'ಲಕ್ಷ್ಮೀ ಬಾರಮ್ಮ': ಬೆಟ್ಟದಿಂದ ಜಾರಿಬಿದ್ದ ಕಾವೇರಿ.. ಮುಂದೇನಾಯ್ತು?

ಒಂದು ತಪ್ಪನ್ನು ಮುಚ್ಚಿ ಹಾಕುವುದಕ್ಕೆ ನೂರು ಸುಳ್ಳುಗಳನ್ನು ಹೇಳಿ ಕೊನೆಗೆ ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳಿವೆ. ಕೆಲವರು ಮಾಡಿದ ತಪ್ಪನ್ನು ಆಗಲೇ ಒಪ್ಪಿಕೊಂಡು ಯಾವುದೇ ಚಿಂತೆಯಿಲ್ಲದೆ, ನಿರಾಳರಾಗಿಬಿಡುತ್ತಾರೆ. ಇನ್ನೂ ಕೆಲ ಮಂದಿ ತಪ್ಪುಗಳನ್ನೇ ಅಸ್ತ್ರ ಮಾಡಿಕೊಂಡು ಕೊನೆಗೆ ಪೇಚಿಗೆ ಸಿಲುಕಿ ಆತ್ಮಹತ್ಯೆವರೆಗೂ ಹೋಗಿರುವ ಉದಾಹರಣೆಗಳಿವೆ. ಅಂತಹದ್ದೇ ಒಂದು ಸನ್ನೀವೇಶ ಕನ್ನಡ ಧಾರವಾಹಿಯೊಂದರ ಅಂತಿಮ ಘಟ್ಟದಲ್ಲಿ ನಡೆದಿದೆ.

ಲಕ್ಷ್ಮೀ ಬಾರಮ್ಮ ಎಂಬ ಧಾರಾವಾಹಿಯು ಏಪ್ರಿಲ್ 11ರಂದು ಅಂತಿಮ ಸಂಚಿಕೆಯೊಂದೆ ಮುಕ್ತಾಯವಾಗಲಿದೆ. 600ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರ್ಣಗೊಳಿಸಿದ ಈ ಧಾರಾವಾಹಿಯಲ್ಲಿ ಕೊನೇ ಘಟ್ಟದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇದು ನಿಜವಲ್ಲ, ಧಾರವಾಯಿಯ ಕೊನೇ ಗಳಿಗೆಯ ದೃಶ್ಯವಾಗಿದೆ. ತಪ್ಪು ಮಾಡಿದವರು ಉಪ್ಪು ತಿನ್ನಲೇಬೇಕೆಂಬ ಮಾತಿನಂತರ ಈ ದೃಶ್ಯವನ್ನು ತೋರಿಸಲಾಗಿದೆ.

Lakshmi Baramma Serial Bigg twist on End episode

ಕಲರ್ಸ್ ಕನ್ನಡದಲ್ಲಿ ಪ್ರಸಾರ ಪ್ರಸಾರವಾಗುವ ಧಾರವಾಹಿ ಲಕ್ಷ್ಮೀ ಬಾರಮ್ಮ ಆಗಿದೆ. ಇದೀಗ ಇದು ಮುಗಿಯುವ ಹಂತದಲ್ಲಿದ್ದು, ಈ ವೇಳೆಯೇ ಟ್ವಿಸ್ಟ್‌ವೊಂದನ್ನು ಕೊಡಲಾಗಿದೆ. ಇದಕ್ಕಾಗಿ ವೀಕ್ಷಕರು ಕಾತರದಿಂದ ಕಾದು ಕುಳಿತಿದ್ದಾರೆ. ಯಾಕೆಂದರೆ ಇದು ನಾಳೆ ಮುಕ್ತಾಯ ಆಗಲಿದೆ.

ಏಪ್ರಿಲ್ 11ರಂದು ಈ ಧಾರವಾಯಿಯ ಕೊನೆಯ ಎಪಿಸೋಡ್​ನ ಪ್ರಸಾರ ಮಾಡಲಿದೆ. ಇದು ಈಗಾಗಲೇ 600ಕ್ಕೂ ಹೆಚ್ಚು ಸಂಚಿಕೆಗಳನ್ನು ಗಳನ್ನು ಪೂರ್ಣಗೊಳಿಸಿದೆ. ಇದೀಗ ಇದು ಯಾವ ರೀತಿಯಲ್ಲಿ ಕೊನೆಗೊಳ್ಳಲಿದೆ ಎನ್ನುವುದೇ ವೀಕ್ಷಕರ ಕುತೂಹಲವಾಗಿದೆ. ಪ್ರೋಮೋದಲ್ಲಿ ಶಾಕಿಂಗ್‌ ಸನ್ನೀವೇಶವನ್ನು ತೋರಿಸಲಾಗಿದೆ.

