ಮೇಘನಾ ರಾಜ್ & ವಿಜಯ್ ರಾಘವೇಂದ್ರ 2ನೇ ಮದುವೆ ಬಗ್ಗೆ... Meghana Raj

ಮೇಘನಾ ರಾಜ್ ಅಂದ್ರೆ ಕನ್ನಡಿಗರ ಮನೆ ಮಗಳು ಅಂತಾರೆ ಕನ್ನಡ ಸಿನಿಮಾ ಪ್ರೇಮಿಗಳು. ಚಿಕ್ಕ ವಯಸ್ಸಿನಲ್ಲೇ ಮೇಘನಾ ರಾಜ್ ಅವರು ಕನ್ನಡ ಸಿನಿಮಾ ರಂಗಕ್ಕೆ ಬಂದು ಸದ್ದು ಮಾಡಿ ದೊಡ್ಡ ಹೆಸರು ಮಾಡಿದ್ದರು. ಅದರಲ್ಲೂ ಮೇಘನಾ ರಾಜ್ & ಚಿರಂಜೀವಿ ಸರ್ಜಾ ಅವರು ಮದುವೆ ಆಗಿದ್ದಾಗ ಇಡೀ ಕರ್ನಾಟಕ & ಕನ್ನಡಿಗರು ದೊಡ್ಡದಾಗಿ ಸಂಭ್ರಮಿಸಿದ್ದರು. ಆದರೆ ವಿಧಿಯ ಕೈವಾಡ, ಚಿರಂಜೀವಿ ಸರ್ಜಾ ಅವರು ದಿಢೀರ್ ಮೃತಪಟ್ಟ ಸುದ್ದಿ ಕನ್ನಡಿಗರನ್ನ ಕಣ್ಣೀರಲ್ಲಿ ಕೈತೊಳೆಯುವ ರೀತಿ ಮಾಡಿತ್ತು. ಹೀಗಿದ್ದಾಗಲೇ, ಮೇಘನಾ ರಾಜ್ ಅವರ 2ನೇ ಮದುವೆ ಬಗ್ಗೆ...

ಮೇಘನಾ ರಾಜ್‌ ಅವರು 1990ರ ಮೇ 3 ರಂದು ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲಿ ಹುಟ್ಟಿದರು. ಮೇಘನಾ ರಾಜ್‌ ಅವರು 2018 ರಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗೆ ಸಪ್ತಪದಿ ತುಳಿದು ಮದುವೆ ಕೂಡ ಆಗಿದ್ದರು. ಆದ್ರೆ ವಿಧಿ ಕೈವಾಡ, ಚಿರಂಜೀವಿ ಸರ್ಜಾ ಅವರು 2020ರ ಜೂನ್ 7 ರಂದು ಅಕಾಲಿಕ ಮರಣ ಹೊಂದಿದರು. ಆ ನಂತರ ಮೇಘನಾ ರಾಜ್‌ ಅವರಿಗೆ ಒಬ್ಬ ಮುದ್ದಾದ ಮಗ ಕೂಡ ಜನಿಸಿದ್ದರು. ಹೀಗೆ ತಮ್ಮ ಮಗನ ಮುಖ ನೋಡುತ್ತಾ, ಮೇಘನಾ ರಾಜ್‌ ಅವರು ನೋವು ಮರೆಯುವ ಸಮಯದಲ್ಲೇ...

Meghana Raj And Vijay Raghavendra Fans Are Saying This Now

ಮೇಘನಾ ರಾಜ್ & ವಿಜಯ್ ರಾಘವೇಂದ್ರ...

ಕನ್ನಡದ ನಟಿ ಮೇಘನಾ ರಾಜ್‌ ಅವರು ತಮ್ಮ ಪತಿಯನ್ನು ಕಳೆದುಕೊಂಡ ಕೆಲವೇ ವರ್ಷ ನಂತರ, ನಟ ವಿಜಯ್ ರಾಘವೇಂದ್ರ ಅವರು ಕೂಡ ತಮ್ಮ ಹೆಂಡತಿಯನ್ನ ಕಳೆದುಕೊಂಡರು. ಹೀಗೆ ಕನ್ನಡದ ಇಬ್ಬರು ದೊಡ್ಡ ಸ್ಟಾರ್‌ಗಳ ಬಾಳಲ್ಲಿ ವಿಧಿಯ ಕೈವಾಡ ಬಿರುಗಾಳಿ ಎಬ್ಬಿಸಿತ್ತು. ಹೀಗಿದ್ದಾಗ, ನಟ ವಿಜಯ್ ರಾಘವೇಂದ್ರ ಅವರು ತಮ್ಮ ಮಗನ ಭವಿಷ್ಯಕ್ಕೆ ಹಾಗೂ ಓದಿಗಾಗಿ ಒದ್ದಾಡುತ್ತಿದ್ದಾರೆ. ಅಲ್ಲದೆ ವಿಜಯ್ ರಾಘವೇಂದ್ರ ಅವರ ಪುತ್ರ ಅತ್ಯುತ್ತಮ ಮಾರ್ಕ್ಸ್ ಪಡೆದು ಇದೀಗ 10ನೇ ತರಗತಿ ಪಾಸ್ ಆಗಿದ್ದಾರೆ. ಹೀಗಿದ್ದಾಗಲೇ, ವಿಜಯ್ ರಾಘವೇಂದ್ರ ಅವರ 2ನೇ ಮದುವೆ ಬಗ್ಗೆ...

ಮೇಘನಾ ರಾಜ್‌ 2ನೇ ಮದುವೆ ಬಗ್ಗೆ....

ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ಮೇಘನಾ ರಾಜ್‌ 2ನೇ ಮದುವೆ ಬಗ್ಗೆ ಕೆಲವು ಪೇಜ್ & ಟ್ರೋಲರ್ಸ್ ಸುಳ್ಳು ಸುದ್ದಿಯ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಭಾರಿ ಆಕ್ರೋಶ ಕೂಡ ವ್ಯಕ್ತವಾಗಿದೆ, ಮೇಘನಾ ರಾಜ್‌ 2ನೇ ಮದುವೆ ಬಗ್ಗೆ ಮಾತನಾಡಿದ್ದವರಿಗೆ ಇದೀಗ ಖುದ್ದು ಮೇಘನಾ ರಾಜ್ ಅವರ ಅಭಿಮಾನಿಗಳು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದೂ ಅಲ್ಲದೆ, ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೇಘನಾ ರಾಜ್ ಅವರ ಅಭಿಮಾನಿಗಳು ಆಗ್ರಹ ಮಾಡುತ್ತಿದ್ದಾರೆ. ಹೀಗೆ ಮತ್ತೊಂದು ಕಡೆ ನಟ ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳು ಕೂಡ ಇದೇ ರೀತಿಯ ಆಗ್ರಹ ಮಾಡುತ್ತಿದ್ದು, ವಿಜಯ್ ರಾಘವೇಂದ್ರ ಅವರ 2ನೇ ಮದುವೆ ಬಗ್ಗೆ ಮಾತನಾಡಿದ್ದವರಿಗೆ ಈಗ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ.

ದೊಡ್ಡ ಹೋರಾಟ ನಡೆಯುವುದು ಗ್ಯಾರಂಟಿ?

ಒಟ್ನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಇತ್ತೀಚಿಗೆ ಕನ್ನಡದ ನಟ & ನಟಿಯರ ಕುರಿತಾಗಿ ಸುಳ್ಳು ಸುದ್ದಿ ಹಬ್ಬಿಸುವ ಟ್ರೋಲ್ ಪೇಜ್‌ಗಳ ಹಾವಳಿ ಜಾಸ್ತಿ ಆಗಿದೆ ಎಂಬ ಆರೋಪ ಕೂಡ ಇದೆ. ಅದರಲ್ಲೂ ಕನ್ನಡದ ನಟ & ನಟಿಯರ 2ನೇ ಮದುವೆ ಬಗ್ಗೆ ಕೂಡ ಇದೇ ರೀತಿಯಾಗಿ ಸುಳ್ಳು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕೆಲವು ಟ್ರೋಲ್ ಪೇಜ್‌ಗಳು ಹಾಗೂ ಫೇಕ್ ಅಕೌಂಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹೀಗಿದ್ದಾಗ ಕನ್ನಡ ಸಿನಿಮಾ ನಟರು & ನಟಿಯರ ಬಗ್ಗೆ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುವುದು ಸರಿ ಅಲ್ಲ ಎನ್ನುವ, ಖಡಕ್ ಎಚ್ಚರಿಕೆಯನ್ನ ಕನ್ನಡಿಗರು ಇದೀಗ ನೀಡುತ್ತಿದ್ದಾರೆ. ಹೀಗಾಗಿ ಇಂತಹ ಪೋಸ್ಟ್‌ಗಳನ್ನ ಡಿಲೀಟ್ ಮಾಡಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹಾಗೇ ಇದೇ ರೀತಿಯಾಗಿ ಸುಳ್ಳು, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರೆ ದೊಡ್ಡ ಹೋರಾಟ ನಡೆಸುವ ಬಗ್ಗೆ ಕೂಡ ಚರ್ಚೆ ನಡೆದಿದೆ.

ಮೇಘನಾ ರಾಜ್‌ ಅವರು ಹೇಳಿದ್ದು ಇಷ್ಟು...

ಕೆಲ ದಿನಗಳ ಹಿಂದೆ ನಟಿ ಮೇಘನಾ ರಾಜ್‌ ಅವರು ತಮ್ಮ 2ನೇ ಮದುವೆ ಬಗ್ಗೆ ಮಾತನಾಡಿದ್ದರು. ನಟಿ ಮೇಘನಾ ರಾಜ್‌ ಖಾಸಗಿ ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ಹಾಗೇ ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ರಾಘವೇಂದ್ರ ಬಗ್ಗೆ ಮಾತನಾಡುವ & ಟ್ರೋಲ್ ಮಾಡುವ ಪೇಜ್‌ಗಳ ವಿರುದ್ಧ ಕೂಡ ಗರಂ ಆಗಿದ್ದರು ನಟಿ ಮೇಘನಾ ರಾಜ್‌. ಮತ್ತೊಂದು ಕಡೆ ತಮ್ಮ 2ನೇ ಮದುವೆ ಬಗ್ಗೆ ಮೇಘನಾ ರಾಜ್‌ ಅವರು ಮಾತನಾಡುತ್ತಾ, ಭವಿಷ್ಯದಲ್ಲಿ ಈ ಕುರಿತು ಒಂದು ನಿರ್ಧಾರ ತೆಗೆದುಕೊಳ್ಳುವ ಮಾತು ಆಡಿದ್ದಾರೆ. ಅಲ್ಲದೇ ಮೇಘನಾ ರಾಜ್‌ 2ನೇ ಮದುವೆ ಆಗುತ್ತಾರಾ? ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರವೂ ಸಿಕ್ಕಿತ್ತು. ಹೀಗಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಕೆಲವು ಟ್ರೋಲ್ ಪೇಜ್‌ಗಳ ವಿರುದ್ಧ ಇದೀಗ ನಟಿ ಮೇಘನಾ ರಾಜ್‌ ಅಭಿಮಾನಿಗಳು ಗರಂ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+