Kiccha Sudeep: ನಟ ದರ್ಶನ್ ಬಗ್ಗೆ ಕಿಚ್ಚ ಸುದೀಪ್ ಪೋಸ್ಟ್
Kiccha Sudeep: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರ ಇಂದು (ಡಿಸೆಂಬರ್ 25) ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದೆ. ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿನ ನಾವು ಯುದ್ಧಕ್ಕೆ ಸಿದ್ಧ ಎಂಬ ಅವರ ಹೇಳಿಕೆ ಹಲವಾರು ತಿರುವು ಪಡೆದುಕೊಂಡಿತ್ತು. ಇದೀಗ ಸುದೀಪ್ ಅವರೇ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.
ಹೌದು.. ಹುಬ್ಬಳ್ಳಿಯಲ್ಲಿ ನಟ ಕಿಚ್ಚ ಸುದೀಪ್ ಅವರು ನಾವು ಯುದ್ಧಕ್ಕೆ ಸಿದ್ಧ ಎಂದು ಹೇಳಿಕೆ ನೀಡಿದ್ದರು. ಇದು ನಟ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ವಾಕ್ ಸಮರಕ್ಕೆ ಕಾರಣವಾಗಿತ್ತು. ಬಳಿಕ ಸುದೀಪ್ ಅವರು "ಪೈರಸಿ ಎಂಬ ಭೂತದ ವಿರುದ್ಧ ಯುದ್ಧಕ್ಕೆ ಸಜ್ಜಾಗಿದ್ದೇವೆ ಎಂದು ಹೇಳಿದ್ದು. ಯಾರನ್ನೂ ಟಾರ್ಗೆಟ್ ಮಾಡಲು ಹೇಳಿರುವುದಲ್ಲ," ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದ್ದರು.

ಆದರೂ, ಸಹ ನಟ ದರ್ಶನ್ ಹಾಗೂ ಸುದೀಪ್ ಅವರ ಅಭಿಮಾನಿಗಳ ನಡುವೆ ಟಾಕ್ ವಾರ್ ಮುಂದುವರೆದು ಇದು ದೊಡ್ಡ ಮಟ್ಟಕ್ಕೆ ಹೋಗಿತ್ತು. ಇದೀಗ ಸ್ವತಃ ಕಿಚ್ಚ ಸುದೀಪ್ ಅವರು ದರ್ಶನ್ ಜೊತೆಗಿನ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಟಾಕ್ ವಾರ್‌ಗೆ ಅಂತ್ಯವಾಡಿದ್ದಾರೆ. ಹಾಗಾದ್ರೆ, ಈ ಪೋಸ್ಟರ್‌ನಲ್ಲಿ ಏನಿದೆ ಎನ್ನುವ ಕುತೂಹಲ ಬಹುತೇಕ ಮಂದಿಯಲ್ಲಿರುತ್ತದೆ. ಇದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ನಾವು ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ ಅಂತ ಹೇಳಿದ್ದರು. ತಡೆಯೋಕೆ ಸಾಧ್ಯ ಆಗುವಷ್ಟು ತಡೆಯಿರಿ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹೊತ್ತಿಸಿದ್ದು, ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್ ಕಮೆಂಟ್ ವಾರ್ ಸಹ ದೊಟ್ಟ ಮಟ್ಟದಲ್ಲಿ ಶುರು ಆಗಿತ್ತು. ಈ ಮಧ್ಯೆಯೇ ಇದೀಗ ಫ್ಯಾನ್ಸ್ ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು ಉತ್ತರ ಕೊಟ್ಟು ಟಾಕ್ ವಾರ್ ಸಮರಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
Always wish him th best.🤗 https://t.co/6XhcUz5Oux
— Kichcha Sudeepa (@KicchaSudeep) December 24, 2025
ಅಭಿಮಾನಿಗಳ ಪ್ರಶ್ನೆಗೆ ತಮ್ಮ ಟ್ವೀಟ್ ಖಾತೆಯಲ್ಲಿ ಕಿಚ್ಚ ಸುದೀಪ್ ಅವರು ಉತ್ತರ ನೀಡಿದ್ದಾರೆ. ಅಭಿಮಾನಿಯೊಬ್ಬರು ದರ್ಶನ್ ಹಾಗೂ ಸುದೀಪ್ ಅವರ ಫೋಟೋವೊಂದನ್ನು ಶೇರ್ ಮಾಡಿ, ಒನ್ ವರ್ಡ್ ಅಬೌಟ್ ಹಿಮ್ ಅಂತ ಕೇಳಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಉತ್ತರ ನೀಡಿದ್ದು, ಯಾವಾಗಲು ಒಳ್ಳೆಯದನ್ನ ಬಯಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.











Click it and Unblock the Notifications