Ragini Dwivedi: ತುಪ್ಪದ ಹುಡುಗಿ ರಾಗಿಣಿಗೆ ಆ ಕಳಂಕದಿಂದ ಕೊನೆಗೂ ಮುಕ್ತಿ
ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ಎಂದೇ ಹೆಸರು ಪಡೆದಿರುವ ನಟಿ ರಾಗಿಣಿ ದ್ವಿವೇದಿ ಅವರಿಗೆ ಸಂಕ್ರಾಂತಿ ಶುಭದಿನದಂದೇ ಒಳ್ಳೆಯ ಸಿಹಿಸುದ್ದಿ ಸಿಕ್ಕಿದೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ರಾಗಿಣಿ ಬ್ಯುಸಿಯಾಗಿದ್ದರೂ ಅವರನ್ನು ಒಂದು ವಿಚಾರ ಇತ್ತೀಚಿನ ವರ್ಷಗಳಲ್ಲಿ ಬಹಳ ಕಾಡುತ್ತಿತ್ತು. ಇದು ಒಂದು ರೀತಿ ರಾಗಿಣಿ ಅವರಿಗೆ ಕಳಂಕವೇ ಆಗಿತ್ತು. ಆದರೆ ಕೊನೆಗೂ ಅವರು ಆ ಕಳಂಕದಿಂದ ಮುಕ್ತರಾಗಿದ್ದಾರೆ.
ಹೌದು ನಟಿ ರಾಗಿಣಿ ಅವರು ಕೆಲವು ವರ್ಷಗಳ ಹಿಂದಷ್ಟೇ ದೊಡ್ಡ ಆರೋಪವೊಂದರಲ್ಲಿ ಸಿಲುಕಿಹಾಕಿಕೊಂಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಮುಖ್ಯ ಆರೋಪಿಯೂ ಆಗಿ ರಾಗಿಣಿ ಅವರು ಜೈಲುವಾಸ ಕೂಡ ಅನುಭವಿಸಿದ್ದರು. ಕೋವಿಡ್ ಸಮಯದಲ್ಲೇ ರಾಜ್ಯದಲ್ಲಿ ಡ್ರಗ್ಸ್ ಕೇಸ್ ಕೂಡ ಸಖತ್ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಚಿತ್ರರಂಗದ ಹಲವರ ಬಗ್ಗೆ ಹೆಸರು ಕೇಳಿಬಂದಿತ್ತು.

ಆದರೆ, ವಿಧಿಯಾಟದಲ್ಲಿ ನಟಿ ರಾಗಿಣಿ ಅವರಿಗೂ ಡ್ರಗ್ಸ್ ಆರೋಪ ಸುರುಳಿಯಂತೆ ಸುತ್ತಿಕೊಂಡಿತ್ತು. ಈ ಕೇಸ್‌ನಲ್ಲಿ ರಾಗಿಣಿ ಹೆಸರು ಬಂದಿದ್ದರಿಂದ 2020ರಲ್ಲಿ ಅವರು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಈ ಪ್ರಕರಣವು ಸದ್ಯ ಇತ್ಯರ್ಥವಾಗಿದ್ದು, ರಾಗಿಣಿ ಅವರು ಈ ಪ್ರಕರಣದಲ್ಲಿ ನಿರಪರಾಧಿ ಎಂದು ತೀರ್ಪು ಬಂದಿದೆ. ನಟಿ ರಾಗಿಣಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲಿವರೆಗೆ ಸಿಗದ ಕಾರಣ ಅವರ ನಿರ್ದೋಷಿ ಎಂದು ಹೈಕೋರ್ಟ್ ಹೇಳಿದೆ. ಇದರಿಂದ ರಾಗಿಣಿ ಅವರು ಬಿಗ್ ರಿಲೀಫ್ ಪಡೆದಿದ್ದಾರೆ.
ಏನಿದು ಪ್ರಕರಣ?: ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಆರೋಪಿಗಳು ವಿಚಾರಣೆ ವೇಳೆ ಈ ದಂಧೆಯಲ್ಲಿ ಸೆಲೆಬ್ರಿಟಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಹೇಳಿದ್ದರು. ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ಡ್ರಗ್ಸ್ ಜಾಲದಲ್ಲಿ ನಟಿಯರು ಕೂಡ ನಂಟು ಹೊಂದಿದ್ದು, ಇದರಲ್ಲಿ ರಾಗಿಣಿ ಕೂಡ ಇದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪಾರ್ಟಿಗಳಲ್ಲಿ ಡ್ರಗ್ಸ್ ಬಳಕೆ ನಡೆಯುತ್ತಿತ್ತು. ಇದಕ್ಕೆ ರಾಗಿಣಿ ಕೂಡ ಅವಕಾಶ ಮಾಡಿಕೊಟ್ಟಿದ್ರು ಎಂದೆಲ್ಲ ಹೇಳಲಾಗಿತ್ತು.

ಈ ಕಾರಣಕ್ಕೆ ಎನ್ಡಿಪಿಎಸ್ ಅಡಿಯಲ್ಲಿ ರಾಗಿಣಿ ವಿರುದ್ಧ ಕೇಸ್ ದಾಖಲಾಗಿತ್ತು. ರಾಗಿಣಿ ಅವರನ್ನು ಇದೇ ಕೇಸ್‌ನಲ್ಲಿ ಬಂಧಿಸಲಾಗಿತ್ತು. ಕೆಲವು ತಿಂಗಳ ಕಾಲ ರಾಗಿಣಿ ಜೈಲುವಾಸ ಕೂಡ ಅನುಭವಿಸಿ ಬಂದಿದ್ದರು. ಈ ಪ್ರಕರಣ ಕಳೆದು ನಾಲ್ಕು ವರ್ಷಗಳಾದ ಬಳಿಕವೂ ಈ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ನಟಿ ರಾಗಿಣಿ ಅವರು ಆರೋಪದಿಂದ ಮುಕ್ತರಾಗಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಹೆಸರು ಡ್ರಗ್ಸ್ ಕೇಸ್‌ನಲ್ಲಿ ತಳುಕು ಹಾಕಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 2020ರ ಸೆಪ್ಟೆಂಬರ್ನಲ್ಲಿ ರಾಗಿಣಿ ಅವರನ್ನು ಬಂಧಿಸಲಾಗಿತ್ತು. ಅವರು ಹಲವು ದಿನ ಜೈಲಿನಲ್ಲೂ ಕೂಡ ಇದ್ದರು. ನಾಲ್ಕು ವರ್ಷಗಳ ಬಳಿಕ ಡ್ರಗ್ಸ್ ಕೇಸ್‌ನಲ್ಲಿ ರಾಗಿಣಿ ನಿರಪರಾಧಿ ಎಂಬುದು ಸಾಬೀತಾಗಿದೆ. ನಟಿಯ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಕೇಸ್ ಖುಲಾಸೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ. ಇದರಿಂದ ರಾಗಿಣಿ ಅವರು ರಿಲೀಫ್ ಆಗಿದ್ದಾರೆ.












Click it and Unblock the Notifications