ಕಥಾ ನಾಯಕ ವೈಷ್ಣವ್​ ಮೇಲೆ ಆತನ ತಾಯಿ ಕಾವೇರಿಗೆ ಎಲ್ಲಿಲ್ಲದ ದುರಾಸೆ ಪ್ರೀತಿ. ಅದೂ ಅತೀಯಾದರೆ ಅಮೃತ ಕೂಡ ವಿಷವಾಗುತ್ತದೆ ಅನ್ನುವಷ್ಟರ ಮಟ್ಟಿಗೆ. ಇದೇ ದುರಾಸೆ ಪ್ರೀತಿ ಕೊನೆಗೆ ತಾಯಿ-ಮಗನನ್ನೇ ದೂರ ಮಾಡಿಬಿಡುತ್ತದೆ. ಮಗನ ಮೇಲಿನ ಅತೀಯಾದ ಪ್ರೀತಿಯಿಂದ ಸೊಸೆಯನ್ನೇ ಬಲಿ ಕೊಡುವ ಮಟ್ಟಿಗೆ ಹೋಗಿರುವ ಕಾವೇರಿ ಕೊನೆಗೆ ಅವರೇ ಆತ್ಮಹತ್ಯೆ ದಾರಿ ಹಿಡಿದಿರುವ ಸನ್ನೀವೇಶವನ್ನು ಇಲ್ಲಿ ತೋರಿಸಲಾಗಿದೆ. ಆದ್ರೆ ನಿಜ ಜೀವನದಲ್ಲಿ ಯಾರೂ ಈ ತಪ್ಪು ಮಾಡಬೇಡಿ ಎಂದು ಇದನ್ನು ತೋರಿಸಲಾಗಿದೆ.

ಧಾರವಾಹಿಯಲ್ಲಿ ಕಾವೇರಿಯು ಮಗನನ್ನು ತುಂಬಾ ಮುದ್ದಿನಿಂದ ಬೆಳೆಸಿದ್ದಳು. ಮಗ ತನ್ನ ಕೈತಪ್ಪಿ ಹೋಗಬಾರದೆನ್ನುವ ಕಾರಣಕ್ಕೆ ಮುಗ್ಧಳಾಗಿದ್ದ ಲಕ್ಷ್ಮೀಗೆ ವಿವಾಹ ಮಾಡಿಕೊಟ್ಟಿದ್ದಳು. ಆದರೆ, ವೈಷ್ಣವ್ ದಿನ ಕಳೆದಂತೆ ಲಕ್ಷ್ಮೀ ಪ್ರೇಮಕ್ಕೆ ಮನಸೋತುಬಿಡುತ್ತಾನೆ. ಇದರಿಂದ ಕಾವೇರಿ ನನ್ನ ಮಗ ಎಲ್ಲಿ ಕೈತಪ್ಪಿ ಲಕ್ಷ್ಮಿಯ ಸೆರಗು ಹಿಡಿಯುತ್ತಾನೋ ಎಂಬ ಚಿಂತೆಗೆ ಒಳಗಾಗಿದ್ದಳು.

ಮೊದಲಿನಿಂದಲೂ ಮಗನ ಮೇಲಿನ ಅತೀಯಾದ ಪ್ರೀತಿಯಿಂದ ಮತ್ತೊಬ್ಬ ಪಾತ್ರದಾರಿ ಕೀರ್ತಿ ಎನ್ನುವವಳನ್ನು ಕೂಡ ಕೊಲೆ ಮಾಡುವ ಮಟ್ಟಕ್ಕೂ ಇಳಿದಿದ್ದಳು. ಅಷ್ಟೇ ಸಾಲದೆಂಬಂತೆ ಅದನ್ನು ಮುಚ್ಚಿಹಾಕಲು ಒಂದಲ್ಲ ಒಂದು ತಪ್ಪನ್ನು ಮಾಡುತ್ತಲೇ ಬಂದಳು. ಈ ವಿಚಾರ ಕೋರ್ಟ್‌ವರೆಗೂ ಹೋಯಿತು. ಆಗಲೂ ಮಗ ವೈಷ್ಣವ್‌ ತನ್ನ ತಾಯಿ ಯಾವ ತಪ್ಪು ಮಾಡಿಲ್ಲ ಎಂದು ಭಾವಿಸಿದ್ದನು. ಕೊನೆಗೆ ಸತ್ಯವೆಲ್ಲ ತಿಳಿದ ಮೇಲೆ ತನ್ನ ತಾಯಿಯ ಮೇಲೆ ಕೋಪಗೊಳ್ಳುತ್ತಾನೆ. ದೂರ ಆಗಲು ಪ್ರಯತ್ನಿಸುತ್ತಾನೆ.

