Alia Bhatt: ಅಂತಾರಾಷ್ಟ್ರೀಯ ಇವೆಂಟ್‌ನಲ್ಲಿ ದೇಸಿ ಲುಕ್‌ನಲ್ಲಿ ಮಿಂಚು ಹರಿಸಿದ ನಟಿ ಆಲಿಯಾ ಭಟ್
ಎರಡನೇ ಬಾರಿ ಬಾಲಿವುಡ್ ನಟಿ ಆಲಿಯಾ ಭಟ್ ಮೆಟ್ ಗಾಲಾ 2024ರ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.ಮ ವಿಭಿನ್ನ ಮತ್ತು ವಿಶಿಷ್ಟ ಉಡುಪುಗಳಿಗೆ ಹೆಚ್ಚು ಹೆಸರುವಾಸಿಯಾಗಿರುವ ಈ ಮೆಟ್ ಗಾಲಾ ಇವೆಂಟ್‌ನಲ್ಲಿ ಆಲಿಯಾ ಭಟ್ ದೇಸಿ ಲುಕ್ ಕೊಟ್ಟು ಮಿಂಚು ಹರಿಸಿದ್ದಾರೆ.
ಹೌದು... ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಆಲಿಯಾ ಭಟ್ 2ನೇ ಬಾರಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಾರ್ಯಕ್ರಮ ಮೆಟ್ ಗಾಲಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಬ್ಯಸಾಚಿ ಸೀರೆ ತೊಟ್ಟು ಬಂದ ಅವರನ್ನು ನೋಡಿ ಇಡೀ ಜನ ಸಮುದಾಯದ ಗಮನ ಸೆಳೆದಿದ್ದಾರೆ. "ದಿ ಗಾರ್ಡನ್ ಆಫ್ ಟೈಮ್" ಡ್ರೆಸ್ ಕೋಡ್‌ನಲ್ಲಿ ಸಿದ್ದ ಅವರು ಎಲ್ಲರ ಕಣ್ಣುಗಳನ್ನು ತನ್ನತ್ತ ಸೆಳೆದಿದ್ದಾರೆ.

ಸಬ್ಯಸಾಚಿ ಸೀರೆಯಲ್ಲಿ ಆಲಿಯಾ ಮಿಂಚು
ಸಂಪೂರ್ಣ ಹೂವಿನ ವಿನ್ಯಾಸಗಳನ್ನು ಹೊಂದಿರುವ ಸಬ್ಯಸಾಚಿ ಸೀರೆಯು ಮೆಟ್ ಗಾಲಾದ ಥೀಮ್ ಅನ್ನು ಜನರ ಮುಂದಿರಿಸಿದೆ. ಸೂಕ್ಷ್ಮವಾದ ಶೀರ್ ಫ್ಯಾಬ್ರಿಕ್ ಮತ್ತು 3D ಹೂವುಗಳು ಈ ಸೀರೆಗೆ ಜೀವ ತುಂಬಿವೆ. ತಿಳಿ ಹಸಿರು ಸೀರೆ ಮತ್ತು ಅದರ ಉದ್ದನೆಯ ಸೆರಗು ಕ್ಯಾಮರಾಗಳ ಕ್ಲಿಕ್‌ಗಳಿಗೆ ಹೊಳೆಯುತ್ತಿದ್ದವು. ಇದಕ್ಕೆ ಮತ್ತಷ್ಟು ಸೊಬಗು ನೀಡಿರುವುದು ರಫಲ್ಡ್ ಸ್ಲೀವ್‌ಗಳೊಂದಿಗೆ ಹೊಲಿದಿದ್ದ ಬಟರ್‌ಫ್ಲೈ ಬ್ಲೌಸ್.
ಆಲಿಯಾ ಭಟ್ ಧರಿಸಿದ್ದ ಸೀರೆಗೆ ಆಧುನಿಕತೆಯ ಸ್ಪರ್ಶದೊಂದಿಗೆ ಎಲ್ಲಾ ಸಾಂಪ್ರದಾಯಿಕ ವೈಬ್‌ಗಳನ್ನು ನೀಡುವ ಮೂಲಕ ಈವೆಂಟ್‌ನಲ್ಲಿ ಗಮನ ಸೆಳೆದಿದ್ದಾರೆ. ಕಳೆದ ವರ್ಷ ಮೆಟ್ ಗಾಲಾಗೆ ಮಾಡ್ರನ್ ಡ್ರೆಸ್ ತೊಟ್ಟು ಬಂದಿದ್ದರು. 1,00,000 ಕ್ಕೂ ಹೆಚ್ಚು ಮುತ್ತುಗಳಿಂದ ಅಲಂಕರಿಸಲ್ಪಟ್ಟ ಪ್ರಬಲ್ ಗುರುಂಗ್ ಗೌನ್ ಧರಿಸಿ ಮೆಟ್ ಗಾಲಾದಲ್ಲಿ ಪಾದಾರ್ಪಣೆ ಮಾಡಿದ್ದರು. ಈ ಬಾರಿ ಹಸಿರು ತೋಟದಲ್ಲಿನ ಚಿಟ್ಟೆಯಾಗಿದ್ದಾರೆ.
163 ಕುಶಲಕರ್ಮಿಗಳಿಂದ ತಯಾರಾದ ಸಬ್ಯಸಾಚಿ ಸೀರೆ
ನ್ಯೂಯಾರ್ಕ್‌ನಲ್ಲಿ ನಡೆದ 2024 ರ ಮೆಟ್ ಗಾಲಾ ಪ್ರತಿಷ್ಠಿತ ಸಮಾರಂಭದಲ್ಲಿ ನಟಿ ಆಲಿಯಾ ಭಟ್ ಧರಿಸಿದ್ದ ಈ ಸೀರೆಯನ್ನು 163 ಕುಶಲಕರ್ಮಿಗಳು ಭಾರತೀಯ ಕಲಾತ್ಮಕತೆಯನ್ನು ಮಿಶ್ರಣ ಮಾಡಿ ತಮ್ಮ ಕಲಾತ್ಮಕತೆಯನ್ನು ಅರೆದು ತಯಾರಿಸಿದ್ದರು. ನುರಿತ ಕುಶಲಕರ್ಮಿಗಳು, ಕಸೂತಿಗಾರರು, ಕಲಾವಿದರು ಸೇರಿದಂತೆ 163 ಕುಶಲಕರ್ಮಿಗಳು ಈ ಸೊಗಸಾದ ಸೀರೆಯನ್ನು ತಯಾರಿಸಲು ಒಟ್ಟು 1,965 ಗಂಟೆಗಳ ಸಮಯವನ್ನು ಸೀರೆಗೆ ಮೀಸಲಿಟ್ಟಿದ್ದಾರೆ.

