Malayalam Films: ಸಾವಿರ ಕೋಟಿಯತ್ತ ಮುನ್ನುಗ್ಗುತ್ತಿದೆ ಮಲಯಾಳಂ ಚಿತ್ರರಂಗ, ಕನ್ನಡ, ಹಿಂದಿ, ತೆಲುಗು, ತಮಿಳು ಸಿನಿಮಾಗಳ ಗತಿಯೇನು
ಬೆಂಗಳೂರು, ಮೇ. 21: ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ಭಾರತದ ಪ್ರಮುಖ ಚಿತ್ರೋದ್ಯಮಗಳು ಲಾಭವಿಲ್ಲದೆ ಒದ್ದಾಡುತ್ತಿವೆ. ಸೂಪರ್ ಸ್ಟಾರ್‌ಗಳು, ಕೋಟಿ ಕೋಟಿ ಬಜೆಟ್‌ಗಳಿಂದ ತುಂಬಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಲು ಹೆಣಗಾಡುತ್ತಿದ್ದರೇ, ಇತ್ತ, ಮಲಯಾಳಂ ಚಿತ್ರರಂಗ ಹಿಟ್ ಮೇಲೆ ಹಿಟ್ ಸಿನಿಮಾ ನೀಡುತ್ತಾ ಸಾವಿರಾರು ಕೋಟಿ ಬಾಚಿಕೊಳ್ಳುತ್ತಿದೆ.
ಇತರ ಚಿತ್ರರಂಗಗಳು ಭಾರಿ ಬಜೆಟ್ ಮತ್ತು ಸೂಪರ್ ಸ್ಟಾರ್‌ಗಳ ಹಿಂದೆ ಬಿದ್ದು ಒದ್ದಾಡುತ್ತಿರುವಾಗ ಮಲಯಾಳಂ ಚಲನಚಿತ್ರೋದ್ಯಮವು ಈಗಾಗಲೇ ಅನೇಕ ಬ್ಲಾಕ್‌ಬಸ್ಟರ್‌ಗಳಿಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ ಅನೇಕ ಸೂಪರ್‌ಹಿಟ್‌ಗಳನ್ನು ನೀಡಿ, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ರೂ 1,000 ಕೋಟಿ ದಾಟಿದೆ ಎಂದು ವರದಿಯಾಗಿದೆ.

ಮಲೆಯಾಳಂ ಚಿತ್ರರಂಗದ ಯಶಸ್ಸು
ಈ ವರ್ಷ ಬಿಡುಗಡೆಯಾದ ಮಂಜುಮ್ಮೆಲ್ ಬಾಯ್ಸ್, ಆಡುಜೀವಿತಂ (ಗೋಟ್ ಲೈಫ್) ಮತ್ತು ಆವೇಶಂ ಕ್ರಮವಾಗಿ ರೂ. 240.94 ಕೋಟಿ, ರೂ. 157.44 ಕೋಟಿ ಮತ್ತು ರೂ. 153.52 ಕೋಟಿ ಗಳಿಸಿವೆ. ಪೃಥ್ವಿರಾಜ್ ಸುಕುಮಾರನ್, ಬೇಸಿಲ್ ಜೋಸೆಫ್, ನಿಖಿಲಾ ವಿಮಲ್ ಮತ್ತು ಅನಸ್ವರ ರಾಜನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನಿರ್ದೇಶಕ ವಿಪಿನ್ ದಾಸ್ ಅವರ ಗುರುವಾಯೂರಂಬಳ ನಡೆಯಿಲ್ ಬಿಡುಗಡೆಗೆ ಮುನ್ನವೇ, ಜನವರಿಯಿಂದ ಏಪ್ರಿಲ್ 2024 ರವರೆಗೆ ಮಲಯಾಳಂ ಚಿತ್ರರಂಗದ 985 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು 'ಮಾತೃಭೂಮಿ' ವರದಿ ಮಾಡಿದೆ.
