Darshan Thoogudeepa: ದರ್ಶನ್ ತೂಗುದೀಪ್ ಸಿನಿಮಾ ಜೀವನ ಮುಕ್ತಾಯ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ ದರ್ಶನ್‌ಗೆ ಈಗ ಭಾರಿ ಕಂಟಕ ಬಂದಿದೆ. ದರ್ಶನ್ ತೂಗುದೀಪ್ ವಿರುದ್ಧ ಕೋರ್ಟ್‌ಗೆ ಇದೀಗ ಚಾರ್ಜ್ ಶೀಟ್ ಸಲ್ಲಿಕೆ ಆಗ್ತಿದ್ದು, ನಟ ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಕಥೆ ಮುಗಿಸಿದ ಬಗ್ಗೆ ಈಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇಷ್ಟು ಮಾತ್ರವಲ್ಲ, ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿರುವ ನಟ ದರ್ಶನ್ ತೂಗುದೀಪ್ ಸಿನಿಮಾ ಜೀವನ ಮುಗಿದು ಹೋದಂತೆ ಅಂತಾ...
ದರ್ಶನ್ ತೂಗುದೀಪ್ ನೆಮ್ಮದಿಯಾಗಿ ಇದ್ದ ಜೀವನ ಹಾಳು ಮಾಡಿಕೊಂಡು ಇದೀಗ ಜೈಲಿನ ನರಕಕ್ಕೆ ಬಿದ್ದಂತೆ ಆಗಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಕಂಬಿ ಎಣಿಸುತ್ತಿರುವ ಈ ನಟನಿಗೆ ಸಾಲು ಸಾಲು ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ಒಂದೊಂದು ಸಿನಿಮಾಗೆ ಕೂಡ ಕೋಟಿ ಕೋಟಿ ರೂಪಾಯಿ ಪಡೆಯುತ್ತಿದ್ದರು ಎಂಬ ಮಾತು ಕೂಡ ಇತ್ತು. ಇಂತಹ ಡಿ-ಬಾಸ್ ಈಗ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ನರಳಾಡುತ್ತಿದ್ದು, ದರ್ಶನ್ ಅವರ ಸಿನಿಮಾಗಳು ನಿಂತು ಹೋಗಲಿವೆ ಎಂಬ ಸುದ್ದಿ ಇದೀಗ ಸಂಚಲನ ಸೃಷ್ಟಿ ಮಾಡಿದೆ.

ದರ್ಶನ್ ಸಿನಿಮಾ ಭವಿಷ್ಯ ಮುಕ್ತಾಯ?
ಅಂದಹಾಗೆ ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಆವರಣ ರೆಸಾರ್ಟ್ ಮಾಡಿಕೊಂಡು ಎಣ್ಣೆ, ಸಿಗರೇಟ್, ಬಿಯರ್, ಬಿರಿಯಾನಿ ಅಂತಾ ಮಜಾ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಫೋಟೋಗಳು ಸೇರಿದಂತೆ, ದರ್ಶನ್ ತೂಗುದೀಪ್ ಜೈಲಿನಲ್ಲಿ ಕೂತು ವಿಡಿಯೋ ಕಾಲ್ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು ತಕ್ಷಣ ಸಿದ್ದರಾಮಯ್ಯ ಅವರ ಸರ್ಕಾರ ದರ್ಶನ್ & ಗ್ಯಾಂಗ್‌ನ ಶಿಫ್ಟ್ ಮಾಡಿತ್ತು. ಹೀಗಿದ್ದಾಗ ನಟ ದರ್ಶನ್ ತೂಗುದೀಪ್ ಅವರ 'ಡೆವಿಲ್' ಸಿನಿಮಾ ಸೇರಿದಂತೆ ಬಹುತೇಕ ಎಲ್ಲ ಸಿನಿಮಾಗಳ ಕಥೆ ಮುಗಿದು ಹೋದಂತೆ, ಎಂಬ ಸುದ್ದಿಯನ್ನ ಅವರ ವಿರೋಧಿಗಳು ಈಗ ಹಬ್ಬಿಸುತ್ತಿದ್ದಾರೆ.
'ಡೆವಿಲ್' ಸಿನಿಮಾ ನಿಂತೇ ಹೋಯ್ತಾ?
ದರ್ಶನ್ ತೂಗುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ 'ಡೆವಿಲ್' ಆಗಿದ್ದು, ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ 'ಡೆವಿಲ್' ಸಿನಿಮಾ ಮಾಡಲಾಗುತ್ತಿದೆ. ಹೀಗೆ ದರ್ಶನ್ ತೂಗುದೀಪ್ ಅವರು ಕೂಡ ಡೆವಿಲ್ ಸಿನಿಮಾ 2024ರ ಡಿಸೆಂಬರ್ ಒಳಗಾಗಿ, ರಿಲೀಸ್ ಮಾಡಲು ಸಿದ್ಧತೆಯನ್ನ ನಡೆಸಿದ್ದರು ಎನ್ನಲಾಗಿತ್ತು. ಈ ಸಮಯದಲ್ಲೇ ರೇಣುಕಾ ಸ್ವಾಮಿ ಕೊಲೆ ಮಾಡಿರುವ ಆರೊಪದ ಮೇಲೆ ದರ್ಶನ್ ತೂಗುದೀಪ್ & ಗ್ಯಾಂಗ್ ಅರೆಸ್ಟ್ ಕೂಡ ಆಗಿದೆ.
'ಡೆವಿಲ್' ಸಿನಿಮಾ ಶೂಟಿಂಗ್ ನಿಂತು ಹೋಗಿದ್ದು, ಸಿನಿಮಾ ರಿಲೀಸ್ ಆಗುವುದೇ ಇಲ್ಲ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ 'ಡೆವಿಲ್' ಸಿನಿಮಾ ನಿರ್ಮಾಪಕರು ಮಾತ್ರ ಎಷ್ಟೇ ವರ್ಷ ಕಳೆದರೂ ಈ ಸಿನಿಮಾ ಹಾಗೇ ಇರುತ್ತದೆ ಎಂದಿದ್ದಾರೆ. ಹೀಗಾಗಿ ನಮ್ಮ ಬಾಸ್ ಹೊರಗೆ ಬರಲಿ ತೋರಿಸುತ್ತೀವಿ ಅಂತಾ ಈ ಸಮಯದಲ್ಲಿ ದರ್ಶನ್ ಅವರ ಅಭಿಮಾನಿಗಳು ಕಮೆಂಟ್ ಹಾಕಿ ವಿರೋಧಿಗಳಿಗೆ ಚಾಲೆಂಜ್ ಹಾಕುತ್ತಿದ್ದಾರೆ. ಹೀಗಾಗಿ ಕನ್ನಡ ಸಿನಿಮಾ ರಂಗದಲ್ಲೇ ಸಂಚಲನ ಇದೀಗ ಸೃಷ್ಟಿಯಾಗಿದೆ.
ದರ್ಶನ್ ಬೆನ್ನಿಗೆ ಹೊಸ ಕಂಟಕ?
ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.












Click it and Unblock the Notifications