Pradeep Eshwar: ಶಾಸಕ ಪ್ರದೀಪ್ ಈಶ್ವರ್ ಬಣ್ಣದ ಲೋಕಕ್ಕೆ ಎಂಟ್ರಿ?

ಶಾಸಕ ಪ್ರದೀಪ್ ಈಶ್ವರ್ ಶಾಸಕರಾಗಿ ಆಯ್ಕೆಯಾದ ನಂತರ ಸೋಷಿಯಲ್ ಮೀಡಿಯಾದ ತುಂಬಾ ಸಖತ್ ಸದ್ದು ಮಾಡುತ್ತಿದ್ದಾರೆ. ಹಾಗೇ ಪ್ರದೀಪ್ ಈಶ್ವರ್ ಸ್ಪೀಚ್ ಕೇಳಲು ಯುವ ಸಮುದಾಯ ಉತ್ಸುಕರಾಗುತ್ತದೆ. ಆದರೆ ಈಗ ದಿಢೀರ್ ಶಾಸಕ ಪ್ರದೀಪ್ ಈಶ್ವರ್ ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಅರೆ ಯಾಕೆ? ಪ್ರದೀಪ್ ಸಿನಿಮಾ ಮಾಡ್ತಿದ್ದಾರಾ? ಅಂದ್ರಾ, ಸಂಪೂರ್ಣ ಮಾಹಿತಿ ಇಲ್ಲಿದೆ.

ಅಷ್ಟಕ್ಕೂ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ 'ಲವ್ ರೆಡ್ಡಿ' ಸಿನಿಮಾಗೆ ಶಾಸಕ ಪ್ರದೀಪ್ ಈಶ್ವರ್ ಸಾಥ್ ನೀಡಿದ್ದಾರೆ. ಈ ಹಿಂದೆ ಲವ್ ರೆಡ್ಡಿ ಫಸ್ಟ್ ಲುಕ್ ಅನ್ನು ಬಾಲಯ್ಯ ಬಿಡುಗಡೆ ಮಾಡಿದ್ದರು. ಈಗ ಫಸ್ಟ್ ಝಲಕ್ ಅನ್ನ ಶಾಸಕ ಪ್ರದೀಪ್ ಈಶ್ವರ್ ರಿಲೀಸ್ ಮಾಡಿ ತಮ್ಮೂರಿನ ಪ್ರತಿಭೆಗಳಿಗೆ ಬೆಂಬಲ ಕೊಟ್ಟಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ಚಿತ್ರತಂಡ ಸುದ್ದಿಗೋಷ್ಟಿ ಆಯೋಜಿಸಿತ್ತು. ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ಕೂಡ ಚಿತ್ರ ತಂಡಕ್ಕೆ ಸಾಥ್ ಕೊಟ್ಟರು.

MLA Pradeep Eshwar supports Kannada movie team

ಕನ್ನಡಿಗರಲ್ಲಿ ಪ್ರದೀಪ್ ಈಶ್ವರ್ ಕೋರಿಕೆ

ಈ ವೇಳೆ ಮಾತನಾಡಿದ ಪ್ರದೀಪ್ ಈಶ್ವರ್ ಅಂಜನ್ ರಾಮಚಂದ್ರ ನಮ್ಮ‌ ಜಿಲ್ಲೆಯ ಹುಡುಗ. ಇನ್ಫೋಸಿಸ್ ನಾರಾಯಣ್ ಮೂರ್ತಿ ಅವರಿಗೆ ಜನ್ಮ ನೀಡಿದ ಜಿಲ್ಲೆ ನಮ್ಮದು. 2 ಭಾರತ ರತ್ನ, 2 ಪದ್ಮಶ್ರೀ, 1 ಪದ್ಮಭೂಷಣ ಪಡೆದ ಜಿಲ್ಲೆ ನಮ್ಮದು. RRR ಸೇರಿ ದೊಡ್ಡ ಸಿನಿಮಾಗೆ ಸಾಹಿತ್ಯ ಬರೆವ ವರದರಾಜು ಚಿಕ್ಕಬಳ್ಳಾಪುರದಲ್ಲಿ ಇದ್ದಾರೆ. ಇಂಥ ಜಿಲ್ಲೆಯಿಂದ ಅಂಜನ್ ರಾಮಚಂದ್ರ ಹೀರೋ ಆಗಿ ಬರುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲೇ ನಡೆದ, ನೈಜ ಘಟನೆ ಆಧಾರದಲ್ಲಿ ಸಿನಿಮಾ ಮಾಡಲಾಗಿದೆ. ಕನ್ನಡಿಗರು ಚಿತ್ರಕ್ಕೆ ಬೆಂಬಲ ನೀಡಬೇಕು ಎಂದರು.

ಚಿತ್ರದ ನಾಯಕ ನಟ ಅಂಜನ್ ಮಾತನಾಡಿ ಈ ಸಿನಿಮಾ ಶುರುವಾಗುವ ಮೊದಲು ಡೈರೆಕ್ಟರ್ ಮತ್ತು ನಾವು ಸಾಕಷ್ಟು ಕಷ್ಟಪಟ್ಟಿದ್ದೆವು. ಒಂದಷ್ಟು ಸಿ‌ನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇವೆ. ಕಷ್ಟಪಟ್ಟು ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ತುಂಬಾ ಜನರು ಈ ಚಿತ್ರಕ್ಕೆ ಬೆಂಬಲ ಕೊಟ್ಟಿದ್ದಾರೆ. ಈ ಸಿನಿಮಾದಿಂದ ತುಂಬಾ ಜನರು ಇಂಡಸ್ಟ್ರಿಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ ಎಂದರು.

MLA Pradeep Eshwar supports Kannada movie team

ಚಿಕ್ಕಬಳ್ಳಾಪುರ ಸುತ್ತಮುತ್ತ 'ಲವ್ ರೆಡ್ಡಿ' ಸಿನಿಮಾದ ಶೂಟ್ ನಡೆಸಲಾಗಿದೆ. ಚಿತ್ರೀಕರಣವನ್ನ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸೆಹೇರಿ ಸ್ಟುಡಿಯೋ ಮತ್ತು ಎಂಜಿಆರ್ ಫಿಲಂಸ್, ಗೀತಾಂಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ. ಪ್ರಿನ್ಸ್ ಹೆನ್ರಿ ಸಂಗೀತ ಸಂಯೋಜನೆ, ಅಷ್ಕರ್ ಅಲಿ ಛಾಯಾಗ್ರಾಹಣ ಸೇರಿ ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಲವ್ ರೆಡ್ಡಿ ಸಿನಿಮಾಗೆ ಇದೆ. ಪ್ರೇಮಕಥೆ ಜೊತೆ ಫ್ಯಾಮಿಲಿ ಎಮೋಷನಲ್ ಡ್ರಾಮಾ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+