'ನಟಿ ರಾಗಿಣಿ ಹಿಂದೆ ಜೆಡಿಎಸ್ ನಾಯಕ..ಯಲಹಂಕ ಫ್ಲಾಟ್ ಕೊಡಿಸಿದ್ದು ಅವರೇ'
ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ವಿರುದ್ಧ ಬೆಂಗಳೂರಿನ ಖ್ಯಾತ ವಕೀಲರು ಹಾಗೂ ಸಾಮಾಜಿಕ ಹೋರಾಟಗಾರರ ಪ್ರಖ್ಯಾತ್ ಗೌಡ ಸಾಲು ಸಾಲು ಆರೋಪ ಮಾಡುತ್ತಿದ್ದು, ಇದೀಗ ನಟಿ ರಾಗಿಣಿ ದ್ವಿವೇದಿ ಹಿಂದೆ ರಾಜಕೀಯ ಪ್ರಭಾವಿ ನಾಯಕ ಇರುವ ಬಗ್ಗೆ ಹೇಳಿದ್ದಾರೆ. ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ದುಬಾರಿ ಏರಿಯಾದಲ್ಲಿ ರಾಗಿಣಿಗೆ ಫ್ಲಾಟ್ ಕೊಡಿಸಿರುವುದು ರಾಜಕೀಯ ಪ್ರಭಾವಿ ನಾಯಕ ಎಂದು ಹೇಳಿದ್ದಾರೆ.
'ನಟಿ ರಾಗಿಣಿ ವಿರುದ್ಧದ ಸಾಕ್ಷಿಗಳನ್ನು ಒಬ್ಬ ಪ್ರಭಾವಿ ಅಧಿಕಾರಿಗೆ ಕೊಡುವ ಪ್ರಯತ್ನ ಮಾಡಿದೆವು. ಅವರು ಬಿಡುಗಡೆಯಾಗಿ ಎಂಟು ತಿಂಗಳ ಬಳಿಕ ನಾವು ಪ್ರಯತ್ನ ಪಟ್ಟೆವು. ಅವರು ಜೈಲಿನಲ್ಲಿದ್ದಾಗ ನಾವು ಏನು ಮಾಡಲು ಆಗುವುದಿಲ್ಲ. ಅವರು ಅರೆಸ್ಟ್ ಆದಾಗ ಒಳ್ಳೆಯಾದಾಯಿತು ಎಂದುಕೊಂಡೆವು. ಅವರಿಗೆ ಶಿಕ್ಷೆಯಾದರೆ ಒಂದಿಷ್ಟು ಜನರಿಗೆ ಪಾಠವಾಗುತ್ತದೆ ಅಂತಾ ಅಂದುಕೊಂಡೆವು. ಏಕಾಏಕಿ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಕ್ಕಿತು. ಆಗ ನಮಗೆ ಶಾಕ್ ಆಯ್ತು' ಎಂದರು.

