ಕಾಂತಾರ ಚಾಪ್ಟರ್ 01: ರಕ್ಷಿತ್ ಶೆಟ್ಟಿ ಸೇರಿ ಭಾರತದ ಟಾಪ್ ನಟರ ರಿಯಾಕ್ಷನ್ ಇಲ್ಲಿದೆ!
ಕಾಂತಾರ ಚಾಪ್ಟರ್ 01 ಟ್ರೈಲರ್ ಇಂದು ಸೋಮವಾರ (ಸೆಪ್ಟೆಂಬರ್ 22ರಂದು) ಬಿಡುಗಡೆಯಾಗಿದ್ದು ದೇಶದಾದ್ಯಂತ ಭಾರೀ ಸಂಚಲನ ಸೃಷ್ಟಿ ಮಾಡಿದೆ. ರಿಷಬ್ ಶೆಟ್ಟಿ ಅವರ ಅಭಿನಯ ಹಾಗೂ ಟ್ರೈಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಭಾರತೀಯ ಸಿನಿಮಾರಂಗದ ಹಲವು ಗಣ್ಯರು ಶುಭಕೋರಿದ್ದಾರೆ.
ನಟ ರಿಷಬ್ ಶೆಟ್ಟಿ ಅವರಿಗೆ ಹಲವು ಗಣ್ಯರು ಹಾಗೂ ದೇಶದ ವಿವಿಧ ಚಿತ್ರರಂಗದ ನಟರು ಶುಭಕೋರಿದ್ದಾರೆ. ಕಾಂತಾರ ಚಾಪ್ಟರ್ 01 ಪ್ಯಾನ್ ಇಂಡಿಯಾ ಮೂವಿ ಆಗಿರುವುದರಿಂದ ದೇಶದಾದ್ಯಂರ ಈ ಸಿನಿಮಾದ ಟ್ರೈಲರ್ ಸುದ್ದಿ ಮಾಡುತ್ತಿದೆ. ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಅವರು, ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಇದರಲ್ಲಿ ಕೆಲವು ಕಥೆಗಳನ್ನು ಹೇಳುವುದಷ್ಟೇ ಅಲ್ಲ, ಬದುಕುವುದೂ ಇದೆ. ಕೆಲವು ಕಥೆಗಳನ್ನು ಹೇಳುವುದಷ್ಟೇ ಅಲ್ಲ, ಅನುಭವಿಸುವುದೂ ಇದೆ. #ಕಾಂತಾರ ಅಧ್ಯಾಯ 1 ರ ಹಿಂದಿ ಟ್ರೇಲರ್ ಅನ್ನು ಅನಾವರಣಗೊಳಿಸಲು ಹೆಮ್ಮೆಪಡುತ್ತೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಇದಕ್ಕೆ ರಿಯಾಕ್ಟ್ ಮಾಡಿರುವ ರಿಷಬ್ ಶೆಟ್ಟಿ ಅವರು Thank you for all the Support Sir 😍 ನಿಮ್ಮ ಎಲ್ಲಾ ಸಹಕಾರಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಇನ್ನು ತಮಿಳುನಟ ಶಿವ ಕಾರ್ತಿಕೇಯನ್ ಅವರು ಸಹ ಕಾಂತಾರ ಚಾಪ್ಟರ್ 01 ಸಿನಿಮಾದ ತಮಿಳು ಟ್ರೈಲರ್ ಬಿಡುಗಡೆ ಮಾಡುವುದಕ್ಕೆ ಅತ್ಯಂತ ಉತ್ಸುಕನಾಗಿದ್ದೇನೆ. ಈ ಸಿನಿಮಾ ಭಾರೀ ಯಶಸ್ಸು ಗಳಿಸಲಿ ಎಂದು ಶುಭಕೋರಿದ್ದಾರೆ.
ಇನ್ನು ಮಲಯಾಳಂ ನಟ ಪೃಥ್ವಿರಾಜ್ ಅವರು, ಕೆಲವು ಕಥೆಗಳು ಹಾಗೆ ಇರುತ್ತವೆ, ಎಷ್ಟೇ ಸಮಯ ಕಳೆದರೂ ಅವು ಪ್ರತಿಧ್ವನಿಸುತ್ತವೆ. ಸಿನಿಮಾಗೆ ಅದರದ್ದೇ ಆದ ಶಕ್ತಿ ಇದೆ. ಪುರಾಣ, ಸಂಸ್ಕೃತಿ ಮತ್ತು ನೈಜ ಕಥೆಯ ಶಕ್ತಿಯನ್ನು ಒಳಗೊಂಡಿರುವ #ಕಾಂತಾರ ಅಧ್ಯಾಯ 1 ರ ಮಲಯಾಳಂ ಟ್ರೇಲರ್ ಅನ್ನು ಪ್ರಸ್ತುತಪಡಿಸಲು ಸಂತೋಷವಾಗುತ್ತಿದೆ ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
Thank you maga 😍 https://t.co/lOSR7gAf3o
— Rishab Shetty (@shetty_rishab) September 22, 2025
ರಕ್ಷಿತ್ ಶೆಟ್ಟಿ ಅವರು ಸಹ ಟ್ರೈಲರ್‌ಗೆ ರಿಯಾಕ್ಟ್ ಮಾಡಿದ್ದಾರೆ. ಅದ್ಭುತ! ಕಥೆಯ ಶ್ರೀಮಂತಿಕೆಯಿಂದ ಕೂಡಿದ್ದು ನಿಜಕ್ಕೂ ಅದ್ಭುತವಾಗಿದೆ. ದೃಶ್ಯಗಳು ಆಕರ್ಷಕವಾಗಿವೆ ☺️ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ನಟ ರಿಷಬ್ ಶೆಟ್ಟಿ ಅವರು, Thank you maga 😍 ಎಂದು ರಿಪ್ಲೈ ಮಾಡಿದ್ದಾರೆ. ಒಟ್ಟಾರೆ ಕಾಂತಾರ ಚಾಪ್ಟರ್ 01ರ ಟ್ರೈಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.












Click it and Unblock the Notifications