ಬಾಲಿವುಡ್ ನಟಿ ಆಲಿಯಾ ಭಟ್ ಸಬ್ಯಸಾಚಿ ಮುಖರ್ಜಿಯವರ ಪುದೀನ ಹಸಿರು ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಇದರ ಉದ್ದನೆಯ ಸೆರಗಿನಲ್ಲಿ ಮುತ್ತುಗಳು, ಹರಳುಗಳು ಮತ್ತು ಅಲಂಕಾರಿಕ ಹವಳಗಳು ಇದ್ದವು. ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಸೀರೆಯ ಬಣ್ಣವನ್ನು ಸಮುದ್ರ, ಭೂಮಿ ಮತ್ತು ಪ್ರಕೃತಿಯ ಮಣ್ಣಿನ ಬಣ್ಣಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸೀರೆಯು ಬೆಲೆಬಾಳುವ ಸ್ಟೋನ್ಸ್, ಸೊಗಸಾದ ಬೀಡ್ವರ್ಕ್ ಮತ್ತು ಸೀರೆಯ ತುಂಬಾ ಇದ್ದ ಅಂಚುಗಳು ಭಾರತೀಯ ಕಲೆ ಮತ್ತು ಕಲಾವಿದರಿಗೆ ಗೌರವ ಸಲ್ಲಿಸುವ ಹೂವುಗಳ ಸೂಕ್ಷ್ಮವಾದ ವಿವರಗಳನ್ನು ಹೊಂದಿತ್ತು. ಸೀರೆಯಲ್ಲಿ ಕಸೂತಿ ಮಾಡಿದ 23 ಅಡಿಯ ಸೆರಗು ಮತ್ತಷ್ಟು ಮೆರಗು ನೀಡಿದೆ. ಭುಜದ ಡ್ರಾಪ್ ಡ್ಯಾಂಗ್ಲರ್‌ಗಳು ಮತ್ತು ಕಾಕ್‌ಟೈಲ್ ರಿಂಗ್ ಆಲಿಯಾ ಭಟ್ ಅವರ ಲುಕ್ ಅನ್ನು ಮತ್ತಷ್ಟು ಬೆರಗುಗೊಳಿಸುವಂತೆ ಮಾಡಿದೆ.












Click it and Unblock the Notifications