ಮೇಘನಾ ರಾಜ್ ಚಿರಂಜೀವಿ ಪ್ರೀತಿ ಆಕಾಶದಷ್ಟೇ ವಿಶಾಲ: ಸುಲಭವಲ್ಲ 2ನೇ ಮದುವೆ
ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ನಿಧನರಾಗಿ ನಾಲ್ಕು ವರ್ಷಗಳು ಕಳೆದಿವೆ. ಆದರೆ ಮೇಘನಾ ರಾಜ್ ಮಾತ್ರ ಚಿರು ಯಾವಾಗಲೂ ನನ್ನೊಂದಿಗೆ ಇದ್ದಾರೆ ಎಂದು ಜೀವನ ನಡೆಸುತ್ತಿದ್ದಾರೆ. ಯಾಕೆಂದರೆ ಇವರಿಬ್ಬರದ್ದು ಒಂದೇ ದಿನದಲ್ಲಿ ಹುಟ್ಟಿಕೊಂಡ ಪ್ರೀತಿಯಲ್ಲ. ಬರೋಬ್ಬರಿ ಹತ್ತು ವರ್ಷಗಳು ಪ್ರೀತಿಸಿ ಮದುವೆಯಾದ ಗಟ್ಟಿ ಪ್ರೀತಿ. ಚಿರು ದೈಹಿಕವಾಗಿ ಇಲ್ಲದೇ ಇದ್ದರೂ ಮೇಘನಾ ರಾಜ್ ಹೃದಯದಲ್ಲಿ ಆಳವಾಗಿ ಬೇರೂರಿದ್ದಾರೆ. ಚಿರು ಒಂದೊಂದು ಗುಣಗಳು ಕೂಡ ಮೇಘನಾ ರಾಜ್ ಅವರಿಂದ ಮರೆಯಲು ಸಾಧ್ಯವೇ ಇಲ್ಲ. ಚಿರುವನ್ನು ಮೇಘನಾ ರಾಜ್ ಮರೆಯಲು ಯಾಕೆ ಸಾಧ್ಯವಿಲ್ಲ ಅನ್ನೋದಕ್ಕೆ ಸಾಕಷ್ಟು ಕಾರಣಗಳಿವೆ.
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ನಡುವೆ ಹುಟ್ಟಿಕೊಂಡ ಪ್ರೀತಿಗೆ ದೊಡ್ಡ ಹಿನ್ನೆಲೆಯೇ ಇದೆ. ಮೇಘನಾಗೆ ಚಿರು ಅಂದರೆ ಜೀವಕ್ಕಿಂತ ಹೆಚ್ಚು. ಆದರೆ ಸಾವು ಕ್ರೂರಿ. ಕೈಕೈ ಹಿಡಿದು ಜೀವನ ಪೂರ್ತಿ ನಿನ್ನ ಜೊತೆಯಾಗಿ ಇರ್ತೀನಿ ಅಂದಿದ್ದ ಚಿರು ಜೀವನದ ದಾರಿಯಲ್ಲಿ ಹೀಗೆ ಒಬ್ಬಳನ್ನೇ ಬಿಟ್ಟು ಹೋಗ್ತಾರೆ ಅಂತ ಯಾವತ್ತೂ ಕೂಡ ಮೇಘನಾ ಅಂದುಕೊಂಡಿರಲಿಲ್ಲ. ಒಟ್ಟಿಗೆ ಕಂಡ ಕನಸುಗಳು, ಹೆಂಗೆಲ್ಲಾ ಬದುಕಬೇಕು ಅಂದುಕೊಂಡಿದ್ದ ಆಸೆ ಎಲ್ಲವೂ ಕಮರಿ ಹೋಗಿದೆ. ಯಾಕೆಂದರೆ ಮೇಘನಾಗೆ ಅಪ್ಪ ಅಮ್ಮ ಬಿಟ್ಟರೆ ಪ್ರಪಂಚವೇ ಚಿರುವಾಗಿದ್ದರು. ಹೀಗಿರುವಾಗ ಮೇಘನಾ ಅವರಿಗೆ ಆಗಿರುವ ಆಘಾತ ಊಹಿಸಲೂ ಕೂಡ ಆಗುವುದಿಲ್ಲ.

