‘ಟೆಲಿವಿಷನ್ ಪ್ರೀಮಿಯರ್ ಲೀಗ್-3’ ಲೋಗೋ ಲಾಂಚ್: ಕಿರುತೆರೆ ನಟರ ಕ್ರಿಕೆಟ್ ಫೈಟ್ ಯಾವಾಗ ಶುರು?
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಡೆಯುವ ಸಮಯದಲ್ಲೇ ಕಿರುತೆರೆ ಪ್ರೇಮಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಕ್ರಿಕೆಟ್‌ಗೂ & ಬಣ್ಣದ ಲೋಕಕ್ಕೂ ಗಟ್ಟಿಯಾದ ಬಾಂಧವ್ಯ ಇದ್ದು ಪದೇ ಪದೆ ಪ್ರೂವ್ ಆಗ್ತಾ ಇರುತ್ತೆ. ಅದ್ರಲ್ಲೂ ಕನ್ನಡ ಸಿನಿಮಾ ಸ್ಟಾರ್ಸ್ ಬ್ಯಾಟ್ ಹಿಡಿದು ಮೈದಾನದಲ್ಲಿ ಅಬ್ಬರಿಸುವುದನ್ನ ನಾವು ನೋಡಿರುತ್ತೇವೆ, ಅದೇ ರೀತಿ ಕನ್ನಡದ ಕಿರುತೆರೆ ನಟ & ನಟಿಯರು ಕೂಡ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.
ಹೌದು, ಟೆಲಿವಿಷನ್ ಪ್ರೀಮಿಯರ್ ಲೀಗ್ ಈಗಾಗಲೇ ಯಶಸ್ವಿಯಾಗಿ 2 ಸೀಸನ್ ಮುಗಿಸಿದೆ. ಈ ನಡುವೆ 3ನೇ ಸೀಸನ್ ಜನವರಿ ತಿಂಗಳಲ್ಲಿ ಶುರುವಾಗಲಿದೆ. ಅದಕ್ಕೂ ಮುನ್ನ ಬೆಂಗಳೂರಿನಲ್ಲಿ ಟಿಪಿಎಲ್ ಸೀಸನ್-3 ಟೀಂ ಲೋಗೋ ರಿಲೀಸ್ ಮಾಡಲಾಯಿತು. ಒಟ್ಟಾರೆ 23 ಪಂದ್ಯ ಈಗಿನ ಸೀಸನ್‌ನಲ್ಲಿ ನಡೆಯಲಿದೆ. ಹುಬ್ಬಳ್ಳಿಯಲ್ಲಿ ಈ ಬಾರಿ ಟೂರ್ನಿ ಆಯೋಜನೆ ಆಗಿದೆ. ಜನವರಿ 24 ರಿಂದ 28 ರವೆಗೆ ನಡೆಯಲಿದೆ. ಹಾಗಾದರೆ ಯಾವ ಯಾವ ತಂಡಗಳು ಕಿರುತೆರೆ ಕ್ರಿಕೆಟ್ ಅಖಾಡದಲ್ಲಿ ಅಬ್ಬರಿಸಲಿವೆ? ಹೇಗಿರಲಿದೆ ಟೂರ್ನಿ? ಮುಂದೆ ಓದಿ.

