'ಕಿಚ್ಚ ಸುದೀಪ್‌ಗೆ ಒಂದೇ ಕಾಲಿಗೆ ಮೂರು ಆಪರೇಷನ್‌'

ಬಿಗ್‌ ಬಾಸ್‌ ಕನ್ನಡ ವೀಕೆಂಡ್‌ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅನೇಕ ಬಾರಿ 'ನಾನು ನಿಂತು ಮಾತನಾಡುತ್ತಿದ್ದೇನೆ. ನನ್ನ ಕಷ್ಟ ನನಗೆ ಗೊತ್ತು. ಅರ್ಥ ಮಾಡಿಕೊಳ್ಳಿ. ನಾನು ನಿಮಗೆ ಗೌರವ ಕೊಟ್ಟು ನಿಂತು ಮಾತನಾಡುತ್ತೇನೆ. ಎರಡು ಗಂಟೆಗಳ ಕಾಲ ನಿಂತು ಮಾತನಾಡುವ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ' ಎಂದು ಅನೇಕ ಬಾರಿ ಹೇಳುವುದನ್ನು ನೀವು ಕೇಳಿರಬಹುದು. ಸುದೀಪ್‌ ಪದೇ ಪದೇ ಯಾಕೆ ಹೇಳುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇತ್ತೀಚಿಗೆ ನ್ಯೂಸ್‌ ಫಸ್ಟ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಬಿಗ್‌ ಬಾಸ್‌ ವೀಕೆಂಡ್‌ ಸಂಚಿಕೆಯಲ್ಲಿ ಕೆಲವು ಸಮಯದಲ್ಲಿ ಮಾತನಾಡುತ್ತಾ, ಮಾತನಾಡುತ್ತಾ, ಮಾತನಾಡುತ್ತಲೇ ಹೋದಾಗ ನಾನು ನಿಂತಿರುವುದರ ಬೆಲೆ ಅವರಿಗೆ ಗೊತ್ತಾಗುತ್ತಿಲ್ಲವಾ ಅನಿಸುತ್ತದೆ. ನೀವು ಬೇರೆ ಬೇರೆ ಹೇಳಿದರೆ ಪರವಾಗಿಲ್ಲ. ಹೇಳಿದ್ದೇ ಹೇಳುತ್ತಾ ಅರ್ಧ ಮುಕ್ಕಾಲು ಗಂಟೆ ಮಾತನಾಡಿದರೆ ಬೇರೆಯವರ ಬಗ್ಗೆ ಕೂಡ ಮಾತನಾಡಬೇಕಲ್ಲ. ಬೇರೆಯವರು ಇದ್ದರಲ್ಲಾ ಮಾತನಾಡೋಕೆ' ಎಂದರು.

Kiccha Sudeep Opens Up About Undergoing Three Surgeries On One Leg

'ನಿಜ ಹೇಳಬೇಕು ಎಂದರೆ ನಾನು ಕುಳಿತುಕೊಳ್ಳುವುದೇ ಇಲ್ಲ. ಇವತ್ತಿಗೂ ಕೂರಲ್ಲ. ಹತ್ತೂವರೆ ತನಕ ಶೂಟಿಂಗ್‌ ಆಗಿ ನಾನು ಹತ್ತೂವರೆ ತನಕ ನಿಂತಿದ್ದರೆ, ಮತ್ತೆ ಮನೆಗೆ ಬಂದು ಮತ್ತೆ ನಾನು ನಿಲ್ಲಬೇಕು ಅಂದರೆ ನಿಲ್ಲುತ್ತೇನೆ. ನಾನು ಕುಳಿತುಕೊಳ್ಳುವುದು ಸ್ವಲ್ಪ ಕಮ್ಮಿ. ಕುಳಿತುಕೊಳ್ಳುವುದು ತುಂಬಾ ಕಮ್ಮಿ. ಆದರೆ ನನಗೂ ಕಾಲು ನೋವು ಬರುತ್ತದೆ' ಎಂದು ಹೇಳಿದರು.

