ಅಂದು ಅಮ್ಮ, ಇಂದು ಮಗಳು.. ಇಬ್ಬರೂ ಸೇಮ್ ಟು ಸೇಮ್!
ನಟಿ ಮಾಲಾಶ್ರೀ ಅವರು ಕನ್ನಡ ಸಿನಿಮಾ ರಂಗದ ಕನಸಿನ ರಾಣಿಯಾಗಿ ಮೆರೆದಿದ್ದರು. ಈ ನಟಿ ಅತಿ ಚಿಕ್ಕ ವಯಸ್ಸಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು ಅಬ್ಬರಿಸಿದ್ದರು. ಈಗ ಅದೇ ರೀತಿ ಅವ್ರ ಪುತ್ರಿ ಅಂದ್ರೆ ನಟಿ ಮಾಲಾಶ್ರೀ ಅವರ ಮಗಳು ಕೂಡ ಅಬ್ಬರಿಸೋದಕ್ಕೆ ಆರಂಭ ಮಾಡಿದ್ದಾರೆ. 'ಕಾಟೇರ' ಸಿನಿಮಾ ಮೂಲಕ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇದೇ ವೇಳೆ ಅಮ್ಮ ಮತ್ತು ಮಗಳ ಮಧ್ಯೆ ಹೋಲಿಕೆ ಮಾಡಲಾಗ್ತಿದೆ.
ಅಂದಹಾಗೆ 'ಕಾಟೇರ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ದೊಡ್ಡ ಮಟ್ಟಿಗೆ ಅಬ್ಬರ ತೋರಿಸುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ಈ ಸಿನಿಮಾ 100 ಕೋಟಿ ಕ್ಲಬ್ ಸೇರೋದು ಕೂಡ ಗ್ಯಾರಂಟಿ ಆಗುತ್ತಿದೆ. ಇದೇ ಸಮಯದಲ್ಲಿ ನಟಿ ಮಾಲಾಶ್ರೀ ಅವರ ಮಗಳ ಮೊದಲ ಚಿತ್ರ, ಹೀಗೆ ದೊಡ್ಡ ಮಟ್ಟಿಗೆ ಹಿಟ್ ಆಗಿರುವುದು ಗಮನ ಸೆಳೆದಿದೆ. ಇದರ ಜೊತೆಗೆ ಆರಾಧನಾ & ಅವರ ತಾಯಿ ಮಾಲಾಶ್ರೀ ಅವರು ಚಿಕ್ಕ ವಯಸ್ಸಿನಲ್ಲಿ ಒಂದೇ ರೀತಿ ಕಾಣಿಸ್ತಾರೆ ಅನ್ನೋ ಮಾತು ಕೂಡ ಕೇಳಿಬಂದಿದೆ.

1989ರಲ್ಲಿ ನಟಿ ಮಾಲಾಶ್ರೀ ಎಂಟ್ರಿ!
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಹೋಲಿಕೆ ಮಾಡಲಾಗುತ್ತಿದೆ. ಮಾಲಾಶ್ರೀ ಅವರ ಹಳೆಯ ಫೋಟೋ ಹಾಗೂ ಈಗಿನ ಆರಾಧನಾ ರಾಮ್ ಅವರ ಫೋಟೋ ಜೊತೆಗಿಟ್ಟು ಹೋಲಿಕೆ ಮಾಡಲಾಗುತ್ತಿದೆ. ಈ ಮೂಲಕ ಅಮ್ಮ & ಮಗಳು ಎಲ್ಲೆಲ್ಲು ವೈರಲ್ ಆಗುತ್ತಿದ್ದಾರೆ. ಒಂದು ಕಾಲದಲ್ಲಿ ಅಂದ್ರೆ ರೆಟ್ರೋ ಕಾಲದಲ್ಲಿ ಕನ್ನಡ ಸಿನಿಮಾಗಳಲ್ಲಿ ಮಾಲಾಶ್ರೀ ಅವರು, ದೊಡ್ಡ ಮಟ್ಟಿಗೆ ಹೆಸರು ಸಂಪಾದನೆ ಮಾಡಿದ್ದರು.
1989ರಲ್ಲಿ ನಟಿ ಮಾಲಾಶ್ರೀ ಅವರು ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡದಲ್ಲಿ, ಕಮಾಲ್ ಮಾಡಲು ಶುರು ಮಾಡಿದ್ದರು. ಆ ಬಳಿಕ ಗಜಪತಿ ಗರ್ವಭಂಗ ಮತ್ತು ಪೊಲೀಸ್ ಹೆಂಡತಿ, ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಮೃತ್ಯುಂಜಯ ಹೀಗೆ ಸಾಲು ಸಾಲು ಸಿನಿಮಾ ಮಾಡುತ್ತಾ ಬ್ಯುಸಿ ಆದರು. ಇದೀಗ ಮಾಲಾಶ್ರೀ ಮಗಳು ಕೂಡ ಮೊದಲ ಸಿನಿಮಾ ಕಾಟೇರ ಮೂಲಕ ಕಮಾಲ್ ಮಾಡಿದ್ದಾರೆ.

