ಕಿಚ್ಚ ಸುದೀಪ್‌ ಪರಿಚಯಿಸಿದ ನಟಿ ರಿಯಲ್‌ ಲೈಫ್‌ನಲ್ಲಿ ಗೋಲ್ಡ್‌ ಸ್ಮಗ್ಲರ್‌ ಆಗಿದ್ದೇಗೆ?

ಬೆಂಗಳೂರು, ಮಾರ್ಚ್ 05: ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ನಟ ಕಿಚ್ಚ ಸುದೀಪ್‌ ಅಭಿನಯದ ಮಾಣಿಕ್ಯ ಸಿನಿಮಾದ ನಟಿ ರನ್ಯಾ ರಾವ್‌ನನ್ನು ಬಂಧಿಸಲಾಗಿದೆ. ದುಬೈನಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ 14.8 ಕೆ.ಜಿ ಚಿನ್ನಾಭರಣ ಅಕ್ರಮವಾಗಿ ತಂದಿದ್ದ ರನ್ಯಾ ರಾವ್‌ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 03 ಸೋಮವಾರ ತಡರಾತ್ರಿ ಬಂಧಿಸಲಾಗಿದೆ.

ಗಲ್ಫ್ ರಾಷ್ಟ್ರಕ್ಕೆ ರನ್ಯಾ ರಾವ್‌ ಆಗಾಗ ಪ್ರಯಾಣಿಸುತ್ತಿದ್ದ ಕಾರಣ ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್‌ ಕಸ್ಟಮ್ಸ್ ಡಿಆರ್ಐ ತಂಡದ ಅಧಿಕಾರಿಗಳು ಅವರ ಮೇಲೆ ನಿಗಾ ವಹಿಸಿದ್ದರು. ರನ್ಯಾ ರಾವ್‌ 2025 ಆರಂಭದಿಂದ ಈವರೆಗೂ ಅವರು 10ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಗಳನ್ನು ಮಾಡಿದ್ದು, 15 ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿದ್ದಾರೆ. ಇದರಿಂದ ತೀವ್ರ ಅನುಮಾನಗೊಂಡ ಡಿಆರ್ಐ ಅಧಿಕಾರಿಗಳು ಖಚಿತ ಮಾಹಿತಿ ಮೆರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ನಟಿ ವಿಮಾನದಿಂದ ಇಳಿಯುತ್ತಿದ್ದಂತೆ ವಶಕ್ಕೆ ಪಡೆದಿದ್ದರು.

Kannada Manikya Movie Heroine Ranya Rao Arrested In Gold Smuggling Case

ಮೊದಲು ನಟಿ ರನ್ಯಾ ರಾವ್‌ ಅಧಿಕಾರಿಗಳು ಪರಿಶೀಲನೆ ನಡೆಸಿದರು ಸಹ ಧೈರ್ಯವಾಗಿ ಏನೂ ಇಲ್ಲ ಎನ್ನುವಂತೆ ನಡೆದುಕೊಂಡಿದ್ದರು. ಬಳಿಕ ತೀವ್ರ ಶೋಧನೆ ನಡೆಸಿದಾಗ ಅವರು ಧರಿಸಿದ್ದ ಬೆಲ್ಟ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ ಎನ್ನಲಾಗಿದೆ. ಬಳಿಕ ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದು ಕರೆದುಕೊಂಡು ಹೋಗಿರುವ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ಚಿಕ್ಕಮಗಳೂರು ಮೂಲದ ಬೆಡಗಿ ರನ್ಯಾ ರಾವ್‌

ಮೂಲತಃ ಕರ್ನಾಟಕದ ಚಿಕ್ಕಮಗಳೂರಿನವರಾದ ರನ್ಯಾ ರಾವ್‌, ಬೆಂಗಳೂರಿನ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದು ಮುಗಿಸಿದ್ದರು. ಬಳಿಕ ನಟನೆಯತ್ತ ಒಲವು ತೋರಿದ ರನ್ಯಾ ರಾವ್‌, 2014ರಲ್ಲಿ ಕಿಚ್ಚ ಸುದೀಪ್ ನಿರ್ದೇಶಿಸಿದ ಮತ್ತು ನಟಿಸಿದ ಮಾಣಿಕ್ಯ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟರು. ಬಳಿಕ ತಮಿಳು ಚಿತ್ರರಂಗತ್ತ ಮುಖ ಮಾಡಿದ್ದ ರನ್ಯಾ ರಾವ್‌, ಮತ್ತೆ ಕನ್ನಡದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಪಟಾಕಿ ಚಿತ್ರದಲ್ಲಿ ನಟಿಸಿದ್ದರು.

Kannada Manikya Movie Heroine Ranya Rao Arrested In Gold Smuggling Case

ರನ್ಯಾ ರಾವ್‌ ಕರ್ನಾಟಕದ ಡಿಜಿಪಿ ರಾಮಚಂದ್ರ ರಾವ್‌ ಅವರ ಮಗಳಾಗಿದ್ದು, ತಂದೆ ಆಕೆಯ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಜತಿನ್‌ ಹುಕ್ಕೇರಿ ಎನ್ನುವವರನ್ನು ವಿವಾಹವಾಗಿರುವ ರನ್ಯಾ ರಾವ್‌, ಜನಪ್ರಿಯ ರಾಜಕಾರಣಿಯೊಬ್ಬರ ಮನೆಯ ಸೊಸೆ. ಮದುವೆಯ ಬಳಿಕ ರನ್ಯಾ ರಾವ್‌ ತವರಿನ ಕುಟುಂಬದವರ ಜೊತೆ ಸಂಪರ್ಕದಲ್ಲಿ ಇಲ್ಲ ಎನ್ನಲಾಗಿದೆ.

ಸದ್ಯ ನಟಿಯನ್ನು ಬಂಧಿಸಿರುವ ಕಸ್ಟಮ್ಸ್ ಡಿಆರ್ಐ ತಂಡದ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ನಟಿ ರನ್ಯಾ ರಾವ್‌ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ ಕೂಡ ಪ್ರವೇಶಿಸಿದ್ದು, ED ಅಧಿಕಾರಿಗಳು ನಟಿ ಹಾಗೂ ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+