Bigg Boss: ಸುದೀಪ್ ಎದುರು ಪಂಚ್ ಮೇಲೆ ಪಂಚ್: ಏಟಿಗೆ ಎದುರೇಟು
ಸದ್ಯ ಬಿಗ್‌ಬಾಸ್ ಮನೆಯಲ್ಲಿ ವಾರದ ಕತೆ ಕಿಚ್ಚನ ಜೊತೆಗೆ ನಡೆಯುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಪಂಚಿಂಗ್ ಆಟ ಶುರುವಾಗಿದೆ. ಯಾವ ಸ್ಪರ್ಧಿಗೆ ಯಾರ ಮೇಲೆ ಕೋಪ ಇದಿಯೋ ಅವರಿಗೆ ಪಂಚ್ ಕೊಟ್ಟು ಕೋಪಕ್ಕೆ ಕಾರಣಗಳನ್ನು ತಿಳಿಸಬೇಕು. ಈ ಆಟ ಕಿಚ್ಚಾ ಸುದೀಪ್ ಅವರ ಮುಂದೇಯೇ ನಡೆದಿದೆ. ಮನೆಯ ಸ್ಪರ್ಧಿಗಳು ತಮಗೆ ಇಷ್ಟವಾಗದ ಸ್ಪರ್ಧಿಗಳಿಗೆ ಪಂಚ್ ಕೊಟ್ಟಿದ್ದಾರೆ. ಈ ವೀಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಕೋಪ, ಹೊಡೆದಾಟ, ಜಗಳ ನಿತ್ಯ ಕಂಡು ಬರುವ ದೃಶ್ಯಗಳಾಗಿಬಿಟ್ಟಿವೆ. ಹೀಗಾಗಿ ಇಂದು ಸುದೀಪ್ ಯಾರ ಮೇಲೆ ಯಾರಿಗೆ ಕೋಪ ಇದೆ ಎನ್ನುವುದನ್ನು ಪ್ರಶ್ನೆ ಮಾಡಿ ಪಂಚಿಂಗ್ ಆಟ ಆಡಿಸಿದ್ದಾರೆ. ಮೇಲೆ ಕಟ್ಟಿದ ಬಾಲ್‌ವೊಂದಕ್ಕೆ ತಮಗೆ ಕೋಪ ಇರುವ ಸ್ಪರ್ಧಿಗಳ ಫೋಟೋವನ್ನು ಅಂಟಿಸಿ ಕೈಗೆ ಗ್ಲೌಸ್ ಹಾಕಿಕೊಂಡು ಸ್ಪರ್ಧಿಗಳು ಪಂಚ್ ನೀಡಬೇಕು. ಜೊತೆಗೆ ಅವರ ಮೇಲಿನ ಕೋಪಕ್ಕೆ ಕಾರಣವನ್ನು ವಿವರಿಸಬೇಕು. ಈ ಆಟದಲ್ಲಿ ಬಾಲ್‌ಗೆ ಅಂಟಿಸಿದ ಫೋಟೋಕ್ಕೆ ತುಂಬಾ ಜೋರಾಗಿ ಪಂಚ್ ಕೊಡುವ ಮೂಲಕ ತಮ್ಮ ಕೋಪವನ್ನು ತೀರಿಸಿಕೊಂಡಿದ್ದಾರೆ ಸ್ಪರ್ಧಿಗಳು. ಹಾಗಾದರೆ ಯಾರ ಫೋಟೋಕ್ಕೆ ಯಾರು ಪಂಚ್ ಕೊಟ್ಟು ಯಾವ ಕಾರಣ ನೀಡಿದ್ದಾರೆ ಅನ್ನೋದನ್ನು ಈಗ ತಿಳಿಯೋಣ.

ಇಂದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಕಿಚ್ಚಾ ಸುದೀಪ್ ಮನೆಯ ಎಲ್ಲಾ ಸ್ಪರ್ಧಿಗಳಿಗೆ, ನಿಮ್ಮ ಫಸ್ಟ್ರೇಷನ್ ಹಾಗೂ ಕೋಪ ಯಾರ ಮೇಲಿದೆ ಎಂದು ಬಾಲ್‌ಗೆ ಫೋಟೋ ಹಾಕಿ ಎಷ್ಟು ಬೇಕಾದರೂ ಹೊಡೆಯಿರಿ ಎಂದು ಸೂಚನೆ ನೀಡುತ್ತಾರೆ. ಹಾಗಾದರೆ ಇದಕ್ಕೆ ಯಾರು ಯಾವ ಕಾರಣ ಕೊಡುತ್ತಾರೆ ಗೊತ್ತಾ?
ರಜತ್‌ಗೆ ಪಂಚ್ ಕೊಟ್ಟ ಹನುಮಂತ
ಬಿಗ್‌ಬಾಸ್ ಮನೆಯ ಹನುಮಂತ ಬಾಲ್‌ಗೆ ರಜತ್ ಫೋಟೋ ಅಂಟಿಸಿ 'ತುಂಬಾ ಜಾಸ್ತಿ ಮಾತಾಡುತ್ತಾರೆ' ಎಂದು ಕಾರಣ ಕೊಟ್ಟು ಪಂಚ್ ಕೊಟ್ಟಿದ್ದಾರೆ. ನಂತರ ಶಿಶಿರ್ ಅವರು ಮಂಜು ಅವರ ಫೋಟೋ ಅಂಟಿಸಿ, 'ನಿನ್ನ ಕೈಯಲ್ಲಿ ಏನೋ ಆಗಲ್ಲ ಎಂದು ನನಗೆ ಹೇಳ್ತಾರೆ' ಎಂದು ಕಾರಣ ಕೊಟ್ಟು ಪಂಚ್ ಕೊಟ್ಟಿದ್ದಾರೆ.
