Darshan Thoogudeep: ಲವ್‌ರೆಡ್ಡಿ ನಿರ್ಮಾಪಕರಿಂದ ಕ್ಲಾಸ್‌; ಐ ಲವ್ ದರ್ಶನ್‌ ಎಂದ ಲಾಯರ್ ಜಗದೀಶ್‌!

ನಟ ದರ್ಶನ್‌ ತೂಗುದೀಪ ಮಧ್ಯಂತರ ಜಾಮೀನು ಪಡೆದಿದ್ದು ಸದ್ಯ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗಲಿ, ಕೇಸ್‌ನಿಂದ ಹೊರಬಂದು ಸಿನಿಮಾ ಮಾಡಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಒಂದಷ್ಟು ದರ್ಶನ್ ಅಭಿಮಾನಿಗಳು ಮಾಧ್ಯಮಗಳ ಬಗ್ಗೆ, ಪೊಲೀಸರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಇದಕ್ಕೆ ಲಾಯರ್ ಜಗದೀಶ್‌ ಬುದ್ದಿ ಹೇಳಿದ್ದರಿಂದ ದರ್ಶನ್ ಅಭಿಮಾನಿಗಳು ಮತ್ತು ಲಾಯರ್ ಜಗದೀಶ್ ನಡುವೆ ಜಗಳ ಉಂಟಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಲಾಯರ್ ಜಗದೀಶ್‌ಗೆ ಎಚ್ಚರಿಕೆ ಕೊಟ್ಟು ಕಮೆಂಟ್ ಹಾಕುತ್ತಾರೆ. ಇದನ್ನೆಲ್ಲಾ ಗಮನಿಸುವ ಲಾಯರ್ ಜಗದೀಶ್ ಕೂಡ ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ಇತ್ತೀಚೆಗೆ ತಾನೆ ದರ್ಶನ್‌ ಹೆಸರು ಬಳಸಿಕೊಂಡು ಕೆಲವರು ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ, ಈ ವಿಚಾರ ದರ್ಶನ್‌ಗೆ ಗೊತ್ತಿದೆಯೋ ಗೊತ್ತಿಲ್ಲವೋ ನನಗೆ ಗೊತ್ತಿಲ್ಲ ಆದರೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.

love reddy producer criticise lawyer jagadish defaming darshan thoogudeep

ಇದೀಗ ಲಾಯರ್ ಜಗದೀಶ್‌ಗೆ ಲವ್‌ ರೆಡ್ಡಿ ಸಿನಿಮಾ ನಿರ್ಮಾಪಕರು ಸಂದರ್ಶನದ ವೇಳೆಯೇ ಕ್ಲಾಸ್ ತೆಗೆದುಕೊಂಡಿದ್ದು, ಕಾರ್ಯಕ್ರಮದ ಮಧ್ಯದಲ್ಲಿಯೇ ಹೊರ ಹೋಗಿದ್ದಾರೆ. ತೆಲುಗು-ಕನ್ನಡದಲ್ಲಿ ನಿರ್ಮಾಣವಾಗಿರುವ ಲವ್‌ ರೆಡ್ಡಿ ಸಿನಿಮಾ ಈಗಾಗಲೇ ತೆಲುಗಿನಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದ್ದು, ನವೆಂಬರ್ 22ರಂದು ಕನ್ನಡದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾ ತಂಡ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಲಾಯರ್ ಜಗದೀಶ್ ಸಿನಿಮಾ ತಂಡದ ಸಂದರ್ಶನ ಮಾಡಿದ್ದಾರೆ.

ಪದೇ ಪದೇ ದರ್ಶನ್‌ ಬಗ್ಗೆ ಮಾತಾಡೋದೆಕೆ

ಸಂದರ್ಶನದ ವೇಳೆ ಕೂಡ ಲಾಯರ್ ಜಗದೀಶ್‌ ಹಲವು ಬಾರಿ ದರ್ಶನ್ ಹೆಸರು ಪ್ರಸ್ತಾಪಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಲವ್‌ ರೆಡ್ಡಿ ಸಿನಿಮಾ ನಿರ್ಮಾಪಕರು ನೇರಪ್ರಸಾರದ ಸಂದರ್ಭದಲ್ಲೇ ಪದೇಪದೇ ದರ್ಶನ್ ಹೆಸರು ತೆಗೆದುಕೊಳ್ಳುವುದೇಗೆ, ಇಂತಹ ಸಮಯದಲ್ಲಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದೇಕೆ ಎಂದು ಕ್ಲಾಸ್ ತೆಗೆದುಕೊಂಡರು, ಬಳಿಕ ನಿಮ್ಮ ಇಂಟರ್ವ್ಯೂನೇ ಬೇಡ ಎಂದು ಎದ್ದು ಹೋಗಿದ್ದಾರೆ.

ಐ ಲವ್ ದರ್ಶನ್‌ ಎಂದ ಜಗದೀಶ್!

ಜಗದೀಶ್ ಮತ್ತು ನಿರ್ಮಾಪಕರನ್ನು ಸಮಾಧಾನ ಮಾಡಲು ಸಿನಿಮಾದ ನಾಯಕ ಅಂಜನ್ ರಾಮಚಂದ್ರ ಪ್ರಯತ್ನಿಸಿದರು ಆದರೆ ನಿರ್ಮಾಪಕರು ಮಾತ್ರ ಸಿಟ್ಟಿನಿಂದ ಅಲ್ಲಿಂದ ಹೋದರು. ಲಾಯರ್ ಜಗದೀಶ್ ಮತ್ತೆ ನಿರ್ಮಾಪರನ್ನು ಸಮಾಧಾನ ಮಾಡಿ ವಾಪಸ್ ಬರುವಂತೆ ಕರೆದರೂ ಸಫಲವಾಗಲಿಲ್ಲ. ಬಳಿಕ ಲಾಯರ್ ಜಗದೀಶ್ ನಾಯಕ, ನಾಯಕಿ ಜೊತೆ ಸಂದರ್ಶನ ಮುಂದುವರೆಸಿದರು.

ನಾಯಕ ಕೂಡ ದರ್ಶನ್‌ ಬಗ್ಗೆ ಹೆಚ್ಚು ಮಾತನಾಡದಂತೆ ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಲಾಯರ್ ಜಗದೀಶ್ ನಾನು ಕೂಡ ದರ್ಶನ್ ಅಭಿಮಾನಿ, ಅವರ ಸಿನಿಮಾಗಳನ್ನು ಇಷ್ಟ ಪಟ್ಟು ನೋಡುತ್ತೇನೆ. ಆದರೆ ಅವರ ಕೆಲವು ಅಭಿಮಾನಿಗಳು ಮಾಡುವ ಕೆಲಸದ ಬಗ್ಗೆ ಟೀಕೆ ಮಾಡುತ್ತೇನೆ, ಇದರಿಂದ ದರ್ಶನ್‌ಗು ಕೆಟ್ಟ ಹೆಸರು ಬರುವಂತಾಗಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+