Bigg Boss: ತೆಲುಗು ಬಿಗ್‌ಬಾಸ್‌ನಲ್ಲಿ ಕನ್ನಡ ಕಂಪು; ವಿಡಿಯೋ ವೈರಲ್

ಒಂದು ಕಡೆ ಕನ್ನಡ ಬಿಗ್ ಬಾಸ್ ಈ ಬಾರಿ ಅನೇಕ ಕಾರಣಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಮತ್ತೊಂದು ಕಡೆ ತೆಲುಗು ಭಾಷೆಯಲ್ಲಿ ಕೂಡ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಿದ್ದು ಸಖತ್ ಸದ್ದು ಮಾಡುತ್ತಿದೆ. ತೆಲುಗು ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ನಾಲ್ವರು ಕನ್ನಡಿಗರು ಸ್ಪರ್ಧಿಗಳಾಗಿದ್ದಾರೆ. ಈಗ ತೆಲುಗು ಬಿಗ್ ಬಾಸ್‌ ಕಾರ್ಯಕ್ರಮದಲ್ಲಿ ಕನ್ನಡ ಕಂಪು ಕೇಳಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ತೆಲುಗು ಬಿಗ್‌ ಬಾಸ್ ಶೋನಲ್ಲಿ ಕನ್ನಡದ ನಟ, ಮೈಸೂರು ಮೂಲಕ ನಿಖಿಲ್ ಮಳಿಯಕ್ಕಲ್ ಸ್ಪರ್ಧಿಯಾಗಿದ್ದಾರೆ. ಇತ್ತೀಚೆಗೆ ಬಿಗ್‌ ಬಾಸ್‌ನಲ್ಲಿರುವ ನಿಖಲ್‌ಗೆ ತಾಯಿ ಪತ್ರ ಬರೆದಿದ್ದು, ಅಮ್ಮನ ಪತ್ರವನ್ನು ಓದಿದ ಮಗ ಭಾವುಕರಾಗಿದ್ದಾರೆ.

Kannada speaking in bigg boss telugu 8 show

ಬಿಗ್ ಬಾಸ್ ಮನೆಗೆ ಹೋಗಿದ್ದ ನಿಖಿಲ್ ಹಲವು ದಿನಗಳಿಂದ ತಾಯಿಯನ್ನು ನೋಡಲು ಸಾಧ್ಯವಾಗದ್ದಕ್ಕೆ ಬೇಸರಗೊಂಡಿದ್ದರು. ನಿಮ್ಮನ್ನು ನೋಡಲು ಇರಲು ಆಗುತ್ತಿಲ್ಲ ಎಂದು ಪತ್ರವನ್ನು ಕೂಡ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ನಿಖಿಲ್ ತಾಯಿ ಕೂಡ ಪತ್ರ ಬರೆದಿದ್ದು, ಇದನ್ನು ಶೋನಲ್ಲಿ ಪ್ರದರ್ಶಿಸಲಾಯಿತು.

ನೀನು ಈಗ ಹೇಗಿದಿಯಾ ಹಾಗೇ ಇರು, ಬೇರೆಯವರಿಗಾಗಿ ಬದಲಾಗಬೇಡ, ಭಾವುಕನಾಗಬೇಡ. ಎಲ್ಲರೂ ನಿನ್ನ ಜೊತೆ ಸ್ಪರ್ಧೆಯಲ್ಲಿದ್ದಾರೆ. ನೀನು ಆಡುತ್ತಿರುವ ರೀತಿ ನನಗೆ ತುಂಬಾ ಇಷ್ಟ ಆಗುತ್ತಿದೆ. ನೀನು ಕಪ್ ಎತ್ತುವುದನ್ನು ನೋಡಲು ಕಾಯುತ್ತಿದ್ದೇವೆ, ಐ ಲವ್‌ ಯೂ ಕಂದಾ ಎಂದು ಹೇಳಿದ್ದಾರೆ. ಈ ಪತ್ರವನ್ನು ಪ್ರೇರಣಾ ಕಂಬಂ ಓದಿ ಹೇಳಿದ್ದು, ನಿಖಿಲ್ ಭಾವುಕರಾಗಿದ್ದಾರೆ, ಪತ್ರ ಓದುವ ಸಂದರ್ಭದಲ್ಲಿ ಇತರೆ ಸ್ಪರ್ಧಿಗಳು ಕೂಡ ಸ್ವಲ್ಪ ಹೊತ್ತು ಭಾವುಕರಾದರು.

ನಿಖಿಲ್ ಜೊತೆ ಈ ಬಿಗ್ ಬಾಸ್‌ನಲ್ಲಿರುವ ಪ್ರೇರಣಾ ಕಂಬಂ, ಪೃಥ್ವಿರಾಜ್ ಶೆಟ್ಟಿ ಮತ್ತು ಯಶಮಿ ಗೌಡ ಕೂಡ ಇದ್ದು ಇವರೆಲ್ಲರೂ ಕನ್ನಡದವರು ಎನ್ನುವುದು ಮತ್ತೊಂದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+