ಕನ್ನಡ ಸಿನಿಮಾ ಇಂಡಸ್ಟ್ರಿಗೆ 2026 ಭರ್ಜರಿ ಸ್ಪೆಷಲ್, ಕಾರಣ ತಿಳಿಯಿರಿ... Kannada Films

ಕನ್ನಡ ಸಿನಿಮಾ ರಂಗ ಇಡೀ ಜಗತ್ತಿನಲ್ಲೇ ಅತ್ಯಂತ ಹಳೆಯ ಸಿನಿಮಾ ಇಂಡಸ್ಟ್ರಿಗಳ ಪೈಕಿ ಒಂದು. ಅದರಲ್ಲೂ 100 ವರ್ಷ ಪೂರೈಸಲು ಸಜ್ಜಾಗಿರುವ ಕನ್ನಡ ಸಿನಿಮಾ ರಂಗದಲ್ಲಿ ಈಗ ಸಂಭ್ರಮ & ಸಡಗರ ಮೇಳೈಸಿದೆ. ಕೆಜಿಎಫ್ ಮತ್ತು ಕಾಂತಾರ ಸೇರಿದಂತೆ ಸಾಲು ಸಾಲು ಇಂಡಸ್ಟ್ರಿ ಹಿಟ್ ಆದ ಸಿನಿಮಾಗಳು ಅಭಿಮಾನಿಗಳ ಹೃದಯ ಗೆದ್ದಿವೆ. ಹೀಗೆ ಕನ್ನಡ ಸಿನಿಮಾ ಅಭಿಮಾನಿಗಳ ಕುತೂಹಲದ ಕಟ್ಟೆ ಒಡೆದಿದ್ದು, ಮತ್ತಷ್ಟು ಉತ್ತಮ ಸಿನಿಮಾಗಳಿಗೆ ಅಂತಾ ಕನ್ನಡಿಗರು ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ 2026 ಭರ್ಜರಿ ಸ್ಪೆಷಲ್ ಆಗಿರಲಿದೆ.

ಭಾರತೀಯ ಚಿತ್ರರಂಗ ಮಾತ್ರವಲ್ಲ, ಜಗತ್ತು ತಿರುಗಿ ನೋಡುವಂತೆ ನಮ್ಮ ಕನ್ನಡ ಸಿನಿಮಾಗಳು ಸೌಂಡ್ ಮಾಡುತ್ತಿವೆ. ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಈಗ ಕನ್ನಡ ಸಿನಿಮಾ ನೋಡಿ ಎಂಜಾಯ್ ಮಾಡುವ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. ಹೀಗಿದ್ದಾಗ ರಾಕಿಂಗ್ ಸ್ಟಾರ್ ಯಶ್ ಅವರ ಹಾಲಿವುಡ್ ಲೆವೆಲ್ ಸಿನಿಮಾ ಟಾಕ್ಸಿಕ್ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ.

Kannada Film Industry Is Waiting For Several Big Budget Movies In 2026

ಈ ಮೂಲಕ 2026ರ ಆರಂಭದಲ್ಲೇ ಕನ್ನಡ ಸಿನಿಮಾ ರಂಗ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿ ಬಾಕ್ಸ್ ಆಫಿಸ್ ದಾಖಲೆ ಪುಡಿ ಪುಡಿ ಮಾಡಲು ಸಜ್ಜಾಗಿದೆ. ಇದರ ಜೊತೆಗೆ ಇನ್ನೂ ಹಲವಾರು ಸಿನಿಮಾಗಳು ರಿಲೀಸ್ ಆಗಲಿದ್ದು, ಅವೆಲ್ಲವೂ ಬಿಗ್ ಬಜೆಟ್ ಸಿನಿಮಾಗಳು ಎಂಬುದು ಸ್ಪೆಷಲ್. ಅಲ್ಲದೆ ಸಾಲು ಸಾಲು ದೊಡ್ಡ ದೊಡ್ಡ ನಟರ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಈಗ ಕಾಯುತ್ತಿದ್ದಾರೆ.

2026 ಪೂರ್ತಿ ಕನ್ನಡ ಸಿನಿಮಾಗಳ ಹಬ್ಬ!

ಹೌದು, ಕನ್ನಡ ಸಿನಿಮಾಗಳ ಬೆಳವಣಿಗೆ ಇಂಡಸ್ಟ್ರಿಗೆ ಹೊಸ ಶಕ್ತಿ ತುಂಬುವ ಜೊತೆಗೇ ಕನ್ನಡದ ಕಲಾವಿದರಿಗೆ ಬೇರೆ ಬೇರೆ ಭಾಷೆಗಳಲ್ಲೂ ಭರ್ಜರಿ ಡಿಮ್ಯಾಂಡ್ ಕೂಡ ಕ್ರಿಯೇಟ್ ಮಾಡಿ ಗಮನ ಸೆಳೆಯುತ್ತಿದೆ. 2025ರ ಡಿಸೆಂಬರ್ ತಿಂಗಳು ಕನ್ನಡ ಸಿನಿಮಾ ರಂಗಕ್ಕೆ ಸಿಕ್ಕಾಪಟ್ಟೆ ಸ್ಪೆಷಲ್ ಆಗಿತ್ತು, ಘಟಾನುಘಟಿ ಹೀರೋಗಳ ಸಿನಿಮಾ ರಿಲೀಸ್ ಆಗಿದ್ದವು. ನಟ ದರ್ಶನ್ ತೂಗುದೀಪ್, ನಟ ಸುದೀಪ್ ಅವರ ಸಿನಿಮಾ ರಿಲೀಸ್ ಆಗಿದ್ದವು. ಹಾಗೇ ನಟ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರು ಒಟ್ಟಿಗೆ ನಟಿಸಿದ್ದ ಸಿನಿಮಾಗಳು ಅಬ್ಬರಿಸಿವೆ. ಇದೇ ಅಬ್ಬರ 2026 ರಲ್ಲಿ ಕೂಡ ಮುಂದುವರಿಯುವ ನಿರೀಕ್ಷೆ ಇದೆ.

ದೊಡ್ಡ ದೊಡ್ಡ ಸಿನಿಮಾಗಳು ರೆಡಿ!

ಟಾಕ್ಸಿಕ್ ಸಿನಿಮಾ ನಂತರ ಧ್ರುವ ಸರ್ಜಾರ ಅವರ ಬಿಗ್ ಬಜೆಟ್ ಸಿನಿಮಾ ಕೆಡಿ ರಿಲೀಸ್ ಆಗಲಿದೆ. ಆ ನಂತರ ಡಾಲಿ ಧನಂಜಯ್ & ನಟ ಶಿವರಾಜ್‌ಕುಮಾರ್ ಅವರ ನಟನೆಯ 666 ಆಪರೇಷನ್ ಡ್ರೀಮ್ ಥಿಯೇಟರ್ ಕೂಡ ಅಬ್ಬರಿಸಲು ಸಜ್ಜಾಗುತ್ತಿದೆ. ನಟ ಸುದೀಪ್ ಅವರ ಬಿಲ್ಲ ರಂಗ ಭಾಷ ಕೂಡ ತೀವ್ರ ಕುತೂಹಲ ಕೆರಳಿಸಿದೆ. ಇದರ ಜೊತೆಗೆ ಹೊಸಬರ ಹಲವಾರು ಸಿನಿಮಾಗಳು ಈ ವರ್ಷ ಬಾಕ್ಸ್ ಆಫಿಸ್ ಅಖಾಡದಲ್ಲಿ ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಇನ್ನುಳಿದಂತೆ ಕನ್ನಡ ಅಭಿಮಾನಿ ಬಳಗಕ್ಕೆ 2026 ಪೂರ್ತಿ ಭರ್ಜರಿ ಮನರಂಜನೆ ಗ್ಯಾರಂಟಿ ಆಗಿದೆ. ಹಾಗೇ 2026 ಡಿಸೆಂಬರ್ ವೇಳೆಗೆ ಕ್ರಿಸ್‌ಮಸ್ ರಜೆ ಸಮಯದಲ್ಲಿ ರಿಲೀಸ್ ಆಗುವ ಸಿನಿಮಾಗಳು ಯಾವುವು? ಅನ್ನೋ ಕುತೂಹಲವು ಕೂಡ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+