Devil vs Mark: "ಡೆವಿಲ್‌" ದಾಖಲೆ ಉಡೀಸ್‌ ಮಾಡಿದ ಕಿಚ್ಚನ "ಮಾರ್ಕ್‌"

ಕನ್ನಡ ಸಿನಿ ಪ್ರೇಕ್ಷಕರಿಗೆ ಈ ಡಿಸೆಂಬರ್‌ ತಿಂಗಳು ನಿಜಕ್ಕೂ ಹಬ್ಬ. ಸ್ಯಾಂಡಲ್‌ವುಡ್‌ ಸ್ಟಾರ್‌ ನಟರ ಸಿನಿಮಾಗಳು ಸಾಲು ಸಾಲಾಗಿ ರಿಲೀಸ್‌ ಆಗುತ್ತಿವೆ. ನಟ ದರ್ಶನ್‌ ತೂಗುದೀಪ ನಟನೆಯ ಬಹುನಿರೀಕ್ಷಿತ ಡೆವಿಲ್‌ ಸಿನಿಮಾ ಇದೇ 11ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಮತ್ತೊಂದೆಡೆ ಕಿಚ್ಚ ಸುದೀಪ್‌ ಅಭಿನಯದ "ಮಾರ್ಕ್‌" ಸಿನಿಮಾ ಡಿಸೆಂಬರ್‌ 25ಕ್ಕೆ ರಿಲೀಸ್‌ ಆಗಲಿದೆ. ಆದರೆ ಕಿಚ್ಚ ಮಾರ್ಕ್‌, ದರ್ಶನ್‌ ಅವರ ಡೆವಿಲ್‌ ದಾಖಲೆ ಉಡೀಸ್‌ ಮಾಡಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ.

ದೋಸ್ತಿಗಳಂತಿದ್ದ ದರ್ಶನ್‌-ಸುದೀಪ್‌ ನಡುವೆ ವೈಮನಸ್ಸು ಮೂಡಿ, ಸದ್ಯ ಇಬ್ಬರೂ ಸ್ನೇಹ ಮುರಿದುಬಿದ್ದಿರುವುದು ಗೊತ್ತೇ ಇದೆ. ಮತ್ತೊಂದೆಡೆ ಸೋಷಿಯಲ್‌ ಮೀಡಿಯಾಗಳಲ್ಲಿ ಕಿಚ್ಚ ಹಾಗೂ ಡಿಬಾಸ್‌ ಅಭಿಮಾನಿಗಳ ವಾರ್‌ ಕೂಡ ಜೋರಾಗಿಯೇ ನಡೆಯುತ್ತಿದೆ. ಈ ಕಚ್ಚಾಟ ನೆನ್ನೆ ಮೊನ್ನೆಯದೇನಲ್ಲ. ಹಲವು ವರ್ಷಗಳಿಂದಲೂ ಇದಕ್ಕೆ ಬ್ರೇಕ್‌ ಬಿದ್ದೇ ಇಲ್ಲ. ಆದರೆ ಕಿಚ್ಚ ಸುದೀಪ್‌ ಅವರ "ಮಾರ್ಕ್‌" ಡಿಬಾಸ್‌ ಅಭಿಮಾನಿಗಳಿಗೆ ಬಿಗ್‌ಶಾಕ್‌ ನೀಡಿದೆ.