'ನನಗೆ ಒಂದು ಕಾಲಿಗೆ ಮೂರು ಆಪರೇಷನ್‌ ಆಗಿದೆ. ಸಿನಿಮಾ ಫೈಟ್‌ಗಳಲ್ಲೇ ಎಲ್ಲಾ ಆಗಿರುವುದು. ಕಾಲು ನೋವು ಸ್ವಲ್ಪ ಬಂದೇ ಬರುತ್ತದೆ. ಆದರೆ ಕೆಲಸದ ವೇಗದಲ್ಲಿ ಗೊತ್ತೇ ಆಗುವುದಿಲ್ಲ ಎಂದ ಕಿಚ್ಚ ಸುದೀಪ್‌ ಈ ಸಾರಿಯ ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಜನರನ್ನು ಸೆಳೆಯವುದರಲ್ಲಿ ಗೆದ್ದಿದೆ. ರೇಟಿಂಗ್ಸ್‌ಗಳೇ ಹೇಳುತ್ತಿದೆ. ಹತ್ತನೇ ಸೀಜನ್‌ ಅನ್ನೇ ಯಶಸ್ವಿ ಸೀಜನ್‌ ಅಂತಾ ಹೇಳುತ್ತಾರೆ. ಆದರೆ ಈ ಸೀಜನ್‌ ರೇಟಿಂಗ್ಸ್‌ ಅದಕ್ಕಿಂತಾ ಹೆಚ್ಚಿದೆ' ಎಂದು ಹೇಳಿದರು.

Kiccha Sudeep Opens Up About Undergoing Three Surgeries On One Leg

ಸುದೀಪ್‌ ಬಿಗ್‌ ಬಾಸ್‌ನಿಂದ ಹೊರಬರಲು ನಿರ್ಧರಿಸಿದ್ಯಾಕೆ?

ಇನ್ನು ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ನಿರೂಪಣೆ ಬಳಿಕ ಶೋನಿಂದ ಹೊರಬರಲು ಸುದೀಪ್‌ ಯಾಕೆ ನಿರ್ಧರಿಸಿದರು ಎನ್ನುವ ಪ್ರಶ್ನೆಗೆ ಸಹ ಸುದೀಪ್‌ ಈ ಹಿಂದೆಯೇ ಉತ್ತರಿಸಿದ್ದು, 'ಬೆಂಗಳೂರಿನಲ್ಲೇ ಇದ್ದರೆ ಒಕೆ. ಆದರೆ ಎಲ್ಲೆಲ್ಲೋ ಇದ್ದರೆ ಶೂಟಿಂಗ್‌ಗೆ ಸಮಯ ಕೊಡಲು ಆಗುತ್ತಿರಲಿಲ್ಲ. ಕಾರಣ ಏನು ಅಂದರೆ ಗುರುವಾರ ಎಲ್ಲಾ ಮುಗಿಸಿ ಶುಕ್ರವಾರ ಓಡಿಬರಬೇಕು. ಸಾವಿರ ಜನ ಸೇರಿ ಶೂಟಿಂಗ್‌ ಮಾಡುತ್ತಿರುತ್ತೇವೆ.

ನನ್ನಿಂದ ಶುಕ್ರವಾರ, ಶನಿವಾರ ಅದು ನಿಲ್ಲುತ್ತದೆ. ಸಿನಿಮಾಗಳು ಇಲ್ಲ ಅಂದಾಗ ಬೇರೆ. ಆದರೆ ಸಿನಿಮಾಗಳು ಇದ್ದಾಗ ಎಲ್ಲವೂ ವಿಳಂಬ ಆಗುತ್ತದೆ. ನಾನು ಖುಷಿಯಿಂದಲೇ ಈ ನಿರ್ಧಾರ ಮಾಡಿದ್ದೇನೆ. ಬೇರೆಯಾದರೂ ಈ ಶೋ ಮಾಡಲಿ ಅಂತಾ ಅನಿಸಿತು. ನಾವು ಹೊಸತೇನಾದರೂ ಮಾಡೋಣ' ಎಂದು ನಟ ಕಿಚ್ಚ ಸುದೀಪ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+