KGF Yash: ಟಗರು ಬಂತು ಟಗರು.. ಶಿವಣ್ಣನ ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಫುಲ್ ಡಾನ್ಸ್ ಗುರೂ...

ವಾರೆ ನೋಟ ನೋಡೈತೆ.. ಕಾಲು ಕೆರದು ನಿಂತೈತೆ.. ಗುಟುರು ಹಾಕಿ ಬಂದೈತೆ.. ಈ ಪದಗಳು ನಿಮ್ಮ ಕಿವಿಗೆ ಎಲ್ಲೇ ಬಿದ್ದರೂ, ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್ ನೆನಪು ಆಗೇ ಆಗುತ್ತೆ. ಯಾಕಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಬ್ಲಾಕ್ ಬಸ್ಟರ್ ಸಿನಿಮಾ 'ಟಗರು' ಚಿತ್ರದ ಸಾಂಗ್ ಗುರೂ ಇದೆ. ಈ ಹಾಡಿಗೆ ಶಿವಣ್ಣ ಸಖತ್ ಸ್ಟೆಪ್ ಹಾಕಿ ಕನ್ನಡಿಗರ ಮನಸ್ಸಿನಲ್ಲಿ ಮತ್ತೆ ಮತ್ತೆ ಪ್ರೀತಿಯ ನಾಟಿ ಮಾಡಿದ್ದರು. ಹೀಗಿದ್ದಾಗ ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರು ಶಿವಣ್ಣನ ಹಾಡಿಗೆ ಫುಲ್ ಸ್ಟೆಪ್ ಹಾಕಿ ಡಾನ್ಸ್ ಮಾಡಿದ್ದಾರೆ, ಯಶ್ ವಿಡಿಯೋ ನೋಡಲು ಮುಂದೆ ಓದಿ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ & ದುನಿಯಾ ಸೂರಿ ಕಾಂಬಿನೇಷನ್ ಸಿನಿಮಾ ಭಾರಿ ದೊಡ್ಡ ಸೌಂಡ್ ಮಾಡಿತ್ತು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ 'ಟಗರು' ಚಿತ್ರ ಎಂದೆಂದೂ ಮರೆಯಲು ಆಗದ ದಾಖಲೆ ಸೃಷ್ಟಿ ಮಾಡಿದೆ. ಅದರಲ್ಲೂ 'ಟಗರು' ಸಿನಿಮಾದ ಹಾಡುಗಳು ಇಂದಿಗೂ ಹಾಟ್ ಫೇವರಿಟ್ ಆಗಿವೆ. ಈ ಪೈಕಿ ವಾರೆ ನೋಟ ನೋಡೈತೆ... ಕಾಲು ಕೆರದು ನಿಂತೈತೆ.. ಗುಟುರು ಹಾಕಿ ಬಂದೈತೆ.. ಸಾಂಗ್ ಎಲ್ಲರಿಗೂ ಇಷ್ಟವಾಗುತ್ತದೆ.

KGF Star Yash Dancing Video Is Getting Viral And Shivarajkumar Fans Are Happy About It

ಯಶ್ ಡಾನ್ಸ್ ಸೂಪರ್ ಅಂತಿದ್ದಾರೆ ಜನ!

ಇದೇ ಹಾಡಿಗೆ ನಟ ಶಿವಣ್ಣ ಭರ್ಜರಿಯಾಗಿ ಸ್ಟೆಪ್ ಹಾಕಿ ಅಭಿಮಾನಿಗಳ ಹೃದಯ ಗೆದ್ದಿದ್ದರು. ಈಗ ಅದೇ ಹಾಡನ್ನು ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಹಾಕಿಕೊಂಡು ಡಾನ್ಸ್ ಮಾಡಿದ್ದಾರೆ. ಮತ್ತೊಮ್ಮೆ ತಾವು ಎಷ್ಟು ಅದ್ಭುತ ಡಾನ್ಸರ್? ಅನ್ನೋದನ್ನ ಯಶ್ ಅವರು ಪ್ರೂವ್ ಮಾಡಿದ್ದಾರೆ. ಯಶ್ ಅವರು ಟಗರು ಸಿನಿಮಾ ಹಾಡಿಗೆ ಡಾನ್ಸ್ ಮಾಡಿರುವ ವಿಡಿಯೋ ನೋಡಲು ಮುಂದೆ ಓದಿ.

ಶಿವಣ್ಣ ಹಾಡಿಗೆ ಯಶ್ ಡಾನ್ಸ್!

ರಾಕಿಂಗ್ ಸ್ಟಾರ್ ಯಶ್ ಅವರು ಮೂಲತಃ ಒಬ್ಬ ಡಾನ್ಸರ್ ಆಗಿದ್ದರು, ಅಲ್ಲದೆ ಅದ್ಭುತವಾಗಿ ಡಾನ್ಸ್ ಮಾಡುತ್ತಾ ಹೆಜ್ಜೆ ಹಾಕಿ ಗಮನ ಸೆಳೆದು, ಅಭಿಮಾನಿಗಳ ಹೃದಯ ಗೆದ್ದಿದ್ದರು ಸ್ಟಾರ್ ಯಶ್. ಆದರೆ ಯಾವಾಗ ಈ ನಟನ ಸಿನಿಮಾ 'ಕೆಜಿಎಫ್' ಜಗತ್ತಿನಾದ್ಯಂತ ಮೋಡಿ ಮಾಡಿತ್ತೋ ಅಲ್ಲಿಂದಲೇ ಶುರುವಾಯ್ತು ನೋಡಿ ಹೊಸ ಅಧ್ಯಾಯ. ಲವರ್ ಬಾಯ್ ಆಗಿದ್ದ ಯಶ್ ಅವರು ಡಾನ್ಸ್ ಬಿಟ್ಟು ನೇರ ಬರೀ ಆಕ್ಷನ್ ಮಾಡಲು ಶುರು ಮಾಡಿದ್ದರು.

ಹೀಗೆ ಆಕ್ಷನ್ ಹೀರೋ ಆಗಿದ್ದ ಯಶ್ ಅವರು ಇದೀಗ ತಮ್ಮ ಮಗನ ಬರ್ತ್ ಡೇ ಸ್ಪೆಷಲ್‌ಗೆ ಸಖತ್ ಸ್ಟೆಪ್ ಹಾಕಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಶಿವಣ್ಣ ಅವರ ಟಗರು ಹಾಡಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ತಾಣ ಸೇರಿದಂತೆ ಜನರ ಮೊಬೈಲ್ ಫೋನ್‌ಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+