Kushboo Sundar: 54 ವಯಸ್ಸಿನಲ್ಲಿ 20 ಕೆ.ಜಿ ತೂಕ ಇಳಿಸಿ, ಗ್ಲ್ಯಾಮರಸ್ ಲುಕ್ ಕೊಟ್ಟ ನಟಿ ಖುಷ್ಬೂ!
Kushboo Sundar: ಕನ್ನಡವೂ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳ ಮಿಂಚಿದ್ದ ಹಾಗೂ ತಮಿಳುನಾಡಿನ ರಾಜಕಾರಣಿ ಖುಷ್ಬೂ ಸುಂದರ್ ಈಗ ಬರೋಬ್ಬರಿ 20 ಕೆ.ಜಿ ತೂಕವನ್ನು ಇಳಿಸಿಕೊಂಡು ಮಸ್ತ್ ಆಗಿ ಕಾಣ್ತಿದ್ದಾರೆ. ಈ ವಯಸ್ಸಿನಲ್ಲಿ ಇಷ್ಟೆಲ್ಲಾ ತೂಕ ಇಳಿಸಿಕೊಳ್ಳೋಕೆ ಆಗುತ್ತೇನ್ರಿ ಇದೆಲ್ಲಾ ಇಂಜೆಕ್ಷನ್ ಮಹಿಮೆ ಅಂತ ನೆಟ್ಟಿಗನೊಬ್ಬ ಕಮೆಂಟ್ ಮಾಡಿದ್ದು. ಖುಷ್ಬೂ ಮುಟ್ಟಿನೋಡಿಕೊಳ್ಳುವಂತೆ ಕಮೆಂಟ್ ಮಾಡಿದ್ದಾರೆ. ಕನ್ನಡ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ರಣಧೀರ ಸಿನಿಮಾನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಯಾಗಿ ಮಿಂಚಿದ್ದ ಖುಷ್ಬೂ ಕನ್ನಡಿಗರಿಗೂ ಅಚ್ಚುಮೆಚ್ಚು. ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಅವರು ಸಿನಿಮಾ, ರಾಜಕೀಯ ಮತ್ತು ಪರ್ಸನಲ್ ಲೈಫ್‌ನ ಬ್ಯಾಲೆನ್ಸ್ ಮಾಡ್ತಿದ್ದಾರೆ.
ನಟಿ ಖುಷ್ಬೂ ಎಂದ ಕೂಡಲೇ ಜನರ ಮನಸ್ಸಿನಲ್ಲಿ ಬರುವುದು ರವಿಚಂದ್ರನ್ ಅವರೊಂದಿಗಿನ ಸಿನಿಮಾಗಳು. ರವಿಚಂದ್ರನ್ ಅವರೊಂದಿಗೆ ನಟಿ ಖುಷ್ಬೂ ಅವರು ಹ್ಯಾಟ್ರಿಕ್ ಸಿನಿಮಾಗಳಲ್ಲಿ ಮಿಂಚಿದ್ದರು. ಶಾಂತಿ ಕ್ರಾಂತಿ, ಅಂಜದ ಗಂಡು ಹಾಗೂ ರಣಧೀರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾಗಳಲ್ಲಿ ಖುಷ್ಬೂ ಅಭಿನಯ ಮತ್ತು ಡ್ಯಾನ್ಸ್‌ನ ಜನ ಈಗಲೂ ಇಷ್ಟಪಡುತ್ತಾರೆ. ಖುಷ್ಬೂಗೆ ಈಗ 54 ವರ್ಷ ಈ ವಯಸ್ಸಿನಲ್ಲೂ ಅವರು ಫಿಟ್ & ಗ್ಲ್ಯಾಮರ್ ಆಗಿ ಮಿಂಚುತ್ತಿದ್ದಾರೆ. ಈ ವಯಸ್ಸಿನಲ್ಲೂ ಬರೋಬ್ಬರಿ 20 ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಖುಷ್ಬೂ ಸುಂದರನ್ ಅವರು ಕಷ್ಟಪಟ್ಟು ತೂಕ ಇಳಿಸಿಕೊಂಡು ಎಲ್ಲರ ಕಡೆಯಿಂದಲೂ ವಾವ್ ಎನಿಸಿಕೊಳ್ಳುತ್ತಿರುವಾಗಲೇ ಕಿಡಿಗೇಡಿಯೊಬ್ಬ ಬಿಡ್ರಿ ಇದೆಲ್ಲಾ ಇಂಜೆಕ್ಷನ್ ಮಹಿಮೆ ಅಂತ ಕಮೆಂಟ್ ಮಾಡಿದ್ದಾನೆ. ಈ ಕಮೆಂಟ್‌ಗೆ ಖುಷ್ಬೂ ಸರಿಯಾಗಿ ಜಾಡಿಸಿದ್ದಾರೆ. ಇದೀಗ ಖಷ್ಬೂ ಜಾಡಿಸಿರುವ ಪೋಸ್ಟ್ ವೈರಲ್ ಆಗುತ್ತಿದೆ.
