ಚಿನ್ನುಮರಿ ಖ್ಯಾತಿಯ ಚಂದನಾಗೆ ಮದುವೆ ಫಿಕ್ಸ್, ಹುಡುಗ ಯಾರು ?!
ಕರ್ನಾಟಕದಲ್ಲಿ ಈಗ ಚಿನ್ನುಮರಿ ಎನ್ನುವ ಹೆಸರು ವರ್ಡ್‌ಫೇಮಸ್. ಲಕ್ಷ್ಮೀ ನಿವಾಸ ಸೀರಿಯಲ್ ನೋಡುವವರಿಗೆಲ್ಲ ಚಿನ್ನುಮರಿ ಹೆಸರು ಅದರಲ್ಲಿ ಬರುವ ಮೆಲೋಡಿ ಹೈಡ್ರಾಮಾದ ಪರಿಚಯ ಚೆನ್ನಾಗಿ ಗೊತ್ತಿರುತ್ತೆ. ಇದೀಗ ಈ ಧಾರವಾಹಿಯಲ್ಲಿ ಜಾಹ್ನವಿ (ಚಿನ್ನುಮರಿ) ಪಾತ್ರ ಮಾಡುತ್ತಿರುವ ನಟಿ ಚಂದನಾ ಅನಂತಕೃಷ್ಣ ಅವರ ಮದುವೆ ಫಿಕ್ಸ್ ಆಗಿದೆ. ಜಯಂತ್ ಹಾಗೂ ಜಾಹ್ನವಿ ಪಾತ್ರಧಾರಿಗಳ ಅಭಿನಯ ಜನರ ಮನೆಮಾತಾಗಿದೆ. ಅದರ ಜೊತೆ ಜೊತೆ ಈಗ ಚಿನ್ನುಮರಿ ಎನ್ನುವ ಹೆಸರು ಸಹ ಫುಲ್ ಫೇಮಸ್ ಆಗಿದೆ.
ಇದೀಗ ಲಕ್ಷ್ಮೀ ನಿವಾಸ ಸೀರಿಯಲ್ ಚಿನ್ನುಮರಿ ಖ್ಯಾತಿಯ ನಟಿ ಚಂದನಾ ಅನಂತಕೃಷ್ಣ ಅವರ ಮದುವೆ ಫಿಕ್ಸ್ ಆಗಿದೆ. ಚಂದನಾ ಅವರು ಉದ್ಯಮಿ ಪ್ರತ್ಯಕ್ಷ್ ಎನ್ನುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಇದೇ ತಿಂಗಳು ಅವರ ವಿವಾಹ ದಿನಾಂಕ ನಿಗದಿಯಾಗಲಿದೆ ಎನ್ನಲಾಗಿದೆ.

ಇನ್ನು ಚಂದನಾ ಅನಂತಕೃಷ್ಣ ಅವರು ಅಭಿನಯದ ಜೊತೆ ಜೊತೆಗೆ ಚಿನ್ನುಮರಿ ಪಾತ್ರದಿಂದಲೇ ಫೇಮಸ್ ಆಗಿದ್ದಾರೆ. ಚಂದನಾ ಅವರು, ಲಕ್ಷ್ಮೀ ನಿವಾಸ ಸೀರಿಯಲ್‌ಗೂ ಮೊದಲಿನಿಂದಲೂ ಕನ್ನಡ ಪ್ರೇಕ್ಷಕರಿಗೆ ಪರಿಚಿತ. ಇದಕ್ಕೂ ಮೊದಲು ಅವರು ಬಿಗ್ ಬಾಸ್ ಸೀಸನ್-7, ಡ್ಯಾನ್ಸಿಂಗ್ ಚಾಂಪಿಯನ್ ಹಾಗೂ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚಿನ್ನುಮರಿ ಡೈಲಾಗ್ ಫೇಮಸ್: ಚಿನ್ನುಮರಿ ಎನ್ನುವ ಡೈಲಾಗ್ ಈಗ ಕರ್ನಾಟಕದಲ್ಲಿ ಭಾರೀ ಫೇಮಸ್ ಆಗಿದೆ. ಲಕ್ಷ್ಮೀ ನಿವಾಸದ ಜಯಂತ್ ಪಾತ್ರ ಮಾಡುವವರು ಜಾಹ್ನವಿ ಪಾತ್ರಧಾರಿಯನ್ನು ಚಿನ್ನುಮರಿ ಹೆಸರಿನಿಂದ ಕರೆಯುತ್ತಾರೆ.

