ವಿಷ ಹಾಕಿದ ಪಾಪ ಯಾರ ಖಾತೆಗೆ? ಮಾಸ್ಟರ್‌ ಆನಂದ್ ಕಥೆಯಲ್ಲೇ ತಿವಿದದ್ದು ಯಾರನ್ನು?

ನನ್ನ ಬದುಕು ಬದಲಿಸಿದ ಅನೇಕ ಕಥೆಗಳಿವೆ. ಅವುಗಳನ್ನು ನಾನು ಪಾಠವಾಗಿ ತೆಗೆದುಕೊಂಡಿದ್ದೇನೆ. ಯಾರೋ ಕೆಟ್ಟ ಕಮೆಂಟ್ಸ್‌ ಮಾಡುತ್ತಾರೆ. ಕೆಟ್ಟದಾಗಿ ಮಾತನಾಡುತ್ತಾರೆ. ಎನೋ ಅನ್ನುತ್ತಾರೆ ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದಿರುವ ಕನ್ನಡದ ಖ್ಯಾತ ನಿರೂಪಕ ಮಾಸ್ಟರ್‌ ಆನಂದ್‌ ರಾಜನ ಅನ್ನದಾನದ ಕಥೆಯೊಂದನ್ನು ಹೇಳುವ ಮೂಲಕ ಕೆಟ್ಟ ಕಮೆಂಟ್‌ ಹಾಕುವವರಿಗೆ ತಿರುಗೇಟು ಕೊಟ್ಟಿದ್ದಾರೆ.

Rapid Rashmi ಯೂಟ್ಯೂಬ್ ಚಾನೆಲ್‌ ಜೊತೆಗೆ ಮಾತನಾಡಿದ ಅವರು, 'ಈ ಕಥೆ ಎಲ್ಲರಿಗೂ ಗೊತ್ತಿರಬಹುದು. ಒಂದು ಹಾವು ಸತ್ತು ಹೋಗಿರುತ್ತದೆ. ಅದನ್ನು ಗರುಡ ಎತ್ತಿಕೊಂಡು ಮೇಲೆ ಹಾರುತ್ತಿರುತ್ತದೆ. ಹೀಗಾಗಿ ಹಾವಿನ ವಿಷ ಕೆಳಗೆ ಸೋರುತ್ತಿರುತ್ತದೆ. ಕೆಳಗೆ ಒಬ್ಬ ರಾಜ ಸಾವಿರಾರು ಜನರಿಗೆ ಅಡುಗೆ ಮಾಡಿಸುತ್ತಿದ್ದ. ಅವನಿಗೆ ಅಡುಗೆ ಮಾಡಿಸಿ ಅನ್ನದಾನ ಮಾಡುವುದೆಂದರೆ ಖುಷಿ ಇರುತ್ತದೆ'.

Kannada Anchor Master Anand Told Poison Story Related To Bad Comments

'ಅದೊಂದು ಸ್ಥಳಕ್ಕೆ ಯಾರೇ ಬಂದರೂ ಹಸಿದವರು ಊಟ ಮಾಡಿ ವಿಶ್ರಾಂತಿ ಪಡೆದು ಹೋಗುತ್ತಿರುತ್ತಾರೆ. ಆ ಒಂದು ದಿನ ಮೇಲೆ ಹಾರುತ್ತಿದ್ದ ಗರುಡದ ಕಾಲಿನಲ್ಲಿದ್ದ ಹಾವಿನ ವಿಷ ಯಾವುದೋ ಒಂದು ಪಾತ್ರೆಗೆ ಬಿದ್ದು ಆಹಾರದಲ್ಲಿ ಮಿಶ್ರಣವಾಗುತ್ತದೆ. ಇದರಿಂದ ಒಂದಷ್ಟು ಜನರು ಒಂದೇ ದಿನ ಸತ್ತು ಹೋಗುತ್ತಾರೆ. ಈಗ ಚಿತ್ರಗುಪ್ತರು ಬಂದು ಯಮರಾಜನಲ್ಲಿ ಪ್ರಶ್ನೆ ಮಾಡುತ್ತಾರೆ. ಇಲ್ಲಿ ತಪ್ಪು ಯಾರದು? ಈ ತಪ್ಪನ್ನು ಯಾರ ಖಾತೆಗೆ ಹಾಕಲಿ ಎಂದು ಕೇಳುತ್ತಾರೆ'.