ಗುರುವಾಯೂರಂಬಳ ನಡೆಯಿಲ್‌ನ ವಿಶ್ವಾದ್ಯಂತ 30 ಕೋಟಿ ರೂಪಾಯಿ ಗಳಿಕೆ ದಾಟಿದೆ ಎಂಬ Sacnilk ವರದಿ ಮಾಡಿದೆ. ಇದನ್ನೂ ಪರಿಗಣಿಸಿದರೆ ಮಲೆಯಾಳಂ ಸಿನಿಮಾ ರಂಗ ವಿಶ್ವಾದ್ಯಂತ ಒಟ್ಟು 1,000 ಕೋಟಿ ರೂಪಾಯಿಗಳನ್ನು ಮೀರಿದೆ. ಹೀಗಾಗಿ 2024 ರ ಇತಿಹಾಸದಲ್ಲಿ ಒಂದು ಹೆಗ್ಗುರು ದಾಖಲಿಸಿದೆ.

ಕಳೆದ ವರ್ಷವೂ ಮಲೆಯಾಳಂ ಸಿನಿಮಾ ಕಮಾಲ್‌ಗಳು
ಮಾತೃಭೂಮಿ ವರದಿಯಂತೆ, ಕಲೆದ ವರ್ಷ 2018, ಕಣ್ಣೂರ್ ಸ್ಕ್ವಾಡ್, ಆರ್‌ಡಿಎಕ್ಸ್, ನೇರು ಮತ್ತು ರೋಮಾಂಚಮ್‌ನಂತಹ ಚಲನಚಿತ್ರಗಳ ಯಶಸ್ಸು ಚಿತ್ರರಂಗಕ್ಕೆ ಉತ್ತಮ ಕೊಡುಗೆ ನೀಡಿದೆ. ಸುಮಾರು 500 ಕೋಟಿ ರೂ.ಗಳ ಒಟ್ಟು ಜಾಗತಿಕ ಗಳಿಕೆಯನ್ನು ಕಂಡಿದೆ. 2024 ರಲ್ಲಿ ಭಾರತದ ಒಟ್ಟು ಒಟ್ಟು ಸಂಗ್ರಹಣೆಯಲ್ಲಿ ಮಲಯಾಳಂ ಸಿನಿಮಾ ಇದುವರೆಗೆ ಶೇಕಡ 20 ರಷ್ಟು ಕೊಡುಗೆ ನೀಡಿದೆ. ಆದರೆ, ಭಾರಿ ಬಜೆಟ್‌ಗಳ ಸಿನಿಮಾ ನೀಡುವ ಬಾಲಿವುಡ್ ಕೇವಲ 38% ಕೊಡುಗೆ ನೀಡಿದೆ.
ಮಲೆಯಾಳಂನಲ್ಲಿ ಹೊಸ ಇತಿಗಾಸ ಬರೆದ ಸಿನಿಮಾಗಳು
ಮಾಲಿವುಡ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹತ್ತು ಚಿತ್ರಗಳಲ್ಲಿ ಐದು ಚಿತ್ರಗಲೆಂದರೆ ಮಂಜುಮ್ಮೆಲ್ ಬಾಯ್ಸ್, ಆಡುಜೀವಿತಂ, ಆವೇಶಂ, ಪ್ರೇಮಲು ಮತ್ತು ಬ್ರಹ್ಮಯುಗಂ 2024 ರಲ್ಲಿ ಬಿಡುಗಡೆಯಾಗಿವೆ. ಸಿನಿಮಾರಂಗದ ದೇಶೀಯ ನಿವ್ವಳವು 500 ಕೋಟಿ ರೂಪಾಯಿಗಳನ್ನು ಮೀರಿದೆ.
ಮಂಜುಮ್ಮೆಲ್ ಬಾಯ್ಸ್ 141.99 ಕೋಟಿ ರೂ., ಆಡುಜೀವಿತಂ ರೂ 85.08 ಕೋಟಿ, ಆವೇಶಂ ರೂ 84.73 ಕೋಟಿ, ಪ್ರೇಮಲು ರೂ 75.64 ಕೋಟಿ ಮತ್ತು ಬ್ರಹ್ಮಯುಗಂ ರೂ. 2703 ಕೋಟಿ ಗಳಿಸಿವೆ. ಇನ್ನು, ಶಾರುಖ್ ಖಾನ್ ಅವರ ಸಿನಿಮಾಗಳಿಂದಾಗಿಯೇ ಕಳೆದ ವರ್ಷ ಬಾಲಿವುಡ್ 1,000 ಕೋಟಿ ಗಳಿಸಿತ್ತು, ಈ ವರ್ಷ 500 ಕೋಟಿ ಗಳಿಕೆ ಕಂಡು ಕಷ್ಟಪಡುತ್ತಿದೆ.
