Rishi: ಚೊಚ್ಚಲ ಮಗುವನ್ನು ಸ್ವಾಗತಿಸಿದ ನಟ ರಿಷಿ ದಂಪತಿ: ಮಗನಾ? ಮಗಳಾ?
ಬೆಂಗಳೂರು,ಜನವರಿ : ಕವಲುದಾರಿ ಹಾಗೂ ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಅವರು ತಂದೆಯಾದ ಖುಷಿಯಲ್ಲಿದ್ದಾರೆ. ಪತ್ನಿ ಸ್ವಾತಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ನಟ ರಿಷಿ ತಿಳಿಸಿದ್ದಾರೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ನಟ ರಿಷಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಮಗಳು ಜನಿಸಿರುವ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮಗಳ ಆಗಮನ ಖುಷಿ ಕೊಟ್ಟಿದೆ. ನಿಮ್ಮೆಲ್ಲರ ಹಾರೈಕೆ ಅವಳ ಮೇಲಿರಲಿ ಎಂದು ನಟ ರಿಷಿ ಅವರು ಬರೆದುಕೊಂಡಿದ್ದಾರೆ. ಇನ್ನೂ 2020ರಲ್ಲಿ ರಿಷಿ ಅವರು ಸ್ವಾತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈ ಅದ್ಧೂರಿಯಾಗಿ ಮದುವೆ ನಡೆದಿತ್ತು. ಆ ನಂತರ ಬೆಂಗಳೂರಿನಲ್ಲಿ ಆರತಕ್ಷತೆ ನೆರವೇರಿತ್ತು.

ನಟ ರಿಷಿ ಅವರು ತಾನು ತಂದೆಯಾಗುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಕ್ಷಣ ತಾನು ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಹೆಚ್ಚು ಕಾಲ ಕಳೆಯಬೇಕು ಎಂದು ನಟ ರಿಷಿ ತಿಳಿಸಿದ್ದಾರೆ. 2025ರ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಮನೆಗೆ ಮಹಾಲಕ್ಷ್ಮೀ ಆಗಮನವಾಗಿದ್ದು, ರಿಷಿ ಅವರ ಕುಟುಂಬ ಸಂತಸದಲ್ಲಿದೆ. ಪೋಷಕನಾಗಿ ನಾನು ಇನ್ನು ಮುಂದಿನ ದಿನಗಳಲ್ಲೂ ನನ್ನ ಕುಟುಂಬಕ್ಕಾಗಿ ದಾಕಷ್ಟು ಸಮಯವನ್ನ ಮೀಸಲಿಡಲೇಬೇಕಾಗುತ್ತದೆ ಎಂದು ಈ ಹಿಂದೆ ನಟ ರಿಷಿ ಅವರು ತಿಳಿಸಿದ್ದರು.
ಮದುವೆಯಾಗಿ 5 ವರ್ಷಗಳ ಬಳಿಕ ಈಗ ಮೊದಲ ಮಗುವಿನ ಆಗಮನದಲ್ಲಿ ನಟ ರಿಷಿ ಅವರಿದ್ದು, ನಾವು 2025 ಇನ್ನೂ ಅತ್ಯುತ್ತಮವಾಗಿರುವುದನ್ನು ನಿರೀಕ್ಷಿಸುತ್ತಿದ್ದೇವೆ. ಆಶೀರ್ವಾದ, ಕೃತಜ್ಞತೆ ಮತ್ತು ಪ್ರೀತಿಯಿಂದ ನಮ್ಮ ವಾರ್ಷಿಕೋತ್ಸವದಂದು ಇದನ್ನು ಘೋಷಿಸಲು ಮತ್ತು ನಮ್ಮ ಕುಟುಂಬದ ಹೊಸ ಸದಸ್ಯರನ್ನು ಶೀಘ್ರದಲ್ಲೇ ಸ್ವಾಗತಿಸುತ್ತಿದ್ದೇವೆ . ಇದು ನಮ್ಮ ಪ್ರಯಾಣದ ಮುಂದಿನ ದೊಡ್ಡ ಹೆಜ್ಜೆ ಮತ್ತು ನಾವು ಇನ್ನೂ ಹೆಚ್ಚು ಉತ್ಸುಕರಾಗಿರಲು ಸಾಧ್ಯವಿಲ್ಲ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಈ ಹಿಂದೆ ರಿಷಿ ಅವರು ತಿಳಿಸಿದ್ದರು, ಇದೀಗ ಸಂಕ್ರಾಂತಿ ಹಬ್ಬದ ಸಂಭ್ರಮ ಮಗಳ ಆಗಮನದಿಂದಾಗಿ ಡಬಲ್ ಆಗಿದೆ.
ಕಿರುತೆರೆಯಲ್ಲಿ ನಟನೆಯನ್ನು ಆರಂಭಿಸಿ ಬೆಳ್ಳಿತೆರೆಗೆ ಕಾಲಿಟ್ಟ ನಟ ರಿಷಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾದಲ್ಲೇ ಸಿನಿಪ್ರೇಮಿಗಳ ಗಮನ ಸೆಳೆದಿದ್ದರು. ಬೆಳ್ಳಿತೆರೆಗೆ ಬರುವ ಮೊದಲು 'ಮಹಾಪರ್ವ' ಮತ್ತು 'ಅನುರೂಪ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ರೇಡಿಯೋ ಜಾಕಿ ಆಗು ಕೂಡ ಗುರುತಿಸಿಕೊಂಡಿದ್ದರು. ಮೂಲತಃ ಮೈಸೂರಿನವರಾದ ಇಂಜಿನಿಯರಿಂಗ್ ಪದವೀಧರ ರಿಷಿ. ಸ್ವಾತಿ ಪರಶುರಾಮನ್ ಕೂಡ ಇಂಜಿನಿಯರಿಂಗ್ ಮಾಡಿದ್ದಾರೆ.












Click it and Unblock the Notifications