Darshan Thoogudeepa: ದರ್ಶನ್ ತೂಗುದೀಪ್ ಬಳ್ಳಾರಿಗೆ ಶಿಫ್ಟ್ ಆಗಿದ್ದು ಹೇಗೆ? ಸಚಿವರಾದ ಜಮೀರ್ ಅಹ್ಮದ್ ಸ್ಪಷ್ಟನೆ
ದರ್ಶನ್ ತೂಗುದೀಪ್ ಅವರ ಬಗ್ಗೆ ಇದೀಗ ಸಚಿವರಾದ ಜಮೀರ್ ಅಹ್ಮದ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ದರ್ಶನ್ ತೂಗುದೀಪ್ & ಜೊತೆಗಾರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಆದರೆ ಹೀಗೆ ಜೈಲಿನಲ್ಲಿ ಇದ್ದ ಸಮಯದಲ್ಲಿ ದರ್ಶನ್ ತೂಗುದೀಪ್ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಒಟ್ಟೊಟ್ಟಿಗೆ ಕೂತು ಧಮ್ ಹೊಡೆಯುತ್ತಾ ಟೀ ಕುಡಿದಿದ್ದರು. ಈ ರೀತಿ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಚೇರ್ & ಟೇಬಲ್ ಹಾಕಿಕೊಂಡು ಸಿಗರೇಟ್ ಸೇದಿ ಟೀ ಕುಡಿದ ವಿಚಾರ ಸಂಚಲನ ಸೃಷ್ಟಿ ಮಾಡಿತ್ತು. ಅಲ್ಲದೆ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ಈ ಕುರಿತು ಸಚಿವರಾದ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.
ನಟ ದರ್ಶನ್ ತೂಗುದೀಪ್ ಹೊರಗೆ ಇದ್ದಾಗ ಹೀರೋ ಆಗಿದ್ದರು. ಆದರೆ, ಯಾವಾಗ ಕೊಲೆ ಕೇಸ್ ಅವರ ವಿರುದ್ಧ ಕೇಳಿಬಂದು, ಪರಪ್ಪನ ಅಗ್ರಹಾರ ಸೇರಿದರೋ ಆಗಲೇ ನೋಡಿ ಸಂಕಷ್ಟ ಶುರುವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನ ಒಳಗೆ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟ್ ಸೇದುತ್ತಾ, ಟೀ ಕುಡಿಯುತ್ತಿದ್ದ ಒಂದು ಫೋಟೋ ವೈರಲ್ ಆಗಿದ್ದೇ ತಡ ನಟ ದರ್ಶನ್ ಅವರು ಪರದಾಡಿಬಿಟ್ಟರು.

ಯಾಕಂದ್ರೆ, ದರ್ಶನ್ ತೂಗುದೀಪ್ ವಿರುದ್ಧ ಹಲವು ಗಂಭೀರ ಆರೋಪ ಕೇಳಿಬಂದಿತ್ತು. ಇದೇ ಸಮಯದಲ್ಲಿ ಬಳ್ಳಾರಿ ಜೈಲಿಗೆ ನಟ ದರ್ಶನ್ ತೂಗುದೀಪ್ ಶಿಫ್ಟ್ ಆಗಿದ್ರೂ ಕಾಂಟ್ರವರ್ಸಿ ಕಡಿಮೆ ಆಗಿಲ್ಲ. ಮತ್ತೊಂದು ಕಡೆ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವ್ರು ತಮ್ಮ ಬಗ್ಗೆ ಕೇಳಿಬಂದ ಗಾಳಿ ಸುದ್ದಿಗಳಿಗೆ ಇದೀಗ ಸ್ಪಷ್ಟನೆ ನೀಡಿದ್ದು, ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಹಾಗಾದ್ರೆ ನಟ ದರ್ಶನ್ ಅವರ ಬಗ್ಗೆ ಸಚಿವರಾದ ಜಮೀರ್ ಅವರು ಹೇಳಿದ್ದು ಏನು? ಮುಂದೆ ಓದಿ.
ನಟ ದರ್ಶನ್ ಬಗ್ಗೆ ಸಚಿವರ ಮಾತು...
ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಇದೀಗ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಬಳ್ಳಾರಿ ಜೈಲ್‌ಗೆ ಶಿಫ್ಟ್ ಆಗೋದಕ್ಕೂ ಮತ್ತು ನನಗೂ ಸಂಬಂಧವಿಲ್ಲ. ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆಗಿರಬಹುದು, ಆದರೆ ನಾನು ಡಿಜಿ ಅಲ್ಲ. ಹೀಗಾಗಿ ಇದಕ್ಕೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಅವರು ಇದೀಗ ಸ್ಪಷ್ಟನೆ ನೀಡಿದ್ದಾರೆ. ಹಾಗೇ ಮತ್ತೊಂದು ಕಡೆ ಜೈಲಿನಲ್ಲಿರುವ ಫೋಟೋ ಮಾಧ್ಯಮದಲ್ಲೇ ಬಂದಿದೆ, ಇದೇ ಕಾರಣಕ್ಕೆ ಬೇರೆ ಜೈಲಿಗೆ ಅವರನ್ನು ವರ್ಗಾವಣೆ ಮಾಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಪೊಲೀಸ್ ಇಲಾಖೆಯೇ ತೀರ್ಮಾನ ಮಾಡಿದೆ ಎಂದಿದ್ದಾರೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು.
ಕರ್ನಾಟಕದ ವಿವಿಧ ಜೈಲುಗಳಿಗೆ ಶಿಫ್ಟ್
ಒಟ್ನಲ್ಲಿ ತಮ್ಮ ಬಗ್ಗೆ ಕೇಳಿಬಂದ ಮಾತುಗಳಿಗೆ ಇದೀಗ ಕರ್ನಾಟಕದ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದು ಕಡೆ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದರೆ, ಅವರ ಜೊತೆ ಇದ್ದ ಬೇರೆಯವರನ್ನು ಕರ್ನಾಟಕದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿತ್ತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗು ವೇದಿಕೆ ಒದಗಿಸಿತ್ತು. ಹೀಗಿದ್ದಾಗಲೇ ಸಚಿವರಾದ ಜಮೀರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications