KGF 3: ಕೆಜಿಎಫ್‌-3 ಶೂಟಿಂಗ್ ಆಗಿದೆ! ಸಿನಿಮಾದ ನಟಿ ಕೊಟ್ರು ಬಿಗ್ ಅಪ್‌ಡೇಟ್‌

'ಕೆಜಿಎಫ್‌' ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದ ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ಅಲೆ ಸೃಷ್ಟಿಸಿದ ಸಿನಿಮಾ. ಕೆಜಿಎಫ್ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುತ್ತದೆ ಎಂದು ಹೇಳಿದ್ದ ಯಶ್ ತಮ್ಮ ಮಾತು ಉಳಿಸಿಕೊಂಡರು. ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿತ್ತು.

ಶಾರೂಖ್ ಖಾನ್‌ರ ಝೀರೋ ಸಿನಿಮಾಗೆ ಸೆಡ್ಡು ಹೊಡೆದಿದ್ದ ಕೆಜಿಎಫ್ ಬಾಲಿವುಡ್ ಅಂಗಳದಲ್ಲೂ ಗೆದ್ದು ಬೀಗಿತ್ತು. ಅದರಲ್ಲೂ ಕೆಜಿಎಫ್ 2 ಸಿನಿಮಾ ಕನ್ನಡದಲ್ಲೂ ಸಾವಿರ ಕೋಟಿ ದುಡಿಯುವ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟಿತ್ತು. ಪ್ರಶಾಂತ್ ನೀಲ್ ಮತ್ತು ಯಶ್‌ ಈಗ ಭಾರತ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟ, ನಿರ್ದೇಶಕರಾಗಿದ್ದಾರೆ.

malavika avinash gives big update about yash kgf 3 shooting

ಕೆಜಿಎಫ್ 2 ಬಳಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾ ಮಾಡಿದ್ದು, ಇದೀಗ ಎನ್‌ಟಿಆರ್ ಜೊತೆ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ. ಸುದೀರ್ಘ ಸಮಯ ತೆಗೆದುಕೊಂಡ ಯಶ್ ಟಾಕ್ಸಿಕ್ ಸಿನಿಮಾ ಘೋಷಣೆ ಮಾಡಿದ್ದು ಸದ್ಯ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಯಶ್ ಟಾಕ್ಸಿಕ್ ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದು, ಅಂದುಕೊಂಡಿದ್ದಕ್ಕಿಂತ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಕೆಜಿಎಫ್ 3 ಶೂಟಿಂಗ್‌?

ಇನ್ನು ಕೆಜಿಎಫ್ 1 ಮತ್ತು 2 ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಮಾಳವಿಕಾ ಅವಿನಾಶ್ ಕೆಜಿಎಫ್ 3 ಸಿನಿಮಾ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟಿದ್ದು ಇದನ್ನು ಕೇಳಿ ಯಶ್ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಖಾಸಗಿ ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮಾಳವಿಕಾ ಅವಿನಾಶ್, ಕೆಜಿಎಫ್ 3 ಶೂಟಿಂಗ್‌ಗೆ ನಾನು ಹೋಗಿದ್ದೇನೆ. ಲೈಬ್ರರಿ ಮಾದರಿಯಲ್ಲಿ ದೊಡ್ಡ ಸೆಟ್ ಹಾಕಿದ್ದಾರೆ, ಸೆಟ್ ತುಂಬಾ ವಿಭಿನ್ನವಾಗಿದ್ದು ಶೂಟಿಂಗ್‌ನಲ್ಲಿ ನಟ ಪ್ರಕಾಶ್‌ ರಾಜ್‌, ನಾಗಾಭರಣ ಮತ್ತು ನಾನು ಭಾಗವಹಿಸಿದ್ದೆವು ಎಂದು ಹೇಳಿದ್ದಾರೆ.

ಮಾಳವಿಕಾ ಅವಿನಾಶ್ ಅವರ ಮಾತು ಕೇಳಿದ ಅಭಿಮಾನಿಗಳು ಇದೀಗ ಭಾರಿ ತಲೆ ಕೆಡಿಸಿಕೊಂಡಿದ್ದಾರೆ. ಯಶ್ ಏನಾದರೂ ಸೈಲೆಂಟ್ ಆಗಿ ಸಿನಿಮಾ ಶೂಟಿಂಗ್ ಮಾಡಿದ್ರಾ ಎನ್ನುವ ಪ್ರಶ್ನೆ ಕೂಡ ಇದೆ. ಕೆಜಿಎಫ್ 3 ಸಿನಿಮಾ ಬಂದೇ ಬರುತ್ತೆ ಎಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೂಡ ಹೇಳಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಕೆಜಿಎಫ್ 3 ಆಗುತ್ತೆ ಅಂದಿದ್ದರು, ಇನ್ನು ಯಶ್ ಕೂಡ ನಾನು ಯಾವಾಗ ಹೇಳ್ತೀನಿ ಅವಾಗ ಕೆಜಿಎಫ್ 3 ಶುರುವಾಗುತ್ತೆ ಎಂದಿದ್ದರು.

ಇದೀಗ ಮಾಳವಿಕಾ ಅವಿನಾಶ್ ನೀಡಿರುವ ಹೇಳಿಕೆ ಕೆಜಿಎಫ್ 3 ಸಿನಿಮಾ ಆಗುವ ಬಗ್ಗೆ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಒಂದು ವೇಳೆ ಕೆಜಿಎಫ್ 3 ಬಂದರೆ ಭಾರತ ಸಿನಿಮಾರಂಗದಲ್ಲೇ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+