8 ಹುಡುಗಿಯರ ಜೊತೆ ಬ್ರೇಕಪ್ ಆಗಿದೆ: ಲವ್‌ಸ್ಟೋರಿ ರಿವೀಲ್ ಮಾಡಿದ "ಅಣ್ಣಯ್ಯ" ಸೀರಿಯಲ್ ನಟ
ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ "ಅಣ್ಣಯ್ಯ" ಕೂಡ ಒಂದು. ಇದರಲ್ಲಿರುವ ಪಾತ್ರಗಳು ಕೂಡ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಮುಖ್ಯ ಪಾತ್ರಗಳಲ್ಲಿ ವಿಕಾಸ್ ಉತ್ತಯ್ಯ ಹಾಗೂ ನಿಶಾ ರವಿಕೃಷ್ಣನ್ ಮಿಂಚುತ್ತಿದ್ದರೆ, ಸಹ ಪೋಷಕ ಪಾತ್ರಗಳು ಕೂಡ ಗಮನ ಸೆಳೆಯುತ್ತಿವೆ. ಇದರಲ್ಲಿ 'ಜಿಮ್ ಸೀನಾ' ಪಾತ್ರ ಕೂಡ ಒಂದು. ಸುಷ್ಮಿತ್ ಜೈನ್ ಅವರು ಅಣ್ಣಯ್ಯ ಸೀರಿಯಲ್‌ನಲ್ಲಿ ಜಿಮ್ ಸೀನಾ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದು, ತಮಗೆ ಇಲ್ಲಿವರೆಗೆ 8 ಗರ್ಲ್ ಫ್ರೆಂಡ್ಸ್ ಇದ್ದಿದ್ದು ಹಾಗೂ ಅವರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದೇಕೆ? ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
'ಹೆಣ್ಣುಮಕ್ಕಳಿಗೆ ಈಗೆಲ್ಲ ಊಸರವಳ್ಳಿ, ಹಾಗೇ ಹೀಗೆ ಅಂತೆಲ್ಲ ಬೇರೆ ಬೇರೆ ಹೆಸರುಗಳಿಂದ ಕರೆಯುವ ಜನರಿದ್ದಾರೆ. ಆದರೆ ಹೆಣ್ಣುಮಕ್ಕಳು ಯಾವಾಗಲೂ ಗಂಡು ಮಕ್ಕಳನ್ನು ಹೆಚ್ಚು ನಿಯತ್ತಾಗಿರುವ ಪ್ರಾಣಿಗಳಿಗೆ ಹೋಲಿಕೆ ಮಾಡ್ತಾರೆ. ಕಷ್ಟಪಡುವ ಕತ್ತೆ, ಆಂಜನೇಯ ಸ್ವಾಮಿಯ ಕೋತಿ, ನಿಯತ್ತಿನ ನಾಯಿ ಅಂತೆಲ್ಲ ಕರೀತಾರೆ' ಎಂದು ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸುಷ್ಮಿತ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

'ನನಗೂ ತುಂಬಾ ಜನ ಎಕ್ಸ್ ಗರ್ಲ್‌ಫ್ರೆಂಡ್ಸ್ ಇದ್ರು. ಈಗ ಅವರೆಲ್ಲ ಒಳ್ಳೊಳ್ಳೆ ಸಿನಿಮಾ, ಸೀರಿಯಲ್ ಕೂಡ ಮಾಡ್ತಿದ್ದಾರೆ. ಅವರ ಹೆಸರನ್ನ ಕೇಳಬೇಡಿ. ಅದರಲ್ಲಿ ಒಂದಷ್ಟು ಮಂದಿ ತುಂಬಾ ಶ್ರೀಮಂತರನ್ನ ಮದುವೆಯೂ ಆಗಿದ್ದಾರೆ. ಪರವಾಗಿಲ್ಲ, ನಾನಿನ್ನೂ ರೇಸ್‌ನಲ್ಲಿದ್ದೀನಿ. ಮುಂದೆ ಒಂದು ದಿನ ಅವರೆಲ್ಲರೂ ನನ್ನ ಜೊತೆ ನಟಿಸುವ ಪರಿಸ್ಥಿತಿಯೂ ಬರುತ್ತೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಪ್ಪು ಒಬ್ಬರದ್ದಲ್ಲ
'ಅವರೆಲ್ಲ ನನಗೆ ಮೋಸ ಮಾಡಿದ್ರು ಅಂತ ಬ್ಲೇಮ್ ಮಾಡಲ್ಲ. ಅದೆಲ್ಲ ಒಂದು ಟೈಮ್ ಅಷ್ಟೇ. ಅದರಲ್ಲಿ ತಪ್ಪು ಅವರದ್ದು, ನಂದು ಅಂತ ಹೇಳೋಕಾಗಲ್ಲ. ಕೆಲವು ಬಾರಿ ಇಬ್ಬರದ್ದೂ ತಪ್ಪಿರುತ್ತೆ. ನನಗೆ ಅವರಲ್ಲಿ ಏನೋ ಇಷ್ಟ ಆಗಿರಲ್ಲ. ಅವರಿಗೆ ನನ್ನಲ್ಲಿ ಏನೋ ಇಷ್ಟವಾಗಿರಲ್ಲ. ಹಾಗಾಗಿ ಬಿಟ್ಟು ಹೋಗ್ತಾರೆ ಅಂದ್ರೆ ಎರಡೂ ಕಡೆಯಿಂದ ತಪ್ಪು ಇದ್ದೇ ಇರುತ್ತೆ. ಅದೆಲ್ಲ ದೊಡ್ಡ ವಿಷಯ ಅಲ್ಲ' ಎಂದು ಲೈಟಾಗಿ ತೆಗೆದುಕೊಂಡಿದ್ದಾರೆ.
