Kantara Kannada: ಯಶ್ ಕೆಜಿಎಫ್ ದಾಖಲೆ ಮುರಿದ ರಿಷಬ್ ಕಾಂತಾರ ಚಾಪ್ಟರ್-1?
ಕನ್ನಡ ಸಿನಿಮಾ ಇಂಡಸ್ಟ್ರಿ ಅಂದ್ರೆ ಒಂದು ಕಾಲದಲ್ಲಿ ಸಿನಿಮಾಗಳು ಓಡುವುದೇ ಇಲ್ಲ, ಕನ್ನಡದಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ ಅಂತಾ ಕೆಲವು ಹುಳಗಳು ಬಾಯಿ ಬಡಿದುಕೊಂಡು ಮಾತನಾಡುತ್ತಿದ್ದರು. ಆದರೆ ಈ ಮಾತನ್ನು ಕನ್ನಡಿಗರ ಕೆಜಿಎಫ್ ಸಿನಿಮಾ ಸುಳ್ಳು ಮಾಡಿ, ಮಂಡ್ಯ ಟು ಇಂಡಿಯಾ ಹವಾ ಎಬ್ಬಿಸಿತ್ತು. ಆ ನಂತರ 2022 ಕೊನೆಯಲ್ಲಿ ರಿಲೀಸ್ ಆಗಿದ್ದ ಕಾಂತಾರ ಸಿನಿಮಾ ಮತ್ತೆ ಕನ್ನಡ ಸಿನಿಮಾ ರಂಗದ ಶಕ್ತಿ ಪ್ರದರ್ಶನ ಮಾಡಿತ್ತು. ಈಗ ಅದೇ ಕಾಂತಾರ ಸಿನಿಮಾದ ಮತ್ತೊಂದು ಭಾಗ ಬಾಕ್ಸ್ ಆಫಿಸ್ ಪುಡಿ ಪುಡಿ ಮಾಡಿದೆ!
ಹೌದು, ರಿಷಬ್ ಶೆಟ್ಟಿ ಅವರು ಏನೇ ಮಾಡಿದ್ರೂ ವಿಶಿಷ್ಟವಾಗಿ ಮಾಡ್ತಾರೆ. ಹೀಗಾಗಿ ಅವರ ಸಕ್ಸಸ್ ರೇಟ್ ತುಂಬಾ ಜಾಸ್ತಿ ಇದೆ. ಪ್ರತಿ ಹೆಜ್ಜೆಯಲ್ಲೂ ಅವರು ಅದ್ಭುತವಾದ ಆಯ್ಕೆ ಎದುರು ನೋಡ್ತಾರೆ, ಇಂತಿಪ್ಪ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಮಿಂಚಿನ ಸಂಚಲನ ಸೃಷ್ಟಿ ಮಾಡಿದ್ದಾರೆ. ಅಂದಹಾಗೆ 2022 ರಲ್ಲಿ ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ಅಭಿನಯಿಸಿ & ನಿರ್ದೇಶನ ಮಾಡಿದ್ದ ಕಾಂತಾರ ಸಿನಿಮಾ ಭಾರಿ ದೊಡ್ಡ ಸಕ್ಸಸ್ ಕಂಡಿತ್ತು. ಈ ಸಿನಿಮಾ ಮೂಲಕ ರಿಷಬ್ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಅಬ್ಬರಿಸುತ್ತಿದ್ದಾರೆ. ಈಗ ಕಾಂತಾರ ಸಿನಿಮಾದ ಮತ್ತೊಂದು ಭಾಗ ಕೂಡ ಪ್ರಪಂಚದ ಮೂಲೆ ಮೂಲೆಗೆ ಹಬ್ಬಿದೆ. ಹಾಗಾದ್ರೆ, ಯಶ್ ಕೆಜಿಎಫ್ ದಾಖಲೆ ಮುರಿದ ರಿಷಬ್ ಕಾಂತಾರ ಚಾಪ್ಟರ್-1?

ಕೆಜಿಎಫ್ ದಾಖಲೆ ಮುರಿದ ಕಾಂತಾರ?
ಅಂದಹಾಗೆ ಮೊದಲ ದಿನವೇ ಬಾಕ್ಸ್ ಆಫಿಸ್ ಅಖಾಡದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿರುವ ಕನ್ನಡ ಸಿನಿಮಾ ರಂಗದ ಕಾಂತಾರ, ಬೇರೆ ಬೇರೆ ಭಾಷೆಯ ಸಿನಿಮಾಗಳು ಅಲ್ಲಾಡಿ ಹೋಗುವಂತೆ ಮಾಡಿದೆ. ಅಲ್ಲದೆ ಕಾಂತಾರ ಸಿನಿಮಾ ಅಬ್ಬರ ಕಂಡು ಸ್ವತಃ ಕನ್ನಡ ಪ್ರೇಕ್ಷಕರೇ ಆಶ್ಚರ್ಯಗೊಂಡಿದ್ದಾರೆ. ಇದೇ ಸಮಯದಲ್ಲಿ ಯಶ್ ಕೆಜಿಎಫ್ & ರಿಷಬ್ ಕಾಂತಾರ ನಡುವೆ ರೇಸ್ ಶುರುವಾಯ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಆದರೆ ಸಂಪೂರ್ಣವಾಗಿ ಕೆಜಿಎಫ್ ದಾಖಲೆ ಮುರಿಯಲು ಕಾಂತಾರ ಸಿನಿಮಾಗೆ ಇನ್ನೂ ಹೆಚ್ಚಿನ ಸಮಯ ಬೇಕು ಎನ್ನುತ್ತಾರೆ ತಜ್ಞರು.
ಹೌದು, ಕಾಂತಾರ 2ನೇ ಭಾಗ ಈಗ 3 ವರ್ಷಗಳ ನಂತರ ಮತ್ತೆ ಬಂದಿದೆ. ಕಾಂತಾರ ಹೊಸ ಭಾಗದಲ್ಲಿ ವಿಸ್ಮಯಗಳ ರಾಶಿ ಶತಕೋಟಿ ಭಾರತೀಯರ ಎದುರು ಇಟ್ಟಿದ್ದಾರೆ ರಿಷಬ್ ಶೆಟ್ಟರು. ಹೀಗೆಲ್ಲಾ ಕಾಂತಾರ ಎಂಬ ಅದ್ಭುತ ಸಿನಿಮಾ ನೋಡಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಆನಂದವಾಗಿದೆ. ಈ ಸಿನಿಮಾ ನೋಡಲು ಥಿಯೇಟರ್ ಎದುರು ಮುಗಿಬೀಳುವ ಪರಿಸ್ಥಿತಿ ಕೂಡ ಇದೆ. ಮೊದಲ ಭಾಗದಲ್ಲೇ ಸುಮಾರು 400 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಬಾಚಿಕೊಂಡು ಸಂಚಲನ ಸೃಷ್ಟಿ ಮಾಡಿದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗ ಮತ್ತೊಂದು ವಿಶ್ವದಾಖಲೆ ಬರೆಯುತ್ತಿದೆ...












Click it and Unblock the Notifications