ಯಶಸ್ಸನ್ನು ಕಾಪಾಡಿಕೊಳ್ಳಲು ಬಾಲಿವುಡ್ ಚಿತ್ರರಂಗ ವೈಫಲ್ಯ ಎದುರಿಸುತ್ತಿದೆ. 358.89 ಕೋಟಿ ಗಳಿಸಿದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಈವರೆಗೆ 2024 ರ ಬಾಲಿವುಡ್‌ನ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. ಶೈತಾನ್ (ರೂ. 213.64 ಕೋಟಿ), ಕ್ರೂ (ರೂ. 151.35 ಕೋಟಿ), ತೇರಿ ಬಾತನ್ ಮೇ ಐಸಾ ಉಲ್ಜಾ ಜಿಯಾ (ರೂ. 146.26 ಕೋಟಿ) ಮತ್ತು ಆರ್ಟಿಕಲ್ 370 (ರೂ. 105.15 ಕೋಟಿ) ಈ ವರ್ಷ 100 ಕೋಟಿ ರುಪಾಯಿ ದಾಟಲು ಯಶಸ್ವಿಯಾದ ಚಿತ್ರಗಳು ಇವು ಮಾತ್ರ.
ಒಂದು ಕಾಲದಲ್ಲಿ ಭಾರತದ ಸಿನಿಮಾ ರಂಗದಲ್ಲಿ ಪ್ರಾಬಲ್ಯ ಮೆರೆದಿದ್ದ ಟಾಲಿವುಡ್ ಈ ವರ್ಷ ಹನುಮಾನ್ ಮತ್ತು ಟಿಲ್ಲು ಸ್ಕ್ವೇರ್ ಎಂಬ ಎರಡು ಯಶಸ್ವಿ ಸಿನಿಮಾಗಳನ್ನು ನೀಡಿದೆ. ಮಿಕ್ಕ ಮಹೇಶ್ ಬಾಬು ಅವರ ಗುಂಟೂರು ಕಾರಂ, ನಾಗಾರ್ಜುನ ಅವರ ನಾ ಸಾಮಿ ರಂಗ, ರವಿತೇಜ ಅವರ ಈಗಲ್, ವೆಂಕಟೇಶ್ ಅವರ ಸೈಂಧವ ಮತ್ತು ವಿಜಯ್ ದೇವರಕೊಂಡ ಅವರ ದಿ ಫ್ಯಾಮಿಲಿ ಸ್ಟಾರ್ ಫ್ಲಾಪ್ ಆಗಿವೆ.
ಮತ್ತೊಂದೆಡೆ, ತಮಿಳು ಸಿನಿಮಾ ಇನ್ನೂ ಕೆಟ್ಟ ಸ್ಥಿತಿಯಲ್ಲಿದೆ. ಕ್ಯಾಪ್ಟನ್ ಮಿಲ್ಲರ್ ಎಂಬ ಒಂದೇ ಒಂದು ಚಿತ್ರ ಈ ವರ್ಷ 100 ಕೋಟಿ ದಾಟಿದೆ. ಅಯಾಲನ್ ಮತ್ತು ಅರಣ್ಮನೈ 4 ಕೊಂಚ ಪ್ರಭಾವ ಬೀರಿವೆ. ಇನ್ನು ಕನ್ನಡದಲ್ಲಿ ಉಪಾಧ್ಯಕ್ಷ, ಯುವ ಬಿಟ್ಟರೇ ಕೋಟಿ ಕೋಟಿ ಗಳಿಸಿದೆ ಎಂದು ಹೇಳಿಕೊಳ್ಳುವ ಅಂತ ಸಿನಿಮಾಗಳು ಬಂದಿಲ್ಲ.












Click it and Unblock the Notifications