ಶಿವರಾಜ್‌ಕುಮಾರ್ ತಮಿಳು ಸಿನಿಮಾ ಅಬ್ಬರ ಶುರು ಮತ್ತೊಂದು ದಾಖಲೆ ಸೃಷ್ಟಿ
ಕನ್ನಡ ಸಿನಿಮಾ ರಂಗ ಈಗ ಜಗತ್ತಿನಾದ್ಯಂತ ತನ್ನದೇ ಶಕ್ತಿ ಪ್ರದರ್ಶನ ಮಾಡುತ್ತಿದೆ. ಹೀಗೆ, ಕನ್ನಡ ಸಿನಿಮಾ ರಂಗದ ನಟರಿಗೆ ಬೇರೆ ಬೇರೆ ಭಾಷೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ನಟ ಶಿವರಾಜ್‌ಕುಮಾರ್ ಅವರಿಗೆ ತಮಿಳು ಸಿನಿಮಾ ರಂಗದಲ್ಲಿ ದೊಡ್ಡ ಗೌರವ ಹಾಗೂ ಬೇಡಿಕೆ ಸೃಷ್ಟಿಯಾಗಿದೆ. ಅದ್ರಲ್ಲೂ ರಜನಿಕಾಂತ್ ಅವರ 'ಜೈಲರ್' ಸಿನಿಮಾ ರಿಲೀಸ್ ಆದ ನಂತರ ಹೊಸ ಸಂಚಲನ ಸೃಷ್ಟಿಯಾಗಿದೆ.
ಹೌದು ಕೆಲವೇ ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ ರಜನಿಕಾಂತ್ ಅವರ 'ಜೈಲರ್' ಸಿನಿಮಾಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಈ ಸಿನಿಮಾದಿಂದ ನಟ ಶಿವರಾಜ್‌ಕುಮಾರ್ ಅವರು ತಮಿಳು ಸಿನಿಮಾ ರಂಗಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಹೀಗೆ ರಜನಿಕಾಂತ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಶಿವಣ್ಣ ಅವರು ಇದೀಗ ಅವರ ಅಳಿಯನಿಗೆ ಕೂಡ ಸಾಥ್ ಕೊಡುತ್ತಿದ್ದಾರೆ. ಅಂದ್ರೆ ರಜನಿಕಾಂತ್ ಅವರ ಅಳಿಯ ಧನುಷ್ ಅವರ ಜತೆಗೆ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾ ಸಾಂಗ್ ಇದೀಗ ರಿಲೀಸ್ ಆಗಿದೆ.
'ಈರಪ್ಪನು' ಹಾಡಿಗೆ ಪ್ರೇಕ್ಷಕ ಫಿದಾ!
ಅಂದಹಾಗೆ ಮೊದಲೇ ಹೇಳಿದಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಇತ್ತೀಚೆಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್‌ರ ಸಿನಿಮಾದಲ್ಲಿ ನಟಿಸಿದ್ದರು. 'ಜೈಲರ್' ಸಿನಿಮಾದಲ್ಲಿ, ನಟ ಶಿವಣ್ಣ ಮಿಂಚು ಹರಿಸಿದ್ದರು. ಮಾವನ ನಂತರ, ಅಳಿಯನ ಸಿನಿಮಾದಲ್ಲೂ ಮಿಂಚಲು ನಟ ಶಿವಣ್ಣ ಸಿದ್ಧವಾಗಿ ನಿಂತಿದ್ದಾರೆ. ಶಿವಣ್ಣ, ತಮಿಳು ನಟ ಧನುಷ್ ಕಾಂಬಿನೇಷನ್‌ನ 'ಕ್ಯಾಪ್ಟನ್ ಮಿಲ್ಲರ್' ಹಾಡು 'ಈರಪ್ಪನು' ಈಗ ರಿಲೀಸ್ ಆಗಿ ಸೌಂಡ್ ಶುರು ಮಾಡಿದೆ.

ಪೊಂಗಲ್‌ಗೆ ಬರಲಿದೆ 'ಕ್ಯಾಪ್ಟನ್ ಮಿಲ್ಲರ್'
ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದ್ದು ಸಂಕ್ರಾಂತಿ ಹಬ್ಬದ ಸ್ಪೆಷಲ್ ಆಗಿ ಧನುಷ್ & ಶಿವಣ್ಣ ಸಿನಿಮಾ ತೆರೆಗೆ ಬರಲಿದೆ. 2024 ಜನವರಿ 12 ರಂದು 'ಕ್ಯಾಪ್ಟನ್ ಮಿಲ್ಲರ್' ಜಗತ್ತಿನ ವಿವಿಧೆಡೆ ತೆರೆ ಕಾಣಲಿದ್ದು ಈ ಸಿನಿಮಾವನ್ನ ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ನಟ ಧನುಷ್ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದರೆ, ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಅಂತಾ ಹೇಳಲಾಗಿದೆ. ಹೀಗಾಗಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ.
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಸಾಲು ಸಾಲು ಹಿಟ್ ಸಿನಿಮಾಗಳನ್ನ ಕನ್ನಡಿಗರ ಎದುರು ಇಡುತ್ತಿದ್ದಾರೆ. ಇದೇ ರೀತಿ ಇತ್ತೀಚೆಗೆ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದರು, ಶಿವರಾಜ್ ಕುಮಾರ್. ಘೋಸ್ಟ್ ಈಗಾಗಲೇ ರಾಜ್ಯದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ರಿಲೀಸ್ ಆಗಿದ್ದು ಅಬ್ಬರಿಸಿದೆ. ಹೀಗಿದ್ದಾಗ 'ಭೈರತಿ ರಣಗಲ್' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದು, 2024 ರ ಆರಂಭದಲ್ಲೇ ಸಿಹಿಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ 'ಕ್ಯಾಪ್ಟನ್ ಮಿಲ್ಲರ್' ಕೂಡ ಎಂಟ್ರಿ ಕೊಡುತ್ತಿದೆ.











Click it and Unblock the Notifications