Kichcha Sudeep: ನನ್ನ ಹೆಸರು ನೋಡಿ ಶಾಕ್ ಆಯ್ತು: ಅಚ್ಚರಿ ಹೇಳಿಕೆ ನೀಡಿದ ನಟ ಸುದೀಪ್
ಬೆಂಗಳೂರು, ಸೆಪ್ಟೆಂಬರ್ 19: ರಾಜ್ಯದಲ್ಲಿ ಕೆಲ ವರ್ಷಗಳ ಹಿಂದೆ ಸದ್ದು ಮಾಡಿದ್ದ ಮೀಟೂ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಚಿತ್ರರಂಗದ ಹಲವು ನಟಿಯರು ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಇದೀಗ ಧ್ವನಿ ಎತ್ತಿದ್ದು, ಕಮಿಟಿ ರಚನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ನನ್ನ ಹೆಸರು ನೋಡಿ ಶಾಕ್ ಆಯ್ತು ಎಂದು ಕಿಚ್ಚ ಸುದೀಪ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮೀಟೂ ಆರೋಪಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಬೇಕು ಎಂದು ಕನ್ನಡ ಚಿತ್ರರಂಗದ 50 ಕ್ಕೂ ಹೆಚ್ಚು ಕಲಾವಿದರ ಸಹಿಯಿರುವ ಮನವಿ ಪತ್ರವನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಲಾಗಿತ್ತು. ಈ ಮನವಿ ಪತ್ರದಲ್ಲಿ ಕಿಚ್ಚ ಸುದೀಪ್ ಹೆಸರು ಕೂಡಾ ಸೇರ್ಪಡೆ ಮಾಡಲಾಗಿತ್ತು.

ಕನ್ನಡ ಚಿತ್ರರಂಗದಲ್ಲಿ ಮೀಟೂ ಆರೋಪಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಬೇಕು ಎಂದು ಅಹಿಂಸಾ ಚೇತನ್ ನೇತೃತ್ವದಲ್ಲಿ ಸಲ್ಲಿಸಲಾಗಿರುವ ಮನವಿ ಪತ್ರದಲ್ಲಿ ನನ್ನ ಹೆಸರು ಸೇರಿಸುವ ಮೊದಲು ನನಗೆ ಕೇಳಿಯೇ ಇಲ್ಲ. ನನ್ನ ಹೆಸರು ನೋಡಿ ಶಾಕ್ ಆಯ್ತು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ನನ್ನ ಹೆಸರು ಸೇರ್ಪಡೆಗೊಳಿಸುವ ಮೊದಲು ನನಗೆ ಕೇಳಿಯೇ ಇರಲಿಲ್ಲ, ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ಯಾಲಿಟಿ(ಫೈರ್) ಸಂಘಟನೆಗೂ, ನನಗೂ ಸಂಬಂಧವಿಲ್ಲ. ಆ ಸಂಘಟನೆ ಪತ್ರದಲ್ಲಿ ನನ್ನ ಹೆಸರು ಇರುವುದು ತಿಳಿದು ಶಾಕ್ ಆಯ್ತು ಎಂದು ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.
ನಟಿಯರ ಮೇಲಿನ ಲೈಂಗಿಕ ಶೋಷಣೆ ತಡೆ ಉದ್ದೇಶದಿಂದ ಮಲಯಾಳಂ ಚಿತ್ರರಂಗದ ರೀತಿ ಕನ್ನಡದ ಚಿತ್ರರಂಗದಲ್ಲಿಯೂ ಹೇಮಾ ಸಮಿತಿ ಮಾದರಿ ಸಮಿತಿ ರಚಿಸಬೇಕು ಎಂದು ಫೈರ್ ಸದಸ್ಯರ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿ ಪತ್ರದಲ್ಲಿ ಸುದೀಪ್, ರಮ್ಯಾ ಸೇರಿದಂತೆ ಅನೇಕರ ಹೆಸರುಗಳು ಇದ್ದವು.
ಈ ಬಗ್ಗೆ, ನಟಿ ಭಾವನಾ ರಾಮಣ್ಣ ಪ್ರಶ್ನೆ ಮಾಡಿದ್ದ ಹಿನ್ನಲೆಯಲ್ಲಿ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಫೈರ್ ಸಂಸ್ಥೆಯ ಪತ್ರದಲ್ಲಿ ನನ್ನ ಹೆಸರು ಇರುವುದು ನನಗೆ ಗೊತ್ತಿಲ್ಲ. ಬೇರೆ ಯಾರೋ ಈ ಬಗ್ಗೆ ಹೇಳಿದಾಗ ಶಾಕ್ ಆಯ್ತು. ನನ್ನನ್ನು ಕೇಳದೆ ನನ್ನ ಹೆಸರು ಬಳಸಿಕೊಂಡಿದ್ದಾರೆ ಎಂದು ಸುದೀಪ್ ತಿಳಿಸಿದ್ದಾರೆ.
ಇನ್ನೂ ಮನವಿ ಪತ್ರದಲ್ಲಿ ನನ್ನ ಹೆಸರು ಉಲ್ಲೇಖಿಸುವ ಮೊದಲು ನನ್ನ ಒಂದು ಮಾತು ಕೇಳಬಹುದಿತ್ತು. ಯಾರೋ ಹೇಳಿದ ಮೇಲೆ ನನಗೆ ಗೊತ್ತಾಯಿತು. ಹಾಗಂತ ಅದನ್ನು ನಾನು ಅಗೌರವಿಸಲ್ಲ. ಆದರೆ ಸಮಸ್ಯೆಗಳು ಬಗೆಹರಿಯುವುದು ಮುಖ್ಯ. ಚಿತ್ರರಂಗದಲ್ಲಿ ಅಂತಹ ಘಟನೆಗಳ ವಿರುದ್ಧ ಧ್ವನಿಯೆತ್ತುವುದು ಮುಖ್ಯ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.












Click it and Unblock the Notifications