Kiccha Sudeep: ಕನ್ನಡಿಗರ ಪರ SIIMAಗೆ ಬಿಸಿ ಮುಟ್ಟಿಸಿದ ನಟ ಕಿಚ್ಚ ಸುದೀಪ್!
Kiccha Sudeep: ಸೈಮಾ ಅವಾರ್ಡ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕನ್ನಡ ನಟರು ಹಾಗೂ ಕನ್ನಡ ಚಿತ್ರರಂಗದಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಸೈಮಾ ಅವಾರ್ಡ್ ವಿಚಾರದಲ್ಲಿ ಕನ್ನಡ ನಟ - ನಟಿಯರನ್ನು ಕಡೆಗಣಿಸಲಾಗಿದೆ ಎನ್ನುವ ವಿಚಾರವು ಗಂಭೀರವಾಗಿ ಚರ್ಚೆ ಆಗಿತ್ತು. ನಟ ವಿಜಯ್ ಅವರು ಈ ವಿಚಾರವನ್ನು ಸೈಮಾ ಅವಾರ್ಡ್ ವೇದಿಕೆಯಲ್ಲೇ ಬಹಿರಂಗವಾಗಿ ಟೀಕಿಸಿದ್ದರು. ಇದೀಗ ಸೈಮಾಗೆ ನಟ ಕಿಚ್ಚ ಸುದೀಪ್ ಅವರು ತಣ್ಣಗೆ ಹಾಸ್ಯಮಯವಾಗಿಯೇ ಬಿಸಿ ಮುಟ್ಟಿಸಿದ್ದಾರೆ.
ಸೋಷಿಯಲ್ ಮೀಡಿಯಾದ ಎಕ್ಸ್ ಖಾತೆಯಲ್ಲಿ ನಟ ಕಿಚ್ಚ ಸುದೀಪ್ ಮತ್ತು ನಟ ಉಪೇಂದ್ರ ಅವರ ಬಗ್ಗೆ ಸುದ್ದಿಯೊಂದನ್ನು ಹಂಚಿಕೊಳ್ಳಲಾಗಿತ್ತು. ಅಲ್ಲದೇ ಆ ಪೋಸ್ಟ್‌ನಲ್ಲಿ ಸಿಂಬು ಅವರ ಬಹುನಿರೀಕ್ಷಿತ ಅರಸನ್ ಸಿನಿಮಾದಲ್ಲಿ ವಿಲನ್ ಪಾತ್ರಗಳಲ್ಲಿ ಕಿಚ್ಚ ಸುದೀಪ್ ಹಾಗೂ ನಟ ಉಪೇಂದ್ರ ನಟಿಸಲಿದ್ದಾರೆ ಎಂದೂ ಉಲ್ಲೇಖಿಸಲಾಗಿತ್ತು. ಸೈಮಾ ಟ್ವೀಟ್ (ಎಕ್ಸ್) ಅನ್ನು ಗಮನಿಸಿದ ಕಿಚ್ಚ ಸುದೀಪ್ ಅವರು ಹಾಸ್ಯಮಯವಾಗಿಯೇ ಸೈಮಾ ಟ್ವೀಟ್‌ಗೆ ರೀಟ್ವೀಟ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ನಟ ಕಿಚ್ಚ ಸುದೀಪ್ ಅವರು ಹೇಳಿದ್ದೇನು: ಸರಿ ಸೈಮಾ.. ನಿಮ್ಮ ಪ್ರಶಸ್ತಿ ಸಂಜೆಗಳಲ್ಲಿ ನೀವು ಏನು ಮಾಡುತ್ತೀರಿ ಎನ್ನುವ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಈ ಎಲ್ಲ ಸುದ್ದಿಗಳಿಗೆ ಸಂಬಂಧಿಸಿದಂತೆ ನನ್ನ ಕಡೆಯಿಂದ ಒಂದು ಸಣ್ಣ ಸಲಹೆ ಇದೆ. ಗುಟ್ಟಾಗಿ ಹೇಳುತ್ತೇನೆ ನಿಮ್ಮ ಸುದ್ದಿ ಮೂಲಗಳನ್ನು ಬದಲಾಯಿಸಿಕೊಳ್ಳಿ. ಮುಂದಿನ ಸೈಮಾ ಅವಾರ್ಡ್ನಲ್ಲಿ 'ಅತ್ಯುತ್ತಮ ನಕಲಿ ಸುದ್ದಿ ಪ್ರಶಸ್ತಿ' ಎನ್ನುವುದು ಇದೆಯೇ ಎಂದು ತಿಳಿದುಕೊಳ್ಳುವ ಕುತೂಹಲ ನನಗಿದೆ ಎಂದು ನಟ ಕಿಚ್ಚ ಸುದೀಪ್ ಅವರು ಬರೆದುಕೊಂಡಿದ್ದಾರೆ.
ಈ ರೀತಿ ನಟ ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡುತ್ತಿದ್ದಂತೆಯೇ ಸೈಮಾ ಟ್ವೀಟ್ ಡಿಲೀಟ್ ಮಾಡಿದೆ. ಸೈಮಾ ಇದಕ್ಕೂ ಮೊದಲು ನಟ ಕಿಚ್ಚ ಸುದೀಪ್ ಮತ್ತು ನಟ ಉಪೇಂದ್ರ ಅವರ ಫೋಟೋ ಹಾಕಿ ಪೋಸ್ಟ್ ಮಾಡಿತ್ತು. ಕಿಚ್ಚ ಅವರು ಟ್ವೀಟ್ ಮಾಡುತ್ತಿದ್ದಂತೆಯೇ ಈ ಟ್ವೀಟ್ ಡಿಲೀಟ್ ಮಾಡಲಾಗಿತ್ತು.
ಸುದೀಪ್ ಅವರ ಟ್ವೀಟ್‌ಗೆ ರಿಯಾಕ್ಟ್ ಮಾಡಿರುವ ಸೈಮಾ, "ಚೀಫ್ ಈ ವಿಷಯ ಅರ್ಥವಾಯಿತು. ನಾವು ಖಂಡಿತವಾಗಿಯೂ ನಮ್ಮ ಮೂಲಗಳನ್ನು ಉನ್ನತವಾಗಿಸುತ್ತೇವೆ / ಮತ್ತಷ್ಟು ಸುಧಾರಣೆ ತರಲಿದ್ದೇವೆ". ನಮ್ಮ ರಾತ್ರಿ (Award Nights) ಪ್ರಶಸ್ತಿಗಳ ಬಗ್ಗೆ ಈ ರೀತಿಯ ಮಾತುಗಳನ್ನು ಆಡಿದ್ದಕ್ಕೆ ಧನ್ಯವಾದಗಳು. ಈ ಸಲಹೆ ನಿಮ್ಮಿಂದ ಬರುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದು ಸೈಮಾ ರೀಟ್ವೀಟ್ ಮಾಡಿದೆ.
ಸೈಮಾ ಹಾಗೂ ನಟ ಕಿಚ್ಚ ಸುದೀಪ್ ಅವರ ನಡುವೆ ಸರಣಿ ಟ್ವೀಟ್ ಮತ್ತು ರೀಟ್ವೀಟ್ ಆಗಿದೆ. ಇದಕ್ಕೆ ನಟ ಕಿಚ್ಚ ಸುದೀಪ್ ಅವರು ಸಹ ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಸೈಮಾ, ಎಲ್ಲವೂ ಒಳ್ಳೆಯ ಅನುಭವ ಎಂದು ರೀಟ್ವೀಟ್ ಮಾಡಿದ್ದಾರೆ.












Click it and Unblock the Notifications