ಆರೋಗ್ಯದ ದೃಷ್ಟಿಯಿಂದ ಖುಷ್ಬೂ ಅವರು ತೂಕ ಇಳಿಸಿಕೊಂಡಿದ್ದಾರೆ. ವರ್ಷಗಳಿಂದಲೂ ಇದ್ದ ಕಾಲು ನೋವು, ಶಸ್ತ್ರಚಿಕಿತ್ಸೆ ಹಾಗೂ ಮೊಣಕಾಲಿನ ನೋವುಗಳನ್ನು ತಪ್ಪಿಸುವ ಉದ್ದೇಶದಿಂದ ಖುಷ್ಬೂ ಅವರು ಹಂತ ಹಂತವಾಗಿ ಈ ವಯಸ್ಸಿನಲ್ಲೂ 20 ಕೆ.ಜೆ ತೂಕ ಕಳೆದುಕೊಂಡಿದ್ದಾರೆ. ತೂಕ ಕಳೆದುಕೊಂಡು ಇನ್ನಷ್ಟು ಸುಂದರವಾಗಿ ಕಾಣಿಸುತ್ತಿರುವ ಖುಷ್ಬೂ ಅವರ ರಿಸ್ಕ್ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಇದೆಲ್ಲಾ ಇಂಜೆಕ್ಷನ್ ಎಂದವನಿಗೆ ಖುಷ್ಬೂ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಎಷ್ಟೊಂದು ಕೊಳಕು ಜನ ನೀವು ಎಂದ ಖುಷ್ಬೂ: ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳಿಗೆ ಕೆಲವರು ಕಮೆಂಟ್ ಕಿರಿಕಿರಿ ಕೊಡುವುದು ಹಾಗೂ ಬೇಕಾಬಿಟ್ಟಿ ಕಮೆಂಟ್ ಮಾಡುವುದು ಹೊಸದೇನು ಅಲ್ಲ. ಆದರೆ ಇದಕ್ಕೆ ಮಾಡುವ ಸೆಲೆಬ್ರೆಟಿಗಳ ಸಂಖ್ಯೆ ತೀರ ಕಡಿಮೆ ಆದರೆ ಖುಷ್ಬೂ ಅವರು ಈ ರೀತಿ ಕಮೆಂಟ್‌ಗಳನ್ನು ಹಿಂದೆಯೂ ಬಿಟ್ಟಿಲ್ಲ. ಸುಧಾಕರ್ ಕಂದಸ್ವಾಮಿ ಎನ್ನುವ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ (Magic of Mounjaro injection. Let your followers know that so they can get themselves injected too)ಇದೆಲ್ಲವೂ ಮೌಂಜಾರೊ ಇಂಜೆಕ್ಷನ್‌ನ ಮ್ಯಾಜಿಕ್. ನಿಮ್ಮ ಅಭಿಮಾನಿಗಳಿಳೂ ಸಹ ಇಂಜೆಕ್ಷನ್ ಮಾಡಿಕೊಳ್ಳುವುದು ಹೇಗೆ ಅಂತ ತಿಳಿಸಿ ಅಂತ ಕಮೆಂಟ್ ಮಾಡಿದ್ದಾನೆ ಇದಕ್ಕೆ ಖುಷ್ಬೂ ಅವರು ಗರಂ ಆಗಿದ್ದಾರೆ.
ಖುಷ್ಬೂ ಹೇಳಿದ್ದೇನು: ನಿಮ್ಮಂತಹ ಜನರು ಎಷ್ಟು ನೋವು ಅನುಭವಿಸುತ್ತಾರೆ ಅಂತ ವ್ಯಂಗ್ಯವಾಡಿರುವ ಅವರ, ನೀವು ಎಂದಿಗೂ ನಿಮ್ಮ ಮುಖಗಳನ್ನು ತೋರಿಸುವುದಿಲ್ಲ ಏಕೆಂದರೆ ನೀವು ಒಳಗಿನಿಂದ ಕೊಳಕು ಎಂದು ನಿಮಗೆ (What a pain people like you are. You guys never show your faces becoz you know you are ugly from within. I pity your parents.) ತಿಳಿದಿದೆ. ನನಗೆ ನಿಮ್ಮ ಹೆತ್ತವರ ಮೇಲೆ ಅಯ್ಯೋ ಎನಿಸುತ್ತದೆ ಎಂದಿದ್ದಾರೆ.












Click it and Unblock the Notifications