'ನಮ್ಮದು ಒಂದು ತಂಡ ಇದೆ. ನಾವು ಒಂದಿಷ್ಟು ಸಾಕ್ಷಿಗಳನ್ನು ಒಗ್ಗೂಡಿಸಿ. ಮತ್ತಷ್ಟು ಸಾಕ್ಷಿಯನ್ನು ಸಂಗ್ರಹಿಸಿ ಮತ್ತೊಬ್ಬ ಪ್ರಭಾವಿ ಅಧಿಕಾರಿಯನ್ನು ಸಂಪರ್ಕ ಮಾಡಿದೆವು. ಆದರೆ ಅವರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವ ಭರವಸೆ ಸಿಗಲಿಲ್ಲ. ನಾನು ಮಾಡುತ್ತೇನೆ ಆದರೆ ಮುಂದಿನ ಹಂತಕ್ಕೆ ಹೋದಾಗ ಇದು ರದ್ದಾಗುತ್ತದೆ ಎನ್ನುವ ಅಭಿಪ್ರಾಯ ಬಂದಾಗ ನಾವು ಸ್ವಲ್ಪ ಮತ್ತೆ ಯೋಚನೆ ಮಾಡಬೇಕಾಯಿತು'.
'ಇದರಿಂದ ಒಂದು ರೂಪಾಯಿ ನನಗೆ ಲಾಭ ಇಲ್ಲ. ನಾನೊಬ್ಬ ಸಾಮಾಜಿಕ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದೇನೆ. ನಾವೇ ಶ್ರಮಪಟ್ಟು ಸಾಕ್ಷಿಗಳನ್ನು ಹುಡುಕಿ ತಂದರೂ ನೀವು ಕತ್ತರಿಸಿ ಹಾಕುತ್ತೀರಾ ಅಂದರೆ ನೀವು ಯಾರೋ ಪ್ರಭಾವಿನೇ ಆಗಿರುತ್ತೀರಾ. ಹೀಗಾಗಿ ಅವರ ವಿರುದ್ಧ ಹೋರಾಡಲು ನಮ್ಮ ಜೊತೆ ಕೂಡ ಒಂದು ದೊಡ್ಡ ಶಕ್ತಿ ಬೇಕಾಗುತ್ತದೆ' ಎಂದು ಹೇಳಿದರು.

'ರಾಗಿಣಿ ವಿರುದ್ಧ ಆರೋಪ ಮಾಡಿದ ನನ್ನ ಬಳಿ ಖಂಡಿತಾ ಸಾಕ್ಷಿಗಳಿವೆ. ಇವರಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆಯಲು ಯಾರು ಸಹಾಯ ಮಾಡಿದ್ದರೋ ಎಲ್ಲಾ ಸಾಕ್ಷಿ ಇದೆ. ಇಡೀ ಪ್ರಕರಣದಲ್ಲಿ ರಾಗಿಣಿ ಅವರು ಒಂದು ರೂಪಾಯಿ ಖರ್ಚು ಮಾಡಿಲ್ಲ. ಅವರ ಕಡೆಯಿಂದ ಒಂದು ರೂಪಾಯಿ ಲಾಯರ್‌ಗೆ ಹೋಗಿಲ್ಲ ಹಾಗಾದರೆ ಸಹಾಯ ಮಾಡಿದವರು ಯಾರು. ರಾಗಿಣಿ ಅವರ ಹಿಂದೆ ಪ್ರಭಾವಿ ವ್ಯಕ್ತಿ ಇದ್ದಾರೆ. ಅವರ ಹೆಸರು ಹೇಳಲು ಇಷ್ಟಪಡುವುದಿಲ್ಲ. ರಾಗಿಣಿಗೆ ಯಲಹಂಕದಲ್ಲಿ ಫ್ಲಾಟ್ ಕೊಡಿಸಿದ್ದಾರೆ' ಎಂದರು.
'ಯಲಹಂಕದಲ್ಲಿ ಜಾಗ ತುಂಬಾ ದುಬಾರಿ ಇದೆ. ಅಂತಹ ಒಂದು ಏರಿಯಾದಲ್ಲಿ ಆ ಫ್ಲಾಟ್ ಅನ್ನು ಜೆಡಿಎಸ್ ಪಕ್ಷದ ಒಬ್ಬ ಎಂಎಲ್‌ಸಿ ಕೊಡಿಸಿದ್ದಾರೆ. ಅವರು ಒಂದು ಎರಡು ಮೂರು ಸಾವಿರ ಕೋಟಿ ಬೆಲೆ ಬಾಳುವವರು. ಯಲಹಂಕದಲ್ಲಿ ಐದು ಬೆಡ್ ರೂಮ್ ಫ್ಲಾಟ್ ಆ ವ್ಯಕ್ತಿಗೆ ಏನು ಅಲ್ಲವೇ ಇಲ್ಲ. ರಾಗಿಣಿ ಅವರು ಅದು ಕೊಟ್ಟಾಗ ದೊಡ್ಡದು' ಎಂದು ಪ್ರಖ್ಯಾತ್ ಗೌಡ ಹೇಳಿದ್ದಾರೆ.












Click it and Unblock the Notifications