ಈ ಸೀರಿಯಲ್‌ನಲ್ಲಿ ಜಯಂತ್ ಅವರದ್ದು ಸೈಕೋ ಮಾದರಿಯ ಪಾತ್ರ. ಜನ ಈ ಪಾತ್ರವನ್ನು ಬೈಯ್ತಾ ಇದ್ದಾರೆ. ಆದರೆ, ಆ ಪಾತ್ರದ ಅಭಿನಯಕ್ಕೆ ಜನ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಈ ರೀತಿ ಮಾಡೋ ಗಂಡನ ಜೊತೆ ಯಾರ್ ಬಾಳ್ತಾರೆ ಪಾಪ ಜಾಹ್ನವಿ ಅನ್ನೋ ಕಾಮೆಂಟ್‌ಗಳು ಈ ಸಿರೀಯಲ್‌ಗೆ ಪ್ರೇಕ್ಷಕರಿಂದ ಬರ್ತಿದೆ.
ಚಿನ್ನುಮರಿ ಚಿನ್ನುಮರಿ ಎನ್ನುತ್ತಾಲೆ ಜಾಹ್ನವಿಗೆ ಸೀರಿಯಲ್‌ನಲ್ಲಿ ಕೊಡುವ ಟಾರ್ಚರ್ ಅನ್ನು ಜನ ಕೂಡ ಕುತೂಹಲದಿಂದಲೇ ನೋಡ್ತಾ ಇದ್ದಾರೆ. ಯಾಕಂದ್ರೆ ಈ ಸೀರಿಯಲ್‌ನ ಜಯಂತ್ ಹಾಗೂ ಜಾಹ್ನವಿ ಪಾತ್ರ ಅಷ್ಟೊಂದು ಭಿನ್ನವಾಗಿದೆ. ದಂಪತಿಗಳಿಬ್ಬರ ನಡುವೆ ನಡೆಯುವ ಕಥೆಯಂತೇ ಈ ಸೀರಿಯಲ್‌ನ ದೃಶ್ಯಗಳು ಇದ್ದರೂ, ತೀರ ಭಿನ್ನವಾಗಿ ಹಾಗೂ ಪ್ರೇಕ್ಷಕರು ಅಂದಾಜು ಸಹ ಮಾಡಲಾರದಷ್ಟು ಭಿನ್ನವಾಗಿದೆ.
ರೋಚಕ ತಿರುವು: ಇನ್ನು ಲಕ್ಷ್ಮೀನಿವಾಸ ನಿವಾಸ ಧಾರಾವಾಹಿಯು ಈಗ ರೋಚಕಘಟ್ಟವನ್ನು ತಲುಪಿದೆ. ಈ ಧಾರವಾಹಿಯಲ್ಲಿನ ಜಾಹ್ನವಿ ಅವರಿಗೆ ಜಯಂತ್‌ಗೆ ಇರುವ ಸಮಸ್ಯೆ ಹಾಗೂ ವರ್ತನೆಯ ಬಗ್ಗೆ ಅನುಮಾನ ಶುರುವಾಗಿದೆ. ಆದರೆ, ಅದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಬಿಡಲೂ ಆಗದೆ ಇರುವಂತೆ ಧಾರಾವಾಹಿಯ ದೃಶ್ಯಗಳು ಸಾಗುತ್ತಿವೆ. ಒಂದೊಂದೇ ಗುಟ್ಟು ರಟ್ಟಾಗುತ್ತಿದ್ದಂತೆಯೇ ಪ್ರೇಕ್ಷಕರು ಸಹ ಮುಂದೇ ಏನಾಗುತ್ತೋ ಅಂತ ರೋಮಾಂಚಿತರಾಗುತ್ತಿದ್ದಾರೆ.












Click it and Unblock the Notifications