ತಪ್ಪು ಹೆಣ್ಣುಮಕ್ಕಳದ್ದೇ ಜಾಸ್ತಿ!
'ಒಂದು ಬಾರಿ ಮಣ್ಣು ತಿಂದ ಮೇಲೆ, ಮತ್ತೆ ಆ ತಪ್ಪು ಮಾಡಬಾರದು. ನನಗೆ ಈವರೆಗೆ 8 ಗರ್ಲ್‌ಫ್ರೆಂಡ್ಸ್ ಇದ್ರು. ಅದೆಲ್ಲ ಕಾಮನ್, ದೊಡ್ಡ ವಿಷಯವಲ್ಲ. ಈ ವಿಚಾರದಲ್ಲಿ ನಾನು ಲಕ್ಕಿ ಅಂತಾನೇ ಹೇಳಬಹುದು. ಏಕೆಂದರೆ ಪ್ರತಿ ಬಾರಿ ಇದರಿಂದ ಹೊರಗೆ ಕರೆತರಲು, ಮೋಟಿವೇಶನ್‌ಗೆ ಒಳ್ಳೆಯ ಫ್ರೆಂಡ್ಸ್ ಕೂಡ ನನ್ನೊಂದಿಗೆ ಇದ್ರು ಎಂದಿದ್ದಾರೆ. 8 ಜನ ಗರ್ಲ್‌ಫ್ರೆಂಡ್ಸ್ ಕೂಡ ವಿಭಿನ್ನ ಮನಸ್ಥಿತಿ ಹೊಂದಿದ್ರು. ಹಾಗಾಗಿ ಪ್ರತಿ ಹುಡುಗಿಯ ಮನಸ್ಥಿತಿ ತಿಳಿದಾಗ ಮುಂದೆ ಬರುವ ಹುಡುಗಿಗೆ ಅನುಕೂಲವಾಗ್ತಿತ್ತು. ಇಲ್ಲಿ ತಪ್ಪು ಹೆಣ್ಣುಮಕ್ಕಳದ್ದೇ ಅಂತ ಹೇಳಲ್ಲ. ಗಂಡು ಮಕ್ಕಳೂ ತಪ್ಪು ಮಾಡ್ತಾರೆ. ಆದರೆ ಜಾಸ್ತಿ ಅಂದ್ರೆ ಹೆಣ್ಣುಮಕ್ಕಳದ್ದೇ ತಪ್ಪಿರುತ್ತೆ' ಎಂದು ವಾದಿಸಿದ್ದಾರೆ.
ಮೂಲತಃ ಮೈಸೂರಿನವರಾದ ಸುಷ್ಮಿತ್, ಮೆಕ್ಯಾನಿಕ್ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಸದ್ಯ ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಸತ್ಯಂ ಶಿವಂ ಸುಂದರಂ, ಭೂಮಿ ತಾಯಾಣೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಸುಷ್ಮಿತ್ ಗಮನ ಸೆಳೆದಿದ್ದರು. ಮನಸೆಲ್ಲಾ ಧಾರಾವಾಹಿಯಲ್ಲಿ ವಿಲನ್ ಪಾತ್ರ ಕೂಡ ಮಾಡಿದ್ದರು.












Click it and Unblock the Notifications