Movies at Rs 99: ಥಿಯೇಟರ್‌ಗೆ ಬರದ ಪ್ರೇಕ್ಷಕರು; ಭಾರೀ ರಿಯಾಯಿತಿ ಘೋಷಣೆ
ಸದ್ಯ ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುವುದೆ ಕಡಿಮೆಯಾಗಿದೆ. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೊಸಬರ ಸಿನಿಮಾಗಳನ್ನು ನೋಡಲು ಥಿಯೇಟರ್‌ಗೆ ಜನ ಬರುತ್ತಿಲ್ಲ.. ಹೀಗಿರುವಾಗ ಥಿಯೇಟರ್‌ಗಳು ಮಾಡುವುದಾದರು ಏನು..? ಜನರನ್ನು ಥಿಯೇಟರ್‌ಗೆ ಎಳೆಯುವ ಕಾರಣ ಥಿಯೇಟರ್‌ಗಳು ಹೊಸ ಹೊಸ ಪ್ರಯತ್ನ ಮಾಡುತ್ತಿವೆ.
ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್‌ಗಳಲ್ಲಿ ಆಕ್ಯುಪೆನ್ಸಿ ಕುಸಿತಗೊಂಡಿದೆ. ಹೀಗಾಗಿ ಚಿತ್ರಮಂದಿರಗಳು ಚಲನಚಿತ್ರ ಟಿಕೆಟ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿವೆ. PVR Inox, Cinepolis India, Miraj Cinemas, Multa A2, ಮತ್ತು MovieMax ನಂತಹ ಟಾಪ್ ಮಲ್ಟಿಪ್ಲೆಕ್ಸ್‌ಗಳು ಮೇ 31 ರಂದು ಸಿನಿಮಾ ಪ್ರೇಮಿಗಳ ದಿನವಾಗಿ ಆಚರಿಸಲಿದ್ದಾರೆ. ಈ ವೇಳೆ ಸಿನಿಮಾ ಟಿಕೆಟ್‌ಗಳು 99 ರೂಪಾಯಿಗಳಲ್ಲಿ ಸಿಗಲಿವೆ.

"ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್ ಸ್ಕ್ರೀನ್‌ಗಳು ಒಟ್ಟಾಗಿ ಈ ಒಪ್ಪಂದಕ್ಕೆ ಬಂದಿವೆ. ಒಟ್ಟು 4,000 ಪರದೆಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ಈ ಪರದೆಗಳಲ್ಲಿ ಚಲನಚಿತ್ರ ಟಿಕೆಟ್‌ಗಳು ತಲಾ ರೂ 99 ಗೆ ಲಭ್ಯವಿರುತ್ತವೆ. ಇನ್ನು ರಿಕ್ಲೈನರ್‌ಗಳಂತಹ ಪ್ರೀಮಿಯಂಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ಆದರೆ, 90 ರಿಂದ 95 ಪ್ರತಿಶತದಷ್ಟು ಸೀಟುಗಳು ರೂ 99 ಗೆ ಲಭ್ಯವಿರುತ್ತವೆ.
ಸಿಂಗಲ್ ಸ್ಕ್ರೀನ್‌ನಲ್ಲಿ 70 ಕ್ಕೆ ಟಿಕೆಟ್!?
ಹಲವು ಸಿಂಗಲ್ ಸ್ಕ್ರೀನ್‌ಗಳು ಕೂಡ ಈ ರಿಯಾಯಿತಿ ನೀಡಲಿವೆ. ಇನ್ನು, ಅನೇಕ ಸಿಂಗಲ್ ಸ್ಕ್ರೀನ್‌ಗಳು 99 ರೂಪಾಯಿಗಿಂತ ಕಡಿಮೆ ರೂಪಾಯಿಯಲ್ಲಿ ಟಿಕೆಟ್‌ಗಳನ್ನು ನೀಡುತ್ತಿವೆ. ಹೀಗಾಗಿ 99 ರೂಪಾಯಿ ಇರುವುದು, 70 ರೂಪಾಯಿಗೆ ಬರಬಹುದು ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಂಎಐ) ಮುಖ್ಯಸ್ಥ ಮತ್ತು ಪಿವಿಆರ್ ಐನಾಕ್ಸ್ ಪಿಕ್ಚರ್ಸ್‌ನ ಸಿಇಒ ಕಮಲ್ ಜಿಯಾಂಚಂದಾನಿ ಹೇಳಿದ್ದಾರೆ.

"ಇದು ಕೇವಲ ಒಂದು ದಿನದ ಆಫರ್. ಇದರಿಂದ, ಒಟ್ಟಾರೆ ಚಿತ್ರದಲ್ಲಿ (ಬಾಕ್ಸ್ ಆಫೀಸ್‌ನಲ್ಲಿ) ದೊಡ್ಡ ವ್ಯತ್ಯಾಸ ಮಾಡುವುದಿಲ್ಲ. ಆದರೆ, ನಾವು ರಜಾದಿನವನ್ನು ಪ್ರಾರಂಭಿಸಿದಾಗ ಅದು ಬಾಕ್ಸ್ ಆಫೀಸ್ ಗಳಿಕೆಗೆ ಹೆಚ್ಚಳ ಮಾಡುತ್ತದೆ. ಜೂನ್‌ನಿಂದ ಸಿನಿಮಾ ಮಂದಿರಗಳು ಮತ್ತೆ ಉತ್ತೇಜನ ಪಡೆದುಕೊಳ್ಳಲಿವೆ. ಏಪ್ರಿಲ್ ಮತ್ತು ಮೇನಲ್ಲಿ ಲೋಕಸಭಾ ಚುನಾವಣೆಗಳ ಕಾರಣ ಅನೇಕ ನಿರ್ಮಾಪಕರು ಚಲನಚಿತ್ರಗಳನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಥಿಯೇಟರ್‌ಗಳು ಖಾಳಿ ಹೊಡೆಯುತ್ತಿವೆ. ಈಗ ಮತ್ತೆ ಸಿನಿಮಾ ಬಿಟುಗಡೆಯಿಂದ ಥಿಯೇಟರ್‌ಗಳು ಲಯ ಪಡೆಯಲಿದೆ" ಎಂದಿದ್ದಾರೆ.
ವಿದ್ಯಾರ್ಥಿಗಳು ಈ ಕೊಡುಗೆಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬರುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಯೂತ್ಸ್ 50 % ಮತ್ತು ಫ್ಯಾಮಿಲಿಸ್ 25 ರಿಂದ 30 ಪ್ರತಿಶತದಷ್ಟು ಬರುತ್ತಾರೆ ಎಂಬ ವಿಶ್ವಾಸವಿದೆ. ಹೀಗಾಗಿ ಆಕ್ಯುಪೆನ್ಸಿ ಶೇಕಡಾ 70-80 ಕ್ಕೆ ಏರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಂಎಐ) ಮುಖ್ಯಸ್ಥರು ಹೇಳಿದ್ದಾರೆ.












Click it and Unblock the Notifications