ಬಿಗ್‌ಬಾಸ್‌ ಮಂದಿಗೆ ಕ್ಲಾಸ್‌ ಬದಲು ದೊಡ್ಡ ಸರ್‌ಪ್ರೈಸ್‌ ಕೊಟ್ಟ ಸುದೀಪ್‌, ಏನದು?

ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಇಂದು ವಾರದ ಕಥೆಯಲ್ಲಿ ಸ್ಪರ್ಧಿಗಳೆಲ್ಲ ಫುಲ್‌ ಖುಷಿಯಾಗಿದ್ದಾರೆ. ಇನ್ನು ಪ್ರತಿ ವಾರ ಸ್ಪರ್ಧಿಗಳಿಗೆ ಫುಲ್‌ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದ ನಟ ಸುದೀಪ್ ಅವರು ಈ ವಾರ ಒಂದು ಸಡನ್‌ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಇದರಿಂದ ಸ್ಪರ್ಧಿಗಳೆಲ್ಲ ಎಂಜಾಯ್‌ ಮಾಡಿದ್ದಾರೆ.

ಇಷ್ಟಕ್ಕೂ ಕಿಚ್ಚ ಕೊಟ್ಟ ಸರ್‌ಪ್ರೈಸ್‌ ಏನು ಅಂದ್ರೆ, ಎಲ್ಲರಿಗೂ ಗೊತ್ತಿರೋ ಹಾಗೆ ಸುದೀಪ್‌ ಅಭಿನಯದ ಮ್ಯಾಕ್ಸ್‌ ಸಿನಿಮಾ ಇದೇ ತಿಂಗಳ ಡಿಸೆಂಬರ್‌ 25ರಂದು ರಿಲೀಸ್‌ ಆಗುತ್ತಿದೆ. ಇನ್ನು ಈ ವಿಚಾರ ಬಿಗ್‌ಬಾಸ್‌ ಮನೆಯಲ್ಲಿರೋ ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ. ಈ ಕಾರಣದಿಂದ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳಿಗೆ ಮ್ಯಾಕ್ಸ್‌ ಸಿನಿಮಾದ ಪ್ರೋಮೋ ಪ್ಲೇ ಮಾಡಲಾಯಿತು. ಇದರಿಂದ ಸ್ಪರ್ಧಿಗಳೆಲ್ಲ ಫುಲ್‌ ಹ್ಯಾಪಿಯಾಗಿದ್ದಾರೆ.

Max Movie Promo Starring Kiccha Sudeep Unveiled On Kannada Bigg Boss

ಪ್ರೋಮೋದಲ್ಲಿ ಕಿಚ್ಚನ ಅವತಾರ ಕಂಡು ಸ್ಪರ್ಧಿಗಳೆಲ್ಲ ಕಿರುಚಾಡಿದ್ದಲ್ಲದೆ, ವಾವ್‌ ಎಂದು ಚಪ್ಪಾಳೆ ತಟ್ಟಿದ್ದಾರೆ. ಸುದೀಪ್‌ ಅಭಿನಯಕ್ಕೆ ಒಳಗಿದ್ದವರೆಲ್ಲ ಫಿದಾ ಆಗಿದ್ದಾರೆ. ಇನ್ನು ಹೊರಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದ ಸ್ಪರ್ಧಿಗಳಿಗೆ ಮ್ಯಾಕ್ಸ್‌ ಸಿನಿಮಾದ ಪ್ರೋಮೋ ಒಂದು ರೀತಿ ಹಬ್ಬದ ವಾತಾವರಣ ನೀಡಿದೆ.

ಪ್ರೋಮೋ ನೋಡಿದ ಮನೆಮಂದಿ ಕಿಚ್ಚನಿಗೆ ಚಪ್ಪಾಳೆ ತಟ್ಟಿ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣಲಿ ಎಂದು ಹಾರೈಸಿದ್ದಾರೆ. ಇನ್ನು ಬಿಗ್‌ಬಾಸ್‌ ಮನೆಯಲ್ಲಿರುವ ಉಗ್ರಂ ಮಂಜು ಕೂಡ ಮ್ಯಾಕ್ಸ್‌ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎನ್ನಲಾಗಿದ್ದು, ಪ್ರೋಮೋ ನೋಡಿ ಕುಣಿದಾಡಿದ್ದಾರೆ.