'ಹಾವನ್ನು ಎತ್ತಿಕೊಂಡು ಹೋದ ಗರುಡಾಗೆ ಹಾಕಬೇಕಾ? ಹಾವುಗೆ ಹಾಕಬೇಕಾ?, ಅಥವಾ ಮೇಲೆ ಯಾವುದೇ ರಕ್ಷಣೆ ಇರದೇ ತೆರೆದ ಜಾಗದಲ್ಲಿ ಅಡುಗೆ ಮಾಡಿದ ಅವನಿಗೆ ಹಾಕಬೇಕಾ? ಅಥವಾ ರಾಜನಾ ಖಾತೆಗೆ ಹಾಕಬೇಕಾ ಎಂದು ಚಿತ್ರಗುಪ್ತ ಪ್ರಶ್ನಿಸಿದರು. ಆಗ ಯಮಧರ್ಮ ರಾಯನಿಗೂ ಗೊಂದಲವಾಗುತ್ತದೆ. ಇದಕ್ಕೆ ಪರಿಹಾರ ನನ್ನಲ್ಲಿ ಇಲ್ಲ ಮಹಾವಿಷ್ಣು ಬಳಿಗೆ ಹೋಗಬೇಕಿಗ ಅನ್ನುತ್ತಾನೆ. ಮಹಾವಿಷ್ಣು ಮೇಲಿಂದ ಎಲ್ಲವನ್ನೂ ನೋಡಿ ಸ್ವಲ್ಪ ದಿನ ಕಾಲಾವಕಾಶ ಕೊಡಿ ಎಂದು ಕೇಳುತ್ತಾರೆ'.

Take a Poll

'ಅಲ್ಲಿ ಮುಂದೆ ಏನಾಯ್ತು ಅಂದರೆ ಊರಿನ ಹೆಬ್ಬಾಗಿಲಿನಲ್ಲಿ ಅಜ್ಜಿಯೊಂದು ಎಲೆ ಅಡಿಕೆ ತಿಂದುಕೊಂಡು ಕೂತಿರುತ್ತದಂತೆ. ಆ ಅಜ್ಜಿ ಬಂದವರಿಗೆಲ್ಲಾ ರಾಜ ಅಡುಗೆ ಮಾಡಿಸುತ್ತಿರುವ ಕಡೆ ಹೋಗಬೇಡಿ. ಅಲ್ಲಿ ಊಟ ಮಾಡಿ ಜನ ಸುತ್ತು ಹೋಗಿದ್ದಾರೆ ಅಂತಾ ಬಂದವರಿಗೆಲ್ಲಾ ಫಿಟ್ಟಿಂಗ್‌ ಇಡುತ್ತಿದ್ದಳಂತೆ. ಆ ಮಹಾವಿಷ್ಣು ಈ ಘಟನೆಯ ಎಲ್ಲಾ ಪಾಪವನ್ನು ಅವಳ ಖಾತೆಗೆ ಹಾಕು ಅಂತಾ ಹೇಳುತ್ತಾರಂತೆ. ಯಾಕೆಂದರೆ ಏನೂ ಗೊತ್ತಿಲ್ಲದೇ ಮಾತನಾಡುತ್ತಿದ್ದಾಳೆ ಅಂತಾ'.

'ಅಲ್ಲಿ ರಾಜನ ಉದ್ದೇಶ ಬಂದವರು ದಣಿವಾರಿಸಿಕೊಂಡು ಊಟ ಮಾಡಿ ಹೋಗಲಿ ಎನ್ನುವುದು, ಅಡುಗೆ ಮಾಡುವವನ ಉದ್ದೇಶವೂ ಸರಿ ಇತ್ತು. ಸತ್ತಿರುವ ಹಾವಿದಂತೂ ಅಪರಾಧವೇ ಅಲ್ಲ. ಗರುಡ ಅದರ ಹೊಟ್ಟೆಪಾಡು. ಇದೆಲ್ಲಾ ಗೊತ್ತಿರದೇ ಕಥೆ ಹುಟ್ಟುಹಾಕುತ್ತರಲ್ಲಾ ಅವರ ಖಾತೆ ಪಾಪದ ಲೆಕ್ಕ ಸೇರುತ್ತದೆ. ಹಾಗಾಗಿ ನಮಗೆ ಕಮೆಂಟ್ಸ್‌ ಮಾಡುವವರು ದಯವಿಟ್ಟು ಬೇಕು. ಯಾಕೆಂದರೆ ಅವರಿಗೆ ಗೊತ್ತಿಲ್ಲದೇ ಅವರು ನಮ್ಮ ಕರ್ಮವನ್ನು ಹಂಚಿಕೊಳ್ಳುತ್ತಿರುತ್ತಾರೆ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+