ಮೇಘನಾ ಅವರು ಸ್ವಲ್ಪ ಕೋಪಿಷ್ಟರಾದರೆ ಚಿರು ಶಾಂತ ಸ್ವಭಾವದವರು. ಮೊದಮೊದಲು ತಮ್ಮ ಲವ್ ಸ್ಟೋರಿ ಬಗ್ಗೆ ಮೇಘನಾ ಮತ್ತು ಚಿರು ಗುಟ್ಟಾಗಿ ಇಟ್ಟಿದ್ದರು. ನಂತರ ನಾವಿಬ್ಬರು ಹತ್ತು ವರ್ಷದಿಂದ ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದರು. ಇವಿರಿಬ್ಬರ ಮೊದಲು ಭೇಟಿ ಆಗಿದ್ದು ಯಾವುದೋ ಒಂದು ಕಾರ್ಯಕ್ರಮದಲ್ಲಿ. ಆಗ ಮೇಘನಾ ದ್ವಿತೀಯ ಪಿಯುಸಿ ಓದುತ್ತಿದ್ದರು. ಅಂದು ಮೇಘನಾ ತಾಯಿಯೇ ಚಿರು ಅವರನ್ನು ಪರಿಚಯ ಮಾಡಿಸಿದ್ದರಂತೆ.
ಮೇಘನಾ ಅವರು ಚಿರಂಜೀವಿ ಸರ್ಜಾ ಅವರನ್ನು ನೋಡಿದ ಮೊದಲ ನೋಟದಲ್ಲೇ ಈ ಹುಡುಗ ಎಷ್ಟು ಸಾಫ್ಟ ಹಾರ್ಟೆಡ್. ನಾಚಿಕೆ ಸ್ವಭಾವ ಎಂದು ಮೇಘನಾ ಕರಗಿ ಹೋಗಿದ್ದರಂತೆ. ನಂತರ ಇವರಿಬ್ಬರ ಪರಿಚಯ ಸ್ನೇಹವಾಗಿ ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ಅಂದಿನಿಂದ ನಿಮ್ಮ ಫ್ರೆಂಡ್ ಯಾರು ಅಂದರೆ ಮೇಘನಾ ರಾಜ್ ಚಿರು ಹೆಸರು ಹೇಳುತ್ತಿದ್ದರು.

ಒಮ್ಮೆ ಮೇಘನಾ ತಾಯಿಗೆ ಹುಷಾರಿಲ್ಲ ಎಂದು ಹೇಳಿದ್ದೇ ತಡ ತಕ್ಷಣ ಇನ್ನೂರು ಕಿಲೋ ಮೀಟರ್ ಡ್ರೈವ್ ಮಾಡಿಕೊಂಡು ಬಂದು ಮೇಘನಾ ಜೊತೆಗೆ ಇದ್ದರಂತೆ ಚಿರು. ಈ ಘಟನೆ ಮೇಘನಾ ರಾಜ್ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಇದು ಯಾವ ಜನ್ಮದ ಋಣಾನುಬಂಧವೋ ಎನಿಸಿತ್ತು. ಅಲ್ಲದೆ ಚಿರು ಅದೆಷ್ಟು ನೇರವಾದ ವ್ಯಕ್ತಿ ಅಂದರೆ ಮೇಘನಾ ಅವರ ತಾಯಿ ಬಳಿ ಬಂದು ನನಗೆ ಮೇಘನಾ ಅಂದರೆ ಇಷ್ಟ, ಅವರನ್ನು ಮದುವೆ ಆಗಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದ್ದರಂತೆ.