ಆಗಲೂ ಎಚ್ಚೆತ್ತುಕೊಳ್ಳ ಕಾವೇರಿ ನನ್ನ ಮಗ ನನ್ನ ಕೈಯಿಂದ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ನಿನ್ನ ನನ್ನ ಸೊಸೆ ಮಾಡಿಕೊಂಡೆ. ಆದರೆ, ನೀನೇನು ಮಾಡಿದೆ, ನನ್ನ ಮಗನ ಕಿತ್ತುಕೊಂಡೆ. ಪುಟ್ಟ ನಿನ್ನಮ್ಮ ಯಾವಾಗಲೂ ನಿನ್ನ ಪ್ರೀತುಸತ್ತಿದ್ದಳು, ಪ್ರೀತಿಸ್ತಾನೆ ಇರುತ್ತಾಳೆ ಎಂದು ಹೇಳುವಾಗ ಮೇಲಿದ್ದ ಎಲ್ಲರೂ ಪ್ರಪಾತದ ಕಡೆ ಹೋಗದಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ, ಕಾವೇರಿ ಮಾತು ಕೇಳದೇ ಪ್ರಪಾತಕ್ಕೆ ಬಿದ್ದೇ ಬಡುತ್ತಾಳೆ. ಇದೇ ಧಾರವಾಹಿಯ ಕೊನೇ ಸನ್ನೀವೇಶವಾಗಿದೆ.

ಕಾವೇರಿ ಕಾಲಿಗೆ ಕಲ್ಲೊಂದು ತಾಗಿದೆ. ಆಗ ಅವಳು ಬೆಟ್ಟದಿಂದ ಉರುಳುರುಳಿ ಹೋಗಿದ್ದಾಳೆ. ಬಹುತೇಕ ಧಾರಾವಾಹಿಗಳ ಅಂತ್ಯದಲ್ಲಿ ವಿಲನ್​ಗಳಿಗೆ ಜ್ಞಾನೋದಯ ಮಾಡುವ ಮೂಲಕ ಧಾರಾವಾಹಿಯನ್ನು ಕೊನೇ ಮಾಡಲಾಗುತ್ತದೆ. ಆದರೆ, ಲಕ್ಷ್ಮೀ ಬಾರಮ್ಮ ಧಾರವಾಯಿಯಲ್ಲಿ ವಿಲನ್ ಸಾಯುವ ಮೂಲಕ ಧಾರಾವಾಹಿ ಕೊನೆ ಆಗುತ್ತದೆಯೇ ಎನ್ನುವ ಪ್ರಶ್ನೆ ಬಹುತೇಕರಲ್ಲಿ ಮೂಡಿದೆ. ಇನ್ನೂ ಕೆಲವರಿಗೆ ಅವರನ್ನು ಆಸ್ಪತ್ರೆಗೆ ಸೇರಿಸಿ, ಮನ ಪರಿವರ್ತನೆ ಮಾಡುವ ಸಾಧ್ಯತೆಯಿದೆ ಎಂದು ಅಂದುಕೊಂಡಿದ್ದಾರೆ. ಇದೆಲ್ಲದಕ್ಕೂ ಯತ್ತರ ನಾಳಿನ ಸಂಚಿಕೆಯಲ್ಲಿ ಸಿಗಲಿದೆ. ಒಟ್ಟಿನಲ್ಲಿ ನಿಜ ಜೀವನದಲ್ಲಿ ಇನ್ನೊಬ್ಬರನ್ನು ದ್ವೇಷಿಸುವ ಕೆಲಸವನ್ನು ಮಾಡಬೇಡಿ. ತಪ್ಪು ಮಾಡಿದರೆ, ಒಪ್ಪಿಕೊಂಡು ಕ್ಷಮೆ ಕೇಳಿ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಿ. ನೆಮ್ಮದಿಯಾಗಿರಲು ಸಾಧ್ಯ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+