ಮಾಲಾಶ್ರೀ ಮಗಳ ನಟನೆಗೆ ಫಿದಾ
ಇನ್ನು ಕನ್ನಡ ಸಿನಿಮಾ ಪ್ರೇಕ್ಷಕರು ಮಾಲಾಶ್ರೀ ಅವರ ಪುತ್ರಿಯ ನಟನೆಗೆ ಫಿದಾ ಆಗಿದ್ದಾರೆ. ಹಾಗೇ ವಿಮರ್ಶಕರು ಕೂಡ ಆರಾಧನಾ ಆಕ್ಟಿಂಗ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹೀಗೆಲ್ಲ ಮೊದಲ ಸಿನಿಮಾದಲ್ಲೇ ಆರಾಧನಾ ಅವರು ಕಮಾಲ್ ಮಾಡಿದ್ದು ಮುಂದೆ ಅವರ ಕೈಗೂ ಸಾಲು ಸಾಲು ಸಿನಿಮಾ ಬರುವ ನಿರೀಕ್ಷೆ ಇದೆ. ಮತ್ತೊಂದು ಕಡೆ, ಕನ್ನಡ ಅಭಿಮಾನಿಗಳು ಕೂಡ ಆರಾಧನಾ ಅವರ ನಟನೆಗೆ ಫಿದಾ ಆಗಿದ್ದಾರೆ.
100 ಕೋಟಿ ಕ್ಲಬ್ ಗ್ಯಾರಂಟಿ!
ಕನ್ನಡ ಚಿತ್ರರಂಗ ಮತ್ತೆ ಎಲ್ಲೆಲ್ಲೂ ಅಬ್ಬರಿಸುವಂತೆ ಮಾಡಿದೆ ಕಾಟೇರ ಸಿನಿಮಾ. ಇನ್ನ ಹಲವು ದಿನಗಳ ಕಾಲ ಇದೇ ರೀತಿ ಕಾಟೇರ ಸಿನಿಮಾ ಅಬ್ಬರಿಸಿ ತನ್ನ ಗಳಿಕೆ ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿರೀಕ್ಷೆ ದಟ್ಟವಾಗಿದೆ. ಹಾಗೇ ಈ ಸಿನಿಮಾ 100 ಕೋಟಿ ಕ್ಲಬ್ ದಾಟೋದು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ಕೂಡ ದುಪ್ಪಟ್ಟಾಗಿದೆ. ಇನ್ನು ನಟ ದರ್ಶನ್ ಅವರ ಫ್ಯಾನ್ಸ್‌ಗೆ ಇದು ದೊಡ್ಡ ಉಡುಗೊರೆಯಾಗಿದೆ. ಕಳೆದ 4 ದಿನದಲ್ಲಿ ಕಾಟೇರ ಸಿನಿಮಾ ಬರೋಬ್ಬರಿ 77 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದೆ ಎನ್ನಲಾಗಿದೆ. ಹೀಗೆ ಇನ್ನೇನು ಕೆಲವೇ ದಿನದಲ್ಲಿ ಕಾಟೇರ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.












Click it and Unblock the Notifications