10 ಟೀಂ, 150 ಆಟಗಾರರು!
ಅಷ್ಟಕ್ಕು ಒಟ್ಟಾರೆ 10 ತಂಡಗಳು ಟೆಲಿವಿಷನ್ ಪ್ರೀಮಿಯರ್ ಲೀಗ್‌ನ 3ನೇ ಸೀಸನ್‌ನಲ್ಲಿ ಭಾಗಿ ಆಗಲಿವೆ. 150 ಆಟಗಾರರು ಭಾಗಿಯಾಗಲಿದ್ದು, 1 ಟೀಂನಲ್ಲಿ 15 ಆಟಗಾರರಿಗೆ ಅವಕಾಶವು ಇರಲಿದೆ. ಹಾಗೇ ಒಂದು ಗ್ರೂಪ್‌ಗೆ 4 ಲೀಗ್ ಮ್ಯಾಚ್ ಇರುತ್ತದೆ. ಲೀಗ್ ಮ್ಯಾಚ್ ಬಳಿಕ ಸೆಮಿ ಫೈನಲ್ ಹಾಗೂ ಫೈನಲ್ ಮ್ಯಾಚ್‌ಗಳು ನಡೆಯಲಿದೆ. ಈ ಮೂಲಕ, ಒಟ್ಟಾರೆ 23 ಪಂದ್ಯ ನಡೆಯಲಿದ್ದು. ಹುಬ್ಬಳ್ಳಿಯಲ್ಲಿ ಈ ಬಾರಿಯ ಕ್ರಿಕೆಟ್ ಮ್ಯಾಚ್‌ಗಳು ನಡೆಯಲಿವೆ. ಜನವರಿ 24 ರಿಂದ 28ರವೆಗೆ ಟೂರ್ನಿ ಆಯೋಜನೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ.
ಯಾವೆಲ್ಲಾ ತಂಡಗಳು ಭಾಗವಹಿಸಲಿವೆ?
'ಟೆಲಿವಿಷನ್ ಪ್ರೀಮಿಯರ್ ಲೀಗ್' ಸೀಸನ್ 3ರಲ್ಲಿ ಅಶ್ವಸೂರ್ಯ ರೈಡರ್ಸ್ & ಗೋಲ್ಡನ್ ಈಗಲ್, ಕೆಕೆಆರ್ ಮೀಡಿಯಾ ಹೌಸ್, ಖುಷಿ 11, ಎವಿಆರ್ ಟಸ್ಕರ್ಸ್, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಕ್ವಾಡ್, Insane Cricket team ಹಾಗೂ ಜಿಎಲ್‌ಆರ್ ವಾರಿಯರ್ಸ್ ಸೇರಿದಂತೆ 10 ತಂಡಗಳು ಭಾಗಿಯಾಗಲಿವೆ ಅಂತಾ ಮಾಹಿತಿ ನೀಡಲಾಗಿದೆ.
ಒಟ್ಟು 102 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಮತ್ತು 10 ತಂಡಗಳಿಗೆ ಅಂಬಾಸಿಡರ್ ಹಾಗೂ ಓನರ್ ಇದ್ದಾರೆ. ಇನ್ನು ಈ ಬಾರಿ ಪಂದ್ಯಾವಳಿ ಮತ್ತೊಂದು ವಿಶೇಷ ಏನು ಅಂದ್ರೆ 'ಎನ್ 1' ಕ್ರಿಕೆಟ್ ಅಕಾಡೆಮಿಯ ವತಿಯಿಂದ, ಮ್ಯಾನ್ ಆಫ್ ದಿ ಸೀರಿಸ್ ಪಟ್ಟ ಪಡೆದವರಿಗೆ ಕಾರು ಹಾಗೇ ಆರೆಂಜ್ ಕ್ಯಾಪ್ ಹೋಲ್ಡರ್ (batsman) ಮತ್ತೆ ಪರ್ಪಲ್ ಕ್ಯಾಪ್ ಹೋಲ್ಡರ್ (bowler) ಪಡೆದವರಿಗೆ ಬೈಕ್ ಉಡುಗೊರೆಯಾಗಿ ನೀಡಲಾಗುತ್ತದೆ.

ಒಟ್ನಲ್ಲಿ ಈ ಮೂಲಕ ಸಿನಿಮಾ ಸ್ಟಾರ್ಸ್ ರೀತಿ, ಕಿರುತೆರೆ ನಟರು ಕೂಡ ಈಗ ಮತ್ತೊಮ್ಮೆ ಕ್ರಿಕೆಟ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಬೇಕಾದ ತಯಾರಿಗಳು ಕೂಡ ಅಬ್ಬರದಿಂದ ಸಾಗಿವೆ. ಹಾಗೇ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡುತ್ತಿರುವ ಸ್ಥಳ ಕೂಡ, ಆಟಗಾರರಿಗೆ ಸಖತ್ ಸಪೋರ್ಟ್ ಮಾಡುವ ನಿರೀಕ್ಷೆ ಕೂಡ ಇದೆ. ಉತ್ತಮವಾಗಿ ಪ್ರದರ್ಶನ ನೀಡುವ ಆಟಗಾರರಿಗೆ ಬಹುಮಾನ ಕೂಡ ಘೋಷಿಸಲಾಗಿದೆ. ಇದೇ ಕಾರಣಕ್ಕೆ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3 ಸಾಕಷ್ಟು ಗಮನ ಸೆಳೆದಿದೆ. ಕಿರುತೆರೆ ಅಭಿಮಾನಿ ಬಳಗಕ್ಕೂ ಈ ಮೂಲಕ ಅಬ್ಬರದ ಮನರಂಜನೆ ಸಿಗುವುದು ಫಿಕ್ಸ್ ಆಗಿದೆ. ಈಗಾಗಲೇ ಸೆಲೆಬ್ರಿಟಿಗಳೂ ಈ ಕ್ರಿಕೆಟ್ ಟೂರ್ನಿಗೆ ಸಾಥ್ ಕೊಟ್ಟಿರುವುದು ಮತ್ತೊಂದು ಸ್ಪೆಷಲ್.












Click it and Unblock the Notifications