Max Movie Promo Starring Kiccha Sudeep Unveiled On Kannada Bigg Boss

ವಿಲನ್ ಪಾತ್ರಗಳ ಮೂಲಕ ಖ್ಯಾತಿ ಗಳಿಸಿರುವ ಉಗ್ರಂ ಮಂಜು ಅವರು ಮ್ಯಾಕ್ಸ್‌ ಸಿನಿಮಾದಲ್ಲೂ ವಿಲನ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುದೀಪ್‌ ಅವರೊಂದಿಗೆ ಉಗ್ರಂ ಮಂಜು ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದು, ಇದಕ್ಕೆ ಬಿಗ್‌ಬಾಸ್‌ ಕೂಡ ಶುಭಹಾರೈಸಿದ್ದಾರೆ. ಇನ್ನು ಪ್ರೋಮೋ ಕಂಡು ಉಗ್ರಂ ಮಂಜು ಸಂಭ್ರಮಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ಉಗ್ರಂ ಮಂಜು ಅವರು ಕಾಣಿಸಿಕೊಂಡಿದ್ದು ಮತ್ತೊಮ್ಮೆ ಪ್ರೋಮೋ ಹಾಕಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಯಾಂಡಲ್‌ವುಡ್‌ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್‌ ಸಿನಿಮಾ ಈಗಾಗಲೇ ಬಿಡುಗಡೆಗೂ ಮುನ್ನವೇ ಕ್ರೇಜ್‌ ಹುಟ್ಟಿಸಿದೆ. ಇನ್ನು ಚಿತ್ರತಂಡವು ಸಿನಿಮಾ ಬಿಡುಗಡೆಯ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿತ್ತು. ಇನ್ನು ಡಿಸೆಂಬರ್‌ 25ರಂದು ಈ ಸಿನಿಮಾ ರಿಲೀಸ್‌ ಆಗಲಿದೆ ಎಂದು ಅನೌನ್ಸ್‌ ಮಾಡಿತ್ತು.

ಇನ್ನು ಈ ಕ್ರಿಸ್‌ಮಸ್‌ಗೆ ಮ್ಯಾಕ್ಸ್‌ ಸಿನಿಮಾ ಧೂಳೆಬ್ಬಿಸಲು ಬರುತ್ತಿದ್ದು, ತಮಿಳು ಚಿತ್ರರಂಗದ ನಿರ್ಮಾಪಕ ಕಲೈಪುಲಿ ಎಸ್ ಧಾನು ಅವರು ಮ್ಯಾಕ್ಸ್ ಸಿನಿಮಾ ಪ್ರೊಡ್ಯೂಸ್‌ ಮಾಡುತ್ತಿದ್ದಾರೆ. ಮ್ಯಾಕ್ಸ್‌ ಸಿನಿಮಾ ಮೇಲೆ ಪ್ರೇಕ್ಷಕರು ಹೆಚ್ಚು ನಿರೀಕ್ಷೆಗಳನ್ನು ಹೊಂದಿದ್ದು, ಮ್ಯಾಕ್ಸ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡು, ವರಲಕ್ಷ್ಮಿ ಶರತ್​ಕುಮಾರ್​, ಪ್ರಮೋದ್​ ಶೆಟ್ಟಿ ಸೇರಿದಂತೆ ಹಲವರು ಮುಖ್ಯಪಾತ್ರದಲ್ಲಿದ್ದಾರೆ. ಟೀಸರ್‌ ಹಾಗೂ ಪೋಸ್ಟರ್‌ನಲ್ಲಿ ಸುದೀಪ್‌ ಸಖತ್‌ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಗ್‌ಬಾಸ್‌ ಮನೆಮಂದಿಯೆಲ್ಲ ಮ್ಯಾಕ್ಸ್‌ ಸಿನಿಮಾ ನೋಡಿ ಫಿದಾ ಅಂತೂ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+