ಜೊತೆಗೆ ಚೈತ್ರಾ ಕುಂದಾಪುರ ಅವರು ಕೂಡ ಮಂಜು ಅವರ ಫೋಟೋ ಅಂಟಿಸಿ, 'ಇನ್ನೊಬ್ಬರನ್ನು ತುಂಬಾ ಸುಲಭವಾಗಿ ಟ್ರಿಗರ್ ಮಾಡ್ತಾರೆ' ಎಂದು ಕಾರಣ ಕೊಟ್ಟು ಪಂಚ್ ಕೊಟ್ಟಿದ್ದಾರೆ. ಅಲ್ಲದೇ ಮೋಕ್ಷಿತಾ ಕೂಡ ಮಂಜು ಅವರ ಫೋಟೋ ಅಂಟಿಸಿ, 'ಹೊರಗಡೆ ಕುಳಿತು ಇವರಿಂದಾಗಿ ಕಣ್ಣೀರು ಹಾಕಿದ್ದೇನೆ, ರಾತ್ರಿಯಿಡೀ ಅತ್ತಿದ್ದೇನೆ' ಎಂದು ಪಂಚ್ ಕೊಡುತ್ತಾರೆ.
'ಗೇಮ್‌ಗಳಲ್ಲಿ ಕಿಸಿಯಲ್ಲ ಅಡುಗೆ ಮನೆಯಲ್ಲಿ ಕಿಸಿತಾರೆ ಶಿಶಿರ್'- ಮಂಜು ಪಂಚ್
ಇನ್ನೂ ಮಂಜು ಅವರು ಶಿಶಿರ್ ಅವರ ಫೋಟೋವನ್ನು ಬಾಲ್‌ಗೆ ಅಂಟಿಸಿ, 'ಹೇಗ್ ಬೇಕೋ ಹಾಗೆ ವಿಚಾರಗಳನ್ನು ತಿರುಗಿಸುವ ಬುದ್ಧಿ ಶಿಶಿರ್‌ಗೆ ಇದೆ, ಗೇಮ್‌ಗಳಲ್ಲಿ ಕಿಸಿಯದೇ ಅಡುಗೆ ಮನೆಯಲ್ಲೇ ಕುಳಿತುಕೊಂಡು ಕಿಸಿಯುತ್ತಲೇ ಇರುತ್ತಾರೆ' ಎಂದು ಮೂರು ನಾಲ್ಕು ಬಾರಿ ಫೋಟೋವೇ ಕಳಚಿ ಕೆಳಗೆ ಬೀಳುವಂತೆ ಪಂಚ್ ಕೊಡುತ್ತಾರೆ.
ಹಾಗೇ ತ್ರಿವಿಕ್ರಮ್, ರಜತ್ ಹಾಗೂ ಧನ್‌ರಾಜ್ ಕೂಡ ಪಂಚ್ ಕೊಡುವುದು ವೀಡಿಯೋದಲ್ಲಿ ಇದೆ. ಆದರೆ ಇವರು ಯಾರಿಗೆ ಪಂಚ್ ಕೊಡುತ್ತಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಇನ್ನೂ ಐಶ್ವರ್ಯ, ಭವ್ಯಾ, ಸುರೇಶ್ ಯಾರಿಗೆ ಪಂಚ್ ಕೊಡ್ತಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಒಟ್ಟಿನಲ್ಲಿ ಮನಸಿನೊಳಗೆ ಇದ್ದ ಕೋಪ ಇಂದು ಎಲ್ಲರಿಂದಲೂ ಹೊರಬಂದಿದೆ. ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮೊಳಗಿನ ಕೋಪವನ್ನು ಹೊರ ಹಾಕುವ ಮೂಲಕ ಪೂರ್ಣ ಬಲದಿಂದ ಎರಡು ಮೂರು ಬಾರಿ ಬಾಲ್‌ಗೆ ಅಂಟಿಸಿದ ಫೋಟೋಕ್ಕೆ ಪಂಚ್ ಕೊಟ್ಟಿದ್ದಾರೆ. ಆದರೆ ಈ ವೀಡಿಯೋದಲ್ಲಿ ಮೋಕ್ಷಿತಾ, ಶಿಶಿರ್ ಹಾಗೂ ಚೈತ್ರಾ ಈ ಮೂರು ಜನ ಮಂಜು ಅವರಿಗೆ ಪಂಚ್ ಕೊಟ್ಟಿದ್ದಾರೆ. ಇಲ್ಲಿ ಮಂಜು ಅವರನ್ನು ಟಾರ್ಗೇಟ್ ಮಾಡಿದ್ದು ಸರಿನಾ? ತಪ್ಪಾ? ಇದೆಲ್ಲವೂ ಆರಂಭದಿಂದಲೂ ಬಿಗ್‌ಬಾಸ್ ನೋಡುತ್ತಾ ಬಂದಿರುವ ಪ್ರತಿಯೊಬ್ಬ ವೀಕ್ಷಕರಿಗೂ ಅರ್ಥವಾಗುತ್ತದೆ. ಹಾಗಾದರೆ ಇದಕ್ಕೆ ಸುದೀಪ್ ಏನ್ ಹೇಳ್ತಾರೆ ಅನ್ನೋದು ಇಂಟ್ರಸ್ಟ್ರಿಂಗ್ ಆಗಿದೆ. ಇಂದಿನ ಸಂಚಿಕೆಯಲ್ಲಿ ಈ ಪಂಚಿಂಗ್ ಆಟದ ಬಗ್ಗೆ ಸುದೀಪ್ ಏನು ಹೇಳಿದರು ಎನ್ನುವ ವಿಚಾರ ಗೊತ್ತಾಗಲಿದೆ.












Click it and Unblock the Notifications