Kiccha Sudeep Mark Breaks Darshan Devil Trailer Record In Just One Day

ಮಾರ್ಕ್‌ ಸಿನಿಮಾ ರಿಲೀಸ್‌ಗೂ ಮೊದಲೇ ಡೆವಿಲ್‌ಗೆ ಟಕ್ಕರ್‌ ನೀಡುತ್ತಿದ್ದು, ಡಿಬಾಸ್‌ ಅಭಿಮಾನಿಗಳಲ್ಲಿ ನಡುಕ ಹುಟ್ಟಿಸಿದೆ. ಎರಡೇ ದಿನಗಳ ಅಂತರದಲ್ಲಿ ಡೆವಿಲ್‌ ಹಾಗೂ ಮಾರ್ಕ್‌ ಟ್ರೇಲರ್‌ ಬಿಡುಗಡೆಯಾಗಿದೆ. ಬಾಕ್ಸಾಫೀಸ್‌ ಸುಲ್ತಾನ ಎಂದು ಕರೆಸಿಕೊಂಡಿರುವ ದರ್ಶನ್‌ ಅವರ ಸಿನಿಮಾಗಳ ಟ್ರೇಲರ್‌, ಟೀಸರ್‌ಗಳು ಕೂಡ ಧೂಳೆಬ್ಬಿಸುತ್ತಿದ್ದವು. ಆದರೆ ಸುದೀಪ್‌ ಅವರ ಮಾರ್ಕ್‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆದ ಒಂದೇ ದಿನದಲ್ಲಿ ಮಿಂಚಿನ ಓಟ ಕಂಡಿದೆ. ಈ ಮೂಲಕ ಡೆವಿಲ್‌ ದಾಖಲೆಯನ್ನು ಉಡೀಸ್‌ ಮಾಡಿದೆ.

ಮಾರ್ಕ್‌ ಟ್ರೇಲರ್‌ ಅಬ್ಬರ

ಡೆವಿಲ್‌ ಸಿನಿಮಾದ ಟ್ರೇಲರ್‌ ಡಿಸೆಂಬರ್‌ 5ರಂದು ಬಿಡುಗಡೆಯಾಗಿತ್ತು. "ಮಾರ್ಕ್‌" ಚಿತ್ರದ ಟ್ರೇಲರ್‌ ಡಿಸೆಂಬರ್‌ 7ರಂದು ಬಿಡುಗಡೆಯಾಗಿದೆ. ಟ್ರೇಲರ್‌ ವೀಕ್ಷಣೆಯಲ್ಲಿ ಡೆವಿಲ್‌ ಟ್ರೇಲರ್‌ ದಾಖಲೆಯನ್ನು ಮಾರ್ಕ್‌ ಟ್ರೇಲರ್‌ ಒಂದೇ ದಿನದಲ್ಲಿ ಉಡೀಸ್‌ ಮಾಡಿದೆ. ಡೆವಿಲ್‌ ಟ್ರೇಲರ್‌ ಈವರೆಗೆ 11 ಮಿಲಿಯನ್‌ ವೀಕ್ಷಣೆ ಪಡೆದಿದ್ದರೆ, ಮಾರ್ಕ್‌ ಟ್ರೇಲರ್‌ 14 ಮಿಲಿಯನ್‌ ವೀಕ್ಷಣೆ ಪಡೆಯುವ ಮೂಲಕ ಮಿಂಚಿನ ವೇಗದಲ್ಲಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸುದೀಪ್‌ ಅಭಿಮಾನಿಗಳು ಇದೇ ವಿಚಾರವಾಗಿ ಹರುಷ ವ್ಯಕ್ತಪಡಿಸುತ್ತಿದ್ದಾರೆ.

ಟ್ರೇಲರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸುದೀಪ್‌, ಡೆವಿಲ್‌ ಸಿನಿಮಾ ರಿಲೀಸ್‌ ಆಗುತ್ತಿರುವುದು ಈಗ. ನಮ್ಮ ಮಾರ್ಕ್‌ ಸಿನಿಮಾ ರಿಲೀಸ್‌ ಆಗುವುದು ಮೂರು ವಾರಗಳ ನಂತರ. ಹಾಗಾಗಿ ಆ ದಿನ ರಿಲೀಸ್‌ ಆಗುತ್ತಿರುವುದು ಎರಡೇ ಸಿನಿಮಾ. ಹಾಗಾಗಿ ಅದರ ಬಗ್ಗೆ ಅಷ್ಟೇ ಮಾತನಾಡೋಣ ಎಂದಿದ್ದರು. ಇನ್ನು ನಮ್ಮ ಸಿನಿಮಾಗೆ ಥಿಯೇಟರ್‌ಗಳ ಕೊರತೆಯೇನಿಲ್ಲ, ಒಂದು ವೇಳೆ ಇದ್ದಿದ್ದರೆ ನಾವೇಕೆ ಆ ದಿನ ಸಿನಿಮಾ ರಿಲೀಸ್‌ ಮಾಡುತ್ತಿದ್ವಿ? ಎಂದಿದ್ದಾರೆ ಸುದೀಪ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+