ಒಮ್ಮೆ ಚಿರು ಮೇಘನಾ ಬಳಿ 'ಮಿಲ್' ಎಲ್ಲಿ ಎಂದು ಕೇಳಿದ್ದರಂತೆ. ಎಷ್ಟೋ ದಿನಗಳ ಬಳಿಕ ಮೇಘನಾಗೆ ಮಿಲ್ ಅಂದರೆ ಮದರ್ ಇನ್ ಲಾ ಅನ್ನೋದು ಅರ್ಥವಾಗಿತ್ತು. ಮದರ್ ಇನ್ ಲಾ ಅಂದರೆ ಅತ್ತೆ. ಆಗ ಚಿರುಗೆ ತಮ್ಮನ್ನ ಮದುವೆ ಆಗೋಕೆ ಇಷ್ಟ ಇದೆ ಅನ್ನೋದು ಮೇಘನಾಗೆ ಗೊತ್ತಾಗಿದೆ. ಹೀಗೆ ಒಂದೊಂದಾಗಿ ಮೇಘನಾಗೆ ಚಿರು ಅವರ ಗುಣಗಳು ತುಂಬಾ ಇಷ್ಟವಾಗಿದ್ದವು. ನಂಗೆ ಚಿರು ಅಂದರೆ ಪ್ರಾಣ ಅಂತಿದ್ದರು ಮೇಘನಾ ರಾಜ್. ನಂತರ ಇಬ್ಬರ ಮನೆಯಲ್ಲಿ ವಿಷಯ ತಿಳಿಸಿ ಮದುವೆ ಮಾಡಿಕೊಂಡಿತ್ತು ಈ ಜೋಡಿ.
2018 ಏಪ್ರಿಲ್ 29ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಜೊತೆಗೆ ಮೇಘನಾ ರಾಜ್ ಮದುವೆಯಾದರು. ಚಿರು ಸದಾ ಶಾಂತ ಸ್ವಭಾವದವರು. ಹೊರಗೆ ರಫ್ ಆಂಡ್ ಟಫ್ ಆದರೆ ಒಳಗೆ ಫ್ಯಾಮಿಲಿ ಅಂದರೆ ಜೀವನೇ ಕೊಟ್ಟು ಬಿಡುವಷ್ಟು ಸ್ಪೂತ್. ಮೇಘನಾ ರಾಜ್ ಅವರನ್ನು ಚಿರು ಪ್ರೀತಿಯಿಂದ ಕುಟ್ಟಿಮಾ ಎಂದು ಕರೆದರೆ, ಮೇಘನಾ ರಾಜ್ ಚಿರು ಅವರನ್ನು ಡಾರ್ಲಿಂಗ್ ಬದಲು ಶಾರ್ಟ್ ಆಂಡ್ ಸ್ವೀಟ್ ಆಗಿ 'ಡಾ' ಎಂದು ಕರೆಯುತ್ತಿದ್ದರು.
ಇಷ್ಟೊಂದು ಆಳವಾಗಿ ಮೇಘನಾರಾಜ್ ಅವರನ್ನು ಪ್ರೀತಿಸುತ್ತಿದ್ದ ಚಿರಂಜೀವಿ ಸರ್ಜಾ 2020ರಲ್ಲಿ ಹೃದಯಾಘಾತದಿಂದ ನಿಧನರಾದರು. ಈ ನೋವಿನಿಂದ ಮೇಘನಾ ಈಗಷ್ಟೇ ಹೊರಬರುತ್ತಿದ್ದಾರೆ. ಪ್ರಾಣಕ್ಕಿಂತ ಹೆಚ್ಚಾಗಿದ್ದ ಪ್ರೀತಿಯನ್ನ ಮೇಘನಾ ರಾಜ್ ಮರೆತು ಎರಡನೇ ಮದುವೆ ಆಗಲು ಯೋಚನೆ ಮಾಡುವುದು ಕಷ್ಟ. ಚಿರು ಮಗ ರಾಯನ್ ಮೇಘನಾ ರಾಜ್ ಅವರಿಗೆ ಪ್ರಪಂಚವಾಗಿದ್ದಾನೆ. ಹೀಗಾಗಿ ಎರಡನೇ ಮದುವೆ ಬಗ್ಗೆ ಯೋಚನೆ ಮಾಡದೇ ಇದೇ ಪುಟ್ಟ ಪ್ರಪಂಚದಲ್ಲಿ ಮೇಘನಾ ಜೀವನ ಸಾಗಿಸಲು ನಿರ್ಧರಿಸಿದರೂ ಅಚ್ಚರಿಯಿಲ್ಲ.












Click it and Unblock the Notifications