Darshan Thoogudeepa: ಇದೇನು ಜೈಲಾ ಅಥವಾ ಮಜಾ ಮಾಡೋ ಲಾಡ್ಜಾ? ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ!

ಪರಪ್ಪನ ಅಗ್ರಹಾರ ಜೈಲು ಇವತ್ತು ಮತ್ತೊಮ್ಮೆ ಇಡೀ ದೇಶಾದ್ಯಂತ ದೊಡ್ಡ ಸೌಂಡ್ ಮಾಡಿದೆ. ದರ್ಶನ್ ತೂಗುದೀಪ್ & ಜೊತೆಗಾರರು ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಇದೀಗ ಜೈಲು ಸೇರಿದ್ದಾರೆ. ಅದರಲ್ಲೂ ಎ2 ಆರೋಪಿ ಆಗಿರುವ ನಟ ದರ್ಶನ್ ತೂಗುದೀಪ್ ಜೈಲಿನಲ್ಲಿ ಕೂತು ಸಿಗರೇಟು ಸೇದುತ್ತಾ, ಟೀ ಕುಡಿಯುತ್ತಿರುವ ಫೋಟೋ ವೈರಲ್ ಅಗಿದೆ. ಈ ಕುರಿತು ಕನ್ನಡ ನಾಡಿನ ಜನರು ಏನು ಹೇಳುತ್ತಿದ್ದಾರೆ ಗೊತ್ತಾ? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಈ ಸಮಾಜದಲ್ಲಿ ಅನ್ನೋ ಭಾರಿ ಗಂಭೀರ ಆರೋಪ ಇದೆ. ಯಾಕಂದ್ರೆ ನಮ್ಮ ಸಮಾಜದಲ್ಲಿ ಜಾತಿ & ಹಣದ ತಾರತಮ್ಯ ಈ ಸಂದರ್ಭದಲ್ಲಿ ಹೆಚ್ಚಾಗುತ್ತಿದೆ. ಹೀಗಿದ್ದಾಗ ಜೈಲಲ್ಲಿ ಕೂಡ ದುಡ್ಡು ಇದ್ದರೆ ಯಾವ ಯಾವ ರೀತಿ ಎಲ್ಲಾ ಮಜಾ ಮಾಡಬಹುದು? ಅನ್ನೋದು ಇವತ್ತು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಇದೀಗ ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಾಗಾದ್ರೆ ಈ ವಿಚಾರದಲ್ಲಿ ಪರಪ್ಪನ ಅಗ್ರಹಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ತಾರಾ ಸರ್ಕಾರ ನಡೆಸುವ ರಾಜಕಾರಣಿಗಳು? ಮುಂದೆ ಓದಿ.

Karnataka People Saying That Darshan Thoogudeepa Is Doing This

ಜೈಲಿನಲ್ಲಿ ಎಲ್ಲವೂ ಸಪ್ಲೈ ಆಗುತ್ತಾ?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗ ಪರಿಸ್ಥಿತಿ ಹೇಗಿದೆ ಅಂದ್ರೆ ಯಾವುದೇ ಅಪರಾಧಿ ಏನೇ ಕೃತ್ಯ ಎಸಗಿ ಜೈಲಿಗೆ ಹೋದರೂ, ಕೈಯಲ್ಲಿ ಕಾಸು ಇದೆ ಅಂದರೆ ಸಾಕು ಎಲ್ಲಾ ರೀತಿ ವಸ್ತು ಸಪ್ಲೈ ಆಗುತ್ತಂತೆ. ಹೀಗೆ ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡುವ ಈ ಸಮಯದಲ್ಲೇ ಫೋಟೋ ಒಂದು ಸಂಚಲನ ಸೃಷ್ಟಿಸಿದ್ದು, ಕರ್ನಾಟಕದ ಮಾನ ಹರಾಜು ಹಾಕಿ ಚರ್ಚೆಗೆ ದಾರಿ ಮಾಡಿದೆ.

ದುಡ್ಡು ಇದ್ದರೆ ಫುಲ್ ಮಜಾ?

ಹಣ ಕೊಟ್ರೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಬಾಯಿ ಬಿಡ್ತಾರಾ? ಎಂಬ ಆರೋಪವು ಕೇಳಿಬಂದಿದೆ. ಪರಪ್ಪನ ಅಗ್ರಹಾರ ಜೈಲು ವ್ಯವಸ್ಥೆ ಹಾಳಾಗಿ ಹೋಗಿದ್ದು ಜೈಲಿನ ಒಳಗಡೆ ಈಗ ಗಾಂಜಾ & ಡ್ರಗ್ಸ್ ಸಮೇತ ಎಣ್ಣೆ ಎಲ್ಲವೂ ಸಪ್ಲೈ ಆಗುತ್ತೆ ಎಂಬ ಆರೋಪ ಕೇಳಿಬರುತ್ತಿತ್ತು. ಇದೀಗ ನೋಡಿದರೆ ಜೈಲಿನ ಒಳಗಡೆಯೇ ಖೈದಿಗಳಿಗೆ ಸಿಗರೇಟು ಸಪ್ಲೈ ಮಾಡಿರುವ ಆರೋಪ ಕೂಡ ಕೇಳಿಬಂದು, ಅದಕ್ಕೆ ಸಾಕ್ಷಿಯಾಗಿ ಫೋಟೋ ಕೂಡ ವೈರಲ್ ಆಗಿದೆ.

ಇದು ಭಾರಿ ಆಕ್ರೋಶ ಭುಗಿಲೇಳುವ ರೀತಿ ಮಾಡಿದೆ. ಮತ್ತೊಂದು ಕಡೆ ಈ ಕುರಿತು ತನಿಖೆ ನಡೆಯಬೇಕು, ಹಾಗೇ ಸಿದ್ದರಾಮಯ್ಯ ಅವರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿಯೂ ಪರಿಗಣಿಸಬೇಕು. ತಪ್ಪು ಮಾಡಿರುವ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ ಕನ್ನಡ ನಾಡಿನ ಜನರು. ಹೀಗಿದ್ದಾಗಲೇ ಈ ಘಟನೆ ಕೂಡ ಮುಚ್ಚಿ ಹೋಗಲಿದೆ ಎಂಬ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+