Ramji: ಪುಟ್ಟಗೌರಿ ಮದುವೆ ಡೈರೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದಿಢೀರ್ ದೂರು ನೀಡಿದ್ಯಾಕೆ ರಾಮ್ ಜೀ?
ಇತ್ತೀಚಿಗೆ ಮನೋರಂಜನಾ ಕ್ಷೇತ್ರದ ಯಶಸ್ಸಿನಲ್ಲಿ ಸಿನಿಮಾಗಳಷ್ಟೇ ಕಿರುತೆರೆ ಕೂಡ ಸಿಂಹಪಾಲು ಪಡೆದುಕೊಂಡಿದೆ. ಕಿರುತೆರೆಯ ಕಾರ್ಯಕ್ರಮಗಳು, ಧಾರಾವಾಹಿಗಳು ಕೋಟ್ಯಂತರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಇಂತಹ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಳಿಸುವುದು ಅಷ್ಟು ಸುಲಭವಲ್ಲ, ಅದರಲ್ಲೂ ಆಫ್ ಸ್ಕ್ರೀನ್‌ಗಳಲ್ಲಿದ್ದುಕೊಂಡು ಜನರಿಗೆ ಪರಿಚಿತರಾಗುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕನ್ನಡ ಕಿರುತೆರೆಯ ಕೆಲ ನಿರ್ದೇಶಕರು ಜನರಿಗೆ ಚಿರಪರಿಚಿತರಾಗಿದ್ದು, ಈ ಪೈಕಿ ರಾಮ್ ಜೀ ಕೂಡ ಒಬ್ಬರು.
ಪುಟ್ಟಗೌರಿ ಮದುವೆ, ಗೀತಾ, ಅಕ್ಕ, ರಾಮಾಚಾರಿ, ನಾಗಿಣಿ 2ಯಂತಹ ಮೆಗಾ ಹಿಟ್ ಧಾರಾವಾಹಿಗಳನ್ನು ಕನ್ನಡ ಕಿರುತೆರೆಗೆ ನೀಡಿದ ಕೀರ್ತಿ ರಾಮ್ ಜೀಗೆ ಸಲ್ಲುತ್ತದೆ. ಹೀಗಾಗಿ ಕನ್ನಡ ಕಿರುತೆರೆ ಲೋಕದಲ್ಲಿ ರಾಮ್ ಜೀ ಸಿಕ್ಕಾಪಟ್ಟೆ ಜನಪ್ರಿಯ ವ್ಯಕ್ತಿ. ಆದರೆ ಇದೀಗ ಇದೇ ರಾಮ್ ಜೀ ವಿರುದ್ಧ ಗಂಭೀರವಾದ ಆರೋಪವೊಂದು ಕೇಳಿ ಬರುತ್ತಿದ್ದು, ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರಾಮ್ ಜೀ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ.

ರಾಮ್ ಜೀ ಧಾರಾವಾಹಿಗಳಲ್ಲಿ ನಟಿಸುವ ಅವಕಾಶವೆಂದರೆ ಅದು ನಟ ಅಥವಾ ನಟಿಗೆ ಗೋಲ್ಡನ್ ಅವಕಾಶ ಅಂತಾನೇ ಹೇಳಬಹುದು. ಹೀಗಾಗಿ ಅನೇಕರು ರಾಮ್ ಜೀ ಧಾರಾವಾಹಿಗಳ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ರಾಮ್ ಜೀ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಮೋಸ ಮಾಡಿದ್ದಾರೆ. ಯುವತಿಗೆ ಅನ್ಯಾಯವಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು.
ನಿರ್ಮಾಪಕ ರಾಮ್ ಜೀ ಹೆಣ್ಣುಮಕ್ಕಳಿಗೆ ಧಾರಾವಾಹಿಯಲ್ಲಿ ಅವಕಾಶ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಈ ಆರೋಪಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ರಾಮ್ ಜೀ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿತ್ತು. ಈ ಇಲ್ಲಸಲ್ಲದ ಆರೋಪಗಳ ವಿರುದ್ಧ ಬೇಸತ್ತ ರಾಮ್ ಜೀ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಾಮ್ ಜೀ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ಎಫ್‌ಐಆರ್ ಕೂಡ ದಾಖಲಾಗಿದ್ದು, ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ರಾಮ್ ಜೀ ವಿರುದ್ಧದ ಆರೋಪವೇನು?
ರಾಮ್ ಜೀ ನಟಿಸಲು ಅವಕಾಶ ಕೇಳಿಕೊಂಡು ತನ್ನನ್ನು ಲೈಂಗಿಕವಾಗಿ ಬಳಿಸಿಕೊಂಡು ಮೋಸ ಮಾಡಿದ್ದಾರೆ ಎನ್ನುವುದು ಅಪರಿಚಿತ ಯುವತಿಯ ಆರೋಪ. ಈ ವಿಚಾರದಲ್ಲಿ ಯುವತಿಗೆ ಯಾರ ಬೆಂಬಲವೂ ಸಿಕ್ಕಿಲ್ಲ. ಆದರೆ ಸುದ್ದಿ ಪ್ರಸಾರ ಮಾಡದಂತೆ ರಾಮ್ ಜೀ ನ್ಯಾಯಾಲಯದ ಮೊರೆ ಹೋಗಿ ಕಾರ್ಯಕ್ರಮ ತಡೆ ತಂದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು.

Exposing_Ram ji ಎಂಬ ಇನ್ಸ್ಟಾ ಗ್ರಾಮ್ ಖಾತೆ ಸೃಷ್ಟಿ ಮಾಡಿ ಈ ಒಂದು ಪೇಜ್ ಮೂಲಕ ರಾಮ್ ಜೀ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಆ ಪೋಸ್ಟ್‌ಗಳನ್ನು ಡಿಲೀಟ್ ಮಾಡಿಸಿ ಈ ರೀತಿ ಅಪಪ್ರಚಾರ ಮಾಡಿದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ರಾಮ್ ಜೀ ದೂರು ದಾಖಲಿಸಿದ್ದಾರೆ.












Click it and Unblock the Notifications