಹಲವು ಸ್ಟಾರ್ ನಟರು 'ಹನುಮಾನ್' ಸಿನಿಮಾ ನೋಡಿ ಗ್ರೇಟ್ ಅಂತಾ ಹೇಳಿ ಸಿನಿಮಾ ತಂಡದ ಬೆನ್ನು ತಟ್ಟಿದ್ದಾರೆ. ಈ ಮೂಲಕ ತೇಜ ಸಜ್ಜಾ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಇದೇ ಸಮಯದಲ್ಲಿ ಸಂಸದ ತೇಜಸ್ವಿ ಸೂರ್ಯ ಕೂಡ ಸಿನಿಮಾ ತಂಡವನ್ನ ಭೇಟಿ ಮಾಡಿ ಶುಭ ಹಾರೈಸಿದ್ದಾರೆ. ಸ್ಪೆಷಲ್ ಗ್ರಾಫಿಕ್ಸ್ & ಕಥೆ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯಲು ಸಜ್ಜಾಗಿದೆ. ಹಾಗಾದರೆ ಸಂಸದ ತೇಜಸ್ವಿ ಸೂರ್ಯ ಈ ಸಿನಿಮಾ ಬಗ್ಗೆ ಹೇಳಿದ್ದೇನು?

ಸ್ಟಾರ್ ಸಿನಿಮಾಗಳಿಗೂ ಟಕ್ಕರ್!
ಹೌದು ಸಂಸದ ತೇಜಸ್ವಿ ಸೂರ್ಯ ಅವ್ರನ್ನ ನಟ ತೇಜ ಸಜ್ಜಾ ಬೆಂಗಳೂರಲ್ಲಿ ಭೇಟಿ ಮಾಡಿದ್ದಾರೆ ಈ ವೇಳೆ ಸಿನಿಮಾ ಬಗ್ಗೆ ನಟ ತೇಜ ಮಾಹಿತಿ ನೀಡಿದ್ದಾರೆ. ಇನ್ನು ಇದು ಒಂದು ಆತ್ಮೀಯ ಭೇಟಿ, ಹನುಮಾನ್ ಸಿನಿಮಾ ಶೀಘ್ರದಲ್ಲಿಯೇ ವೀಕ್ಷಿಸುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ. ಸುಗ್ಗಿ ಸಂಭ್ರಮದ ವಿಶೇಷವಾಗಿ ರಿಲೀಸ್ ಆದ ಹನುಮಾನ್ ಸಿನಿಮಾ ಇದೀಗ ಬಾಕ್ಸಾಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ನೂರು ಕೋಟಿ ಬಾಚಿಕೊಂಡಿರುವ ತೇಜ ಸಜ್ಜಾ ಚಿತ್ರ ಸ್ಟಾರ್ ಹೀರೋ ಚಿತ್ರಗಳಿಗೆ ಕೂಡ ಟಕ್ಕರ್ ಕೊಟ್ಟು ಗಲ್ಲಾ ಪೆಟ್ಟಿಗೆಯಲ್ಲಿ ಮುನ್ನುಗ್ಗುತ್ತಿದೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಮೆಚ್ಚುಗೆ
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ, ಕುಟುಂಬ ಸಮೇತ ಹನು-ಮಾನ್ ಸಿನಿಮಾ ನೋಡಿದ ಶಿವಣ್ಣಗೆ ತೇಜ್ ಸಜ್ಜಾ & ಅಮೃತಾ ಸಾಥ್ ಕೊಟ್ರು. ಇನ್ನು ಚಿತ್ರ ವೀಕ್ಷಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವಣ್ಣ ಹನುಮಾನ್ ಸಿನಿಮಾ 'ಮೈಂಡ್ ಬ್ಲೋಯಿಂಗ್' ಅಂತಾ ಹೇಳಿದ್ದಾರೆ. ಇದರ ಜೊತೆ ತೇಜ ಸಜ್ಜಾ, ಅಮೃತಾ, ವರಲಕ್ಷ್ಮೀ ಅಭಿನಯದ ಬಗ್ಗೆ ಈ ವೇಳೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಈ ಮಾತುಗಳು ಸಿನಿಮಾ ತಂಡಕ್ಕೆ ಮತ್ತಷ್ಟು ಬಲ ನೀಡಿದಂತೆ ಇತ್ತು.

ಹೇಗಿದೆ ಸಿನಿಮಾ ತಂಡ?
ಪ್ರಶಾಂತ್ ವರ್ಮ ಆಕ್ಷನ್ ಕಟ್ ಹೇಳಿರುವ, ತೇಜ ಸಜ್ಜ ನಟನೆ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ 'ಹನು-ಮಾನ್' ಸಂಕ್ರಾಂತಿಗೆ ರಿಲೀಸ್ ಆಗಿದ್ದು. ಇದೀಗ ಸಿನಿಮಾಗೆ ಭರ್ಜರಿ ರೆಸ್ಪಾನ್ ಸಿಕ್ಕಿದೆ. ಇನ್ನ ಈ ಸಿನಿಮಾದ ನಾಯಕ ತೇಜ್ ಸಜ್ಜಾ ಫುಲ್ ಖುಷಿಯಾಗಿ ಮೊದಲ ಸಿನಿಮಾದಲ್ಲೇ ಭರ್ಜರಿ ಗೆಲುವು ಸಾಧಿಸಿದ್ದಾರೆ. ವರಲಕ್ಷ್ಮೀ ಶರತ್ ಕುಮಾರ್ & ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ, ಇಂಗ್ಲೀಷ್, ಸ್ಯಾನೀಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲಿ ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬಕ್ಕೆ ವಿಶ್ವಾದ್ಯಂತ ಹನುಮಾನ್ ದರ್ಶನ ಆಗಿದ್ದು, ಕನ್ನಡದಲ್ಲಿ ಚಿತ್ರವನ್ನು ಕೆಆರ್‌ಜಿ ಬಿಡುಗಡೆ ಮಾಡಿದೆ. ಹೀಗೆ ಸಖತ್ ಸದ್ದು ಮಾಡುತ್ತಿದೆ ಟಾಲಿವುಡ್ ಸಿನಿಮಾ.